ಬಿರಿಯಾನಿಯ ನಿಜವಾದ ಹೆಸರು ಏನು ಗೊತ್ತಾ?

First Published | May 20, 2024, 1:32 PM IST

ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಸಿಕ್ಕರೆ ಎರಡು ತುತ್ತು ಹೆಚ್ಚು ತಿನ್ನುತ್ತಾರೆ. ಅಸಲಿಗೆ ಬಿರಿಯಾನಿ ಮೂಲತಃ ಎಲ್ಲಿಯದ್ದು, ಈ ಹೆಸರು ಬಂದಿದ್ದು ಹೇಗೆ ಎಂಬ ವಿಷಯ ನಿಮಗೆ ಗೊತ್ತಿದೆಯಾ?

ಬಿರಿಯಾನಿ ಅಂದ್ರೆ ಬಾಯಲ್ಲಿ ನೀರು ಬರುತ್ತದೆ. ಅದರಲ್ಲಿಯೂ ಬಿರಿಯಾನಿ ಪರಿಮಳ ಬಂದ್ರೆ ಹೊಟ್ಟೆ ತುಂಬಿದರೂ ಮತ್ತೆ ಹಸಿವು ಆದ ಅನುಭವ ಆಗುತ್ತದೆ. ರಸ್ತೆಬದಿಯ ಅಂಗಡಿಯಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ನಲ್ಲಿಯೂ ಬಿರಿಯಾನಿ ಸಿಗುತ್ತದೆ. ಬಿರಿಯಾನಿ ತಯಾರಿಸುವ ಪದ್ಧತಿಯೂ ಸ್ಥಳದಿಂದ ಸ್ಥಳಕ್ಕೆ ಬೇರೆಯಾಗಿರುತ್ತದೆ.

ಅಡುಗೆ ಪದ್ಧತಿ, ಬಳಸುವ ಮಸಾಲೆ, ಮಾಂಸ ಎಲ್ಲವೂ ಬಿರಿಯಾನಿ ರುಚಿಯನ್ನು ನಿರ್ಧರಿಸುವ ಅಂಶಗಳು. ಬಹುತೇಕರಿಗೆ ಮನೆಗಳಲ್ಲಿ ಸಿದ್ಧವಾಗುವ ಬಿರಿಯಾನಿಯೇ ಇಷ್ಟವಾಗುತ್ತದೆ. ಸಸ್ಯಹಾರಿಗಳು ರೈಸ್‌ನಲ್ಲಿ ಹೆಚ್ಚು ತರಕಾರಿ ಮತ್ತು ಮಸಾಲೆಗಳನ್ನು ಸೇರಿಸಿ ವೆಜ್ ಬಿರಿಯಾನಿ ತಯಾರಿಸಲಾಗುತ್ತದೆ. 

Tap to resize

ನೀವು  ಬಿರಿಯಾನಿ ಪ್ರಿಯರಾಗಿದ್ರೆ ಅದರ ರುಚಿ ಹೆಚ್ಚಾಗಿರುತ್ತದೆ. ಹೈದರಾಬಾದಿ ಬಿರಿಯಾನಿ, ಅಂಬೂರ್ ಬಿರಿಯಾನಿ, ದೊಣ್ಣೆ ಬಿರಿಯಾನಿ, ಬಂಬೂ ಬಿರಿಯಾನಿ, ಮಿಲಟ್ರಿ ಹೋಟೆಲ್ ಬಿರಿಯಾನಿ, ಕೋಲ್ಕತ್ತಾ ಬಿರಿಯಾನಿ, ಹೊಸಕೋಟೆ ಬಿರಿಯಾನಿ ಹೋಟೆಲ್‌ಗಳಲ್ಲಿ ಸಿಗುತ್ತವೆ..

biryani

ಬೆಂಗಳೂರು ಹೊರ ವಲಯ ಹೊಸಕೋಟೆಯಲ್ಲಿ ಸಿಗುವ ಬಿರಿಯಾನಿ ತಿನ್ನಲು ಬೆಂಗಳೂರಿಗರು ಬೆಳಗಿನ ಜಾವ 4 ಗಂಟೆಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ರೆ ನಿಮಗೆ ಬಿರಿಯಾನಿ ನಿಜವಾದ ಹೆಸರು ಏನು? ಈ ಹೆಸರು ಬಂದಿದ್ದು ಹೇಗೆ ಅಂತ ಗೊತ್ತಿದೆಯಾ?

ಪರ್ಷಿಯನ್ ಬ್ರಿಯಾನ್ ಎಂಬ ಪದದಿಂದ ಬಿರಿಯಾನಿ ಹೆಸರು ಬಂದಿದೆ. ಬ್ರಿಯಾನ್ ಅಂದ್ರೆ ಅಡುಗೆ ಮಾಡುವ ಮೊದಲು ಆಹಾರ ಪದಾರ್ಥಗಳನ್ನು ಹುರಿಯಬೇಕು ಎಂದರ್ಥ. ಬಿರಿಯಾನಿ ಮಾಡುವ ಮೊದಲು ಮಸಾಲೆಗಳನ್ನು ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಲಾಗುತ್ತದೆ. 

ಬ್ರಿಯಾನ್ ಪದವನ್ನು ಬ್ರಿಂಜ್ ಎಂಬುದರಿಂದ ಪಡೆಯಲಾಗಿದೆ. ಬ್ರಿಂಜ್ ಅಂದ್ರೆ ಅಕ್ಕಿ. ಬಿರಿಯಾನಿಯಲ್ಲಿ ಮಾಂಸ ಮತ್ತು ಅಕ್ಕಿ ಪ್ರಮುಖ ಪದಾರ್ಥಗಳಾಗಿವೆ. ಈ ಬಿರಿಯಾನಿ ಭಾರತಕ್ಕೆ ಹೇಗೆ ಬಂತು ಎಂಬುದರ ಬಗ್ಗೆ ಹಲವು ಕಥೆಗಳಿವೆ. ಬಿರಿಯಾನಿ ಮೂಲತಃ ಪಶ್ಚಿಮ ಏಷ್ಯಾದಿಂದ ಬಂದಿದೆ ಎಂದು ಹೇಳಲಾಗುತ್ತದೆ.

Latest Videos

click me!