ಬಾಲಿವುಡ್‌ನ ಹಲವು ತಾರೆಯರು ಈಚಿನ ವರ್ಷಗಳಲ್ಲಿ ಸಸ್ಯಾಹಾರದತ್ತ ಹೊರಳಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ವೇಗನ್ ಆಹಾರ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ.
ಆಲಿಯಾ ಭಟ್
ಪ್ರಾಣಿ ಪ್ರೇಮಿಯಾಗಿರುವ ಆಲಿಯಾ ಭಟ್ ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಪರಿಸರ ಸುಸ್ಥಿರತೆ ಮತ್ತು ಸುಸ್ಥಿರ ಫ್ಯಾಷನ್‌ನ ಬಗ್ಗೆಯೂ ಒಲವು ಹೊಂದಿದ್ದಾರೆ.
ಅನುಷ್ಕಾ ಶರ್ಮಾ
ನಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ವಿರಾಟ್ ಕೊಹ್ಲಿ ಸಸ್ಯಾಹಾರಿಗಳು. ಮಾಂಸಾಹಾರದಿಂದ ದೂರವಿರುವುದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಿಸುತ್ತದೆ ಎಂದು ಶರ್ಮಾ ನಂಬುತ್ತಾರೆ.
ಸದೃಢ ಕಾಯದ ಜಾನ್ ಅಬ್ರಾಹಂ ಸಸ್ಯಾಹಾರಿ ಎಂದರೆ ಅಚ್ಚರಿಯಾದೀತು. ಆದರೆ, ನಟ ಪ್ರಾಣಿಗಳ ಹಕ್ಕುಗಳ ಬಗ್ಗೆ ನಂಬಿರುವವರು. ಬಲವಾದ ದೇಹಕ್ಕೆ ಮಾಂಸಾಹಾರ ಸೇವನೆ ಅಗತ್ಯವಿಲ್ಲ ಎಂದು ನಟ ನಂಬುತ್ತಾರೆ.
ಶಾಹಿದ್ ಕಪೂರ್
ಶಾಹಿದ್ ಕಪೂರ್ ಒಂದು ದಶಕದ ಹಿಂದೆ ಸಸ್ಯಾಹಾರಿಯಾದರು. ಬ್ರಿಯಾನ್ ಹೈನ್ಸ್ ಅವರ ತಂದೆ ಅವರಿಗೆ ಉಡುಗೊರೆಯಾಗಿ ನೀಡಿದ 'ಲೈಫ್ ಈಸ್ ಫೇರ್' ಅನ್ನು ಓದಿದ ನಂತರ ಅವರು ಸಸ್ಯಾಹಾರ ಆಯ್ಕೆ ಮಾಡಿದರು.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ ಕೂಡ ಹಲವಾರು ವರ್ಷಗಳ ಹಿಂದೆ ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದರು. ಉತ್ತಮ ಆರೋಗ್ಯಕ್ಕಾಗಿ ಅವರು ಮಾಂಸಾಹಾರ, ಸ್ವೀಟ್ಸ್ ಮತ್ತು ಆಲ್ಕೋಹಾಲ್ ಸೇವನೆ ಬಿಟ್ಟಿದ್ದಾಗಿ ಹೇಳಿದ್ದಾರೆ.
ಭೂಮಿ ಪೆಡ್ನೇಕರ್
ಲಾಕ್‌ಡೌನ್ ಸಮಯದಲ್ಲಿ ಪರಿಸರವಾದಿ ಭೂಮಿ ಪೆಡ್ನೇಕರ್ ಸಸ್ಯಾಹಾರಿಯಾದರು. ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಮಾಂಸಾಹಾರ ಅಡ್ಡಿಯಾಗುತ್ತಿದೆ ಎಂದವರು ಭಾವಿಸಿದ ಕಾರಣದಿಂದ ಅದನ್ನು ತ್ಯಜಿಸಿದರು.
ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ತೂಕ ಇಳಿಸುವ ಕಾರಣಕ್ಕೆ ಸಸ್ಯಾಹಾರಿಯಾದರು. ಸಸ್ಯಾಹಾರವು ಚಯಾಪಚಯ ಕ್ರಿಯೆಯನ್ನು ಕೂಡಾ ಉತ್ತಮಗೊಳಿಸಿದೆ ಎನ್ನುತ್ತಾರೆ ಅವರು.
ಆಮೀರ್ ಖಾನ್
ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ನಟನಿಗೆ ಮಾಂಸಾಹಾರ ಹೇಗೆ ಹಾನಿಕಾರಕ ಎಂಬ ವೀಡಿಯೊವನ್ನು ತೋರಿಸಿದ ನಂತರ ಅವರು ಸಸ್ಯಾಹಾರಿಯಾಗಿ ಬದಲಾದರು.
ಕಂಗನಾ ರಣಾವತ್
ನಟಿ ಕಂಗನಾ ರಣಾವತ್ ಸಸ್ಯಾಹಾರಿಯಾಗಿರುವುದು ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ನಂಬಿದ್ದಾರೆ.
ಸೋನಂ ಕಪೂರ್
ನಟಿ ಸೋನಂ ಕಪೂರ್ ಬಹಳ ಹಿಂದಿನಿಂದಲೂ ಸಸ್ಯಾಹಾರಿಯಾಗಿದ್ದರು. ಪ್ರಾಣಿ ಪ್ರೇಮಿಯಾಗಿದ್ದ ಕಪೂರ್ ಕೆಲವು ವರ್ಷಗಳ ಹಿಂದೆ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ತ್ಯಜಿಸಿ ವೇಗನ್ ಆದರು.
ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ
ರಿತೇಶ್ ದೇಶ್‌ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ಇಬ್ಬರೂ 2019 ರ ಸುಮಾರಿಗೆ ಸಸ್ಯಾಹಾರಿಯಾದರು. ದಂಪತಿಗಳು ಇಮ್ಯಾಜಿನ್ ಮೀಟ್ ಎಂಬ ಸಸ್ಯ ಆಧಾರಿತ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.
ಶ್ರದ್ಧಾ ಕಪೂರ್
2019 ರಲ್ಲಿ ಸಸ್ಯಾಹಾರಿಯಾದ ನಟಿ ಶ್ರದ್ಧಾ ಕಪೂರ್ ಅವರನ್ನು PETA 2020 ರ ಹಾಟೆಸ್ಟ್ ಸಸ್ಯಾಹಾರಿ ಎಂದು ಹೆಸರಿಸಿದೆ.