Kids Care Tips: ಈ ಆಹಾರಗಳನ್ನು ಮಕ್ಕಳಿಗೆ ನೀಡಿದರೆ ಮಳೆಗಾಲದಲ್ಲಿ ಹುಷಾರು ತಪ್ಪೋದೇ ಇಲ್ಲ

First Published Jun 18, 2022, 4:31 PM IST

ಇತ್ತೀಚೆಗೆ ಬದಲಾಗುತ್ತಿರುವ ಹವಾಮಾನದ ಅತಿದೊಡ್ಡ ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ. ಅವರ ಇಮ್ಮ್ಯೂನಿಟಿ ಪವರ್ ವೀಕ್ ಆಗಿರುತ್ತೆ , ಹಾಗಾಗಿ ಹವಾಮಾನ ಸ್ವಲ್ಪ ಬದಲಾದ್ರು, ಮಕ್ಕಳಿಗೆ ಆಫ್ಫೆಕ್ಟ್ ಆಗುತ್ತೆ. ಮಾನ್ಸೂನ್ ಬಂದ ತಕ್ಷಣ, ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆ ಹೆಚ್ಚಾಗುತ್ತೆ. ಹೀಗಾದಾಗ ಪ್ರತಿ ಪೇರೆಂಟ್ಸ್ ಸೀಸನಲ್ ಫ್ಲೂನಿಂದ ಮಗುವನ್ನು ರಕ್ಷಿಸಲು ಬಯಸ್ತಾರೆ.

ನಿಮ್ಮ ಮಗುವಿಗೆ ಪದೇ ಪದೇ ಕೆಮ್ಮು, ನೆಗಡಿ, ಜ್ವರದ ಸಮಸ್ಯೆಯಿದ್ದರೆ, ಮಕ್ಕಳ ಇಮ್ಮ್ಯೂನಿಟಿ ಪವರ್(Immunity power) ಬೂಸ್ಟ್ ಮಾಡೋದು ಇದಕ್ಕೆ  ಬೆಸ್ಟ್  ಸೊಲ್ಯೂಷನ್. ಹೌದು, ಮಕ್ಕಳ ಆಹಾರಕ್ಕೆ ಕೆಲವು ಪೌಷ್ಟಿಕ ಆಹಾರ ಸೇರಿಸಿದ್ರೆ, ಅದು ಯಾವುದೇ ರೀತಿಯ ರೋಗ ಮತ್ತು ಸೋಂಕು ತಪ್ಪಿಸಲು ಮಗುವಿಗೆ ಸಹಾಯ ಮಾಡುತ್ತೆ . ಮಕ್ಕಳ ಆಹಾರದಲ್ಲಿ ಸೇರಿಸಬಹುದಾದ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಸೂಪರ್ ಫುಡ್ಸ್ ಯಾವುದು ತಿಳಿಯಿರಿ .

ಸಿಟ್ರಸ್ ಫ್ರೂಟ್ (Citrus Fruits):
ಸಿಟ್ರಸ್ ಹಣ್ಣು ವಿಟಮಿನ್-ಸಿ ಯಿಂದ ಸಮೃದ್ಧವಾಗಿವೆ, ಇದು ಇಮ್ಮ್ಯೂನಿಟಿ ಪವರ್ ಬೂಸ್ಟ್ ಮಾಡುವ ಕೆಲಸ ಮಾಡುತ್ತೆ. ಇದಕ್ಕಾಗಿ, ನೀವು ಮಕ್ಕಳಿಗೆ ಬೆಳಗಿನ ಬ್ರೇಕ್ ಫಾಸ್ಟ್ ಗೆ ದ್ರಾಕ್ಷಿ, ನಿಂಬೆಹಣ್ಣು, ಕಿತ್ತಳೆ, ಬೆರ್ರಿ, ಪೇರಳೆ ಇತ್ಯಾದಿ ಕೊಡಿ. ಇದು ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ. 

ಮೊಸರು(Curd):
ಮೊಸರು ಒಂದು ಪ್ರೋಬಯಾಟಿಕ್ ಆಹಾರವಾಗಿದ್ದು, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯವನ್ನು ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತೆ. ಇದು ಜೀರ್ಣಕ್ರಿಯೆ ವ್ಯವಸ್ಥೆಗೂ ಒಳ್ಳೆಯದು. ನೀವು ಮಕ್ಕಳಿಗೆ ಆಹಾರದ ಜೊತೆಗೆ ಮೊಸರು ನೀಡಿದರೆ, ಅವರ ರೋಗ ನಿರೋಧಕ ಶಕ್ತಿ ಉತ್ತಮವಾಗಿರುತ್ತೆ .

