7-8 ಕೋಟಿ ಖರ್ಚು ಮಾಡಿದ್ರೂ 1 ಕೆಜಿ ಟೀ ಪುಡಿ ಖರೀದಿಸಲಾರಿರಿ! ವಿಶ್ವದ ಅತ್ಯಂತ ದುಬಾರಿ ಚಹಾ ಬೆಲೆ ಎಷ್ಟು ಅಂದ್ರೆ..

First Published | May 21, 2024, 11:11 AM IST

ಇಂದು ಅಂತಾರಾಷ್ಟ್ರೀಯ ಚಹಾ ದಿನ. ಭಾರತದಲ್ಲಿರುವಷ್ಟು ಚಹಾ ಪ್ರಿಯರು ಮತ್ತೆಲ್ಲೂ ಇರಲಾರರು. ಆದರೂ, ಈ ದುಬಾರಿ ಬೆಲೆಯ ಚಹಾಗಳ ರುಚಿ ಹೇಗಿರುತ್ತದೆಂದು ಊಹಿಸಿ ನೋಡಲು ಕೂಡಾ ಬಹುತೇಕರಿಗೆ ಸಾಧ್ಯವಾಗೋದಿಲ್ಲ. ಏಕೆಂದರೆ ಅವುಗಳ ಬೆಲೆ...

ಭಾರತೀಯರು ಚಹಾ ಪ್ರಿಯರು. ನಮ್ಮ ಬೆಳಗು ಚಹಾದಿಂದಲೇ ಆರಂಭವಾಗುತ್ತದೆ. ನಂತರ 3-4 ಗಂಟೆಗಳಿಗೊಮ್ಮೆ ಚಹಾ ಹೊಟ್ಟೆಗೆ ಹೋಗದಿದ್ದರೆ ವಿಚಿತ್ರ ಚಡಪಡಿಕೆ ಶುರುವಾಗುತ್ತದೆ. ಚಹಾದಲ್ಲಿ ವಿವಿಧ ರುಚಿಯನ್ನು ನೀವು ಸವಿದಿರಬಹುದು. ಆದರೆ, ಕೋಟಿಗಟ್ಟಲೆ ಬೆಲೆ ಬಾಳುವ ಚಹಾ ಹೇಗಿರುತ್ತದೆ, ಹೋಗಲಿ, ಅದರ ಪರಿಮಳ ಹೇಗಿರುತ್ತದೆಂದು ಕೂಡಾ ನೀವು ಊಹಿಸಲಾರಿರಿ. 

ಅಂತಾರಾಷ್ಟ್ರೀಯ ಚಹಾ ದಿನವಾದ ಇಂದು ವಿಶ್ವದ ಅತ್ಯಂತ ದುಬಾರಿ ಚಹಾಗಳ ಬಗ್ಗೆ ಒಂದು ಇಣುಕು ನೋಟ ಹರಿಸೋಣ. ಈ ಟೀ ಪುಡಿ 1 ಕೆಜಿಗೆ 5 ಕೋಟಿ ಕೊಡ್ತೀನಂದ್ರೂ ಸಿಗೋದಿಲ್ಲ. ಹಾಗಿದ್ದರೆ ಇದರ ಬೆಲೆ ಎಷ್ಟಿರಬಹುದು, ಎಲ್ಲಿ ಸಿಗುತ್ತೆ, ಇದರ ವಿಶೇಷತೆಯೇನು- ಎಲ್ಲ ತಿಳಿಯೋಣ ಬನ್ನಿ. 

Latest Videos


ಪ್ರಪಂಚದಾದ್ಯಂತ ಚಹಾ ಪ್ರಿಯರು
ಪ್ರಪಂಚದಾದ್ಯಂತ ಚಹಾ ಕುಡಿಯುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಇದು ಕೇವಲ ಸಾಮಾನ್ಯ ಪಾನೀಯವಲ್ಲ- ಬೂಸ್ಟರ್‌ನಂತೆ ಕೆಲಸ ಮಾಡುತ್ತದೆ. 

ಭಾರತದಿಂದ ಜಪಾನ್‌ವರೆಗೆ ಮತ್ತು ಚೀನಾದಿಂದ ಟರ್ಕಿಯವರೆಗೆ ಎಲ್ಲರೂ ಚಹಾವನ್ನು ಇಷ್ಟಪಡುತ್ತಾರೆ. ಹಲವಾರು ಐಷಾರಾಮಿ ಬ್ರಾಂಡ್‌ಗಳ ಚಹಾವನ್ನು ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದರ ಕೃಷಿಯನ್ನು ಅತ್ಯಂತ ಕಾಳಜಿಯಿಂದ ಮಾಡಲಾಗುತ್ತದೆ. ಮತ್ತು ಇದು ಮಾರುಕಟ್ಟೆಗೆ ಬಂದಾಗ, ಅದರ ಬೆಲೆ ಗಗನಕ್ಕೇರುತ್ತದೆ.
 