ಹಸಿರು ಸೊಪ್ಪು ತರಕಾರಿ (Green vegetables):
ಹಸಿರು ಎಲೆ ತರಕಾರಿ ಫೋಲಿಕ್ ಆಸಿಡ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿವೆ ಮತ್ತು ಇದರಲ್ಲಿ ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಕೆ  ಇದ್ದು ಮಕ್ಕಳ ಉತ್ತಮ ಆರೋಗ್ಯಕ್ಕೆ ಸಹಕಾರಿ. ಮಕ್ಕಳ ಆಹಾರದಲ್ಲಿ ನೀವು ಮೆಂತ್ಯ, ಪಾಲಕ್, ಇತ್ಯಾದಿ ತರಕಾರಿ ಸೇರಿಸಿದರೆ ಆರೋಗ್ಯ ಉತ್ತಮವಾಗಿರುತ್ತೆ.
 

ಡ್ರೈ ಫ್ರೂಟ್ (Dry fruits) ಮತ್ತು ಸೀಡ್ಸ್:
ಡ್ರೈ ಫ್ರೂಟ್ನಲ್ಲಿ ಜಿಂಕ್, ಕಬ್ಬಿಣ, ವಿಟಮಿನ್ ಇ, ಒಮೆಗಾ -3 ಕೊಬ್ಬಿನಾಮ್ಲ, ಇತ್ಯಾ ಅಂಶಗಳು ಸೇರಿರುತ್ತವೆ. ಇದು ಮಕ್ಕಳಿಗೆ ಯಾವುದೇ ರೀತಿಯ ಸೋಂಕು ಬೆಳೆಯದಂತೆ ತಡೆಯುತ್ತೆ. ಅದಕ್ಕಾಗಿ, ನೀವು ಯಾವಾಗ್ಲೂ ಬೆಳಿಗ್ಗೆ ಮಕ್ಕಳಿಗೆ ಡ್ರೈ ಫ್ರೂಟ್ ತಿನ್ನಿಸ್ಬೇಕು.
 

ಎಳನೀರು (Tender coconut):
ಎಳನೀರಿನಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ವಿಟಮಿನ್ ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಒಳ್ಳೆಯದು. ಹಾಗಾಗಿ  ಮಕ್ಕಳಿಗೆ ಎಳನೀರು ತಪ್ಪದೆ ಯಾವಾಗ್ಲೂ ನೀಡಿ. ಯಾವಾಗಲೂ ನೀಡೋದು ಬೇಡ. ಅದರೆ ನಿಯಮಿತವಾಗಿ ಮಕ್ಕಳಿಗೆ ಎಳನೀರು ನೀಡಿದರೆ ಇಮ್ಯೂನಿಟಿ ಬೂಸ್ಟ್ ಆಗುತ್ತೆ.  

ಮೊಟ್ಟೆ (Egg):
ನಿಮ್ಮ ಮಗುವಿಗೆ ಪ್ರತಿದಿನ ಒಂದು ಮೊಟ್ಟೆ ತಿನ್ನಲು ನೀಡಿದ್ರೆ, ಅವರ ದೇಹದಲ್ಲಿ ಪ್ರೋಟೀನ್ ಉತ್ತಮ ರೀತಿಯಲ್ಲಿ ಸೇರುತ್ತೆ, ಇದರಿಂದ ಅನೇಕ ರೋಗ ದೂರವಾಗುತ್ತೆ. ಮಗುವಿಗೆ ಬೇಯಿಸಿದ ಅಥವಾ ಪೌಚ್ ಮಾಡಿದ ಮೊಟ್ಟೆ ನೀಡಿ, ಅದು ಉತ್ತಮ.

ಮೀನು(Fish):
ನೀವು ಮಗುವಿಗೆ ಮೀನು ನೀಡಿದ್ರೆ, ಅದು ಅವರ ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲದ ಅಗತ್ಯವನ್ನು ಸುಲಭವಾಗಿ ಪೂರೈಸುತ್ತೆ ಮತ್ತು ಅವರ ರೋಗನಿರೋಧಕ ವ್ಯವಸ್ಥೆ ಬಲವಾಗಿರುತ್ತೆ. ವಾರದಲ್ಲಿ ಒಮ್ಮೆಯಾದರೂ ಮಗುವಿಗೆ ಮೀನು ನೀಡಿದರೆ ಚೆನ್ನಾಗಿರುತ್ತೆ.
 

ಮಾಂಸ(Meat):
ಆಹಾರದಲ್ಲಿ ಮಾಂಸ ಅಥವಾ ಕೋಳಿಯಿಂದ ಮಾಡಿದ ಆಹಾರ ನೀಡಿದ್ರೆ ಮಕ್ಕಳು ಸದೃಢರಾಗಲು ಸಹಾಯ ಮಾಡುತ್ತೆ. ಮಾಂಸಾಹಾರದಲ್ಲಿ ಜಿಂಕ್, ಕಬ್ಬಿಣ, ಪ್ರೋಟೀನ್ ಇತ್ಯಾದಿಯಿಂದ ಕೂಡಿದೆ ಮತ್ತು ಮಗುವಿನ ಇಮ್ಮ್ಯೂನಿಟಿ ಪವರ್ ಹೆಚ್ಚಿಲು ಇದು ಸಹಾಯ ಮಾಡುತ್ತೆ .

click me!