ಅತ್ಯಂತ ದುಬಾರಿ ಚಹಾ
ವಿಶ್ವದ ಅತ್ಯಂತ ದುಬಾರಿ ಚಹಾವನ್ನು ಚೀನಾದಲ್ಲಿ ಉತ್ಪಾದಿಸಲಾಗುತ್ತದೆ. ಈ ಚಹಾದ ಹೆಸರು ಡಾ-ಹಾಂಗ್-ಪಾವೊ-ಟೀ. ಈ ಚಹಾವನ್ನು ಚೀನಾದ ಫುಜಿಯಾನ್ ಪ್ರಾಂತ್ಯದ ಪರ್ವತಗಳಲ್ಲಿ ಬೆಳೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಚಹಾ. ಇದು ಎಷ್ಟು ಮೌಲ್ಯಯುತವಾಗಿದೆಯೆಂದರೆ ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಲಾಗಿದೆ.
 

ಒಂದು ಕೆಜಿ ಟೀ ಬೆಲೆ 9 ಕೋಟಿ ರೂ!
ಇದರ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 1.2 ಮಿಲಿಯನ್ ಡಾಲರ್. ಅಂದರೆ ಸುಮಾರು 9 ಕೋಟಿಗೂ ಹೆಚ್ಚು. ಈ ಟೀ 2005ರಲ್ಲಿ ಹೊಸ ದಾಖಲೆ ಮಾಡಿತ್ತು. ಇದರಿಂದ ಇಲ್ಲಿಯವರೆಗೆ ಯಾವುದೇ ಚಹಾ ಮಾಡಿಲ್ಲ.

20 ಗ್ರಾಂ ಡಾ-ಹಾಂಗ್ ಪಾವೊ ಚಹಾವನ್ನು ಸುಮಾರು 30 ಸಾವಿರ ಡಾಲರ್‌ಗೆ ಮಾರಾಟ ಮಾಡಲಾಗಿದೆ. ಈ ಚಹಾದ ಇತಿಹಾಸವು ಚೀನಾದ ಮಿಂಗ್ ರಾಜವಂಶಕ್ಕೆ ಸಂಬಂಧಿಸಿದೆ.

ಭಾರತದಲ್ಲೂ ಬೆಳೆಯಲಾಗುತ್ತೆ..
ಬೆಳ್ಳಿಯಂತೆ ಹೊಳೆಯುವ ಚಹಾ ಎಲೆಗಳು ಭಾರತದಲ್ಲಿಯೂ ಲಭ್ಯವಿದೆ. ಟೀ ವಿಚಾರದಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ವಿಶ್ವದ ಅತ್ಯಂತ ದುಬಾರಿ ಚಹಾವನ್ನು ಸಹ ಇಲ್ಲಿ ಬೆಳೆಯಲಾಗುತ್ತದೆ.

ವಿಶ್ವದ ನಾಲ್ಕನೇ ಅತ್ಯಂತ ದುಬಾರಿ ಚಹಾವನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಈ ದುಬಾರಿ ಟೀ ಹೆಸರು ಸಿಲ್ವರ್ ಟಿಪ್ಸ್ ಇಂಪೀರಿಯಲ್ ಟೀ. ಇದರ ಅತ್ಯಂತ ವಿಶೇಷವೆಂದರೆ ಅದರ ಗಿಡಗಳ ಎಲೆಗಳನ್ನು ಹುಣ್ಣಿಮೆಯ ರಾತ್ರಿ ಮಾತ್ರ ಕೀಳಲಾಗುತ್ತದೆ. ಅದೂ ಸಹ ತಜ್ಞರ ಸಲಹೆಯಂತೆ ಎಚ್ಚರಿಕೆಯಿಂದ.
 

ಇದು ಊಲಾಂಗ್ ಚಹಾದ ಒಂದು ವಿಧವಾಗಿದೆ. ಡಾರ್ಜಿಲಿಂಗ್‌ನ ಇಳಿಜಾರಿನ ಬೆಟ್ಟಗಳ ಮೇಲಿರುವ ಮಕೈಬರಿ ಟೀ ಎಸ್ಟೇಟ್‌ನಲ್ಲಿ ಇದನ್ನು ಬೆಳೆಯಲಾಗುತ್ತದೆ.

ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅದರ ಎಲೆಗಳು ಸಿಂಗಾಪುರದ ಹಳದಿ ಚಿನ್ನದ ಚಹಾ ಮೊಗ್ಗುಗಳಂತೆ ಬೆಳ್ಳಿಯಂತೆ ಹೊಳೆಯುತ್ತವೆ. ಅವುಗಳ ರುಚಿಯೂ ವಿಶೇಷ. ಇದು ಭಾರತದ ಅತ್ಯಂತ ದುಬಾರಿ ಚಹಾ.

click me!