ಕಲ್ಲಂಗಡಿ ತಿಂದು ಬಿಳಿಭಾಗ ಎಸೆಯುತ್ತೀರಾ? ಆ ತಪ್ಪು ಮಾಡ್ಬೇಡಿ…

First Published | Jun 15, 2022, 6:46 PM IST

ನೀವೂ ಸಹ ಕಲ್ಲಂಗಡಿ ಹಣ್ಣನ್ನು ತಿಂದು ಅದರ ಬಿಳಿ ಭಾಗವನ್ನು ಬಿಸಾಡ್ತೀರಾ?, ಇನ್ನು ಮುಂದೆ ಅದನ್ನು ಮಾಡ್ಬೇಡಿ, ಯಾಕಂದ್ರೆ ಈ ಬಿಳಿ ಭಾಗವು ಆರೋಗ್ಯದ (health) ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ನೀವು ಅದನ್ನು ಅನೇಕ ರೀತಿಯಲ್ಲಿ ಬಳಸಬಹುದು. ಇದರಿಂದ ಏನೆಲ್ಲಾ ಪ್ರಯೋಜನ ಇದೆ? ಯಾವ ರೀತಿ ಇದನ್ನು ಬಳಕೆ ಮಾಡಬಹುದು ನೋಡೋಣ…

ಬೇಸಿಗೆಯ ದಿನಗಳಲ್ಲಿ, ನಮ್ಮ ದೇಹವನ್ನು ತಂಪಾಗಿಸುವ ಮತ್ತು ನಮ್ಮನ್ನು ಹೈಡ್ರೇಟ್ ಮಾಡುವಂತಹ ವಸ್ತುಗಳನ್ನು ತಿನ್ನಲು ನಾವು ಇಷ್ಟಪಡುತ್ತೇವೆ. ಅವುಗಳಲ್ಲಿ ಕಲ್ಲಂಗಡಿ (Watermelon) ಕೂಡ ಒಂದು, ಇದು 90% ನೀರಿನಿಂದ ಮಾಡಲ್ಪಟ್ಟಿದೆ. ಇದು ನಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ಕಾಪಾಡುತ್ತೆ.
 

 ಕಲ್ಲಂಗಡಿ ಸ್ವತಃ ಒಂದು ಸೂಪರ್ ಹಣ್ಣಾಗಿದ್ದರೂ, ಕಲ್ಲಂಗಡಿ ಹಣ್ಣಿನ ಸಿಪ್ಪೆ ಅಂದರೆ ನಾವು ಸಾಮಾನ್ಯವಾಗಿ ಎಸೆಯುವ ಅದರ ಬಿಳಿ ಭಾಗವು ತುಂಬಾ ಪ್ರಯೋಜನಕಾರಿ ಮತ್ತು ಅನೇಕ ರೀತಿಯಲ್ಲಿ ಅದನ್ನು ಬಳಸಬಹುದು ಎಂದು ತಿಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಇಂದು ನಾವು ಕಲ್ಲಂಗಡಿಯ ಬಿಳಿ ಭಾಗದ (Watermelon rind) ಪ್ರಯೋಜನ ಮತ್ತು ಅದನ್ನು ಹೇಗೆ ಬಳಸುವುದು ಅನ್ನೋದನ್ನು ತಿಳಿಸುತ್ತೇವೆ.

Tap to resize

ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಿಂದ ಏನೆಲ್ಲಾ ಪ್ರಯೋಜನಗಳಿವೆ?
ಕಲ್ಲಂಗಡಿ ಹಣ್ಣಿನ ಸಿಪ್ಪೆಗಳು ನಿಷ್ಪ್ರಯೋಜಕ ಎಂದು ನೀವು ಭಾವಿಸಿ, ಅದನ್ನು ನೀವು ಎಸೆಯುತ್ತಿದ್ದರೆ, ನೀವು ತಪ್ಪು ಮಾಡ್ತಾ ಇದ್ದೀರಿ. ಕಲ್ಲಂಗಡಿ ಹಣ್ಣಿನೊಳಗಿನ ಕೆಂಪು ಹಣ್ಣಿಗೆ ಹೋಲಿಸಿದರೆ ಬಿಳಿ ಸಿಪ್ಪೆಯು ಅಷ್ಟೇ ಆರೋಗ್ಯಕರವಾಗಿದೆ. ಇದು ಗ್ಲುಟೆನ್ ಮುಕ್ತವಾಗಿದೆ (gluten free). ಅದೇ ಸಮಯದಲ್ಲಿ, ಅದರಲ್ಲಿರುವ ಸಕ್ಕರೆಯ ಪ್ರಮಾಣವೂ ತುಂಬಾ ಕಡಿಮೆ. ಇದು ಉತ್ತಮ ಆರೋಗ್ಯ ಕಾಪಾಡಲು ಸಹಾಯಕವಾಗಿದೆ. 
 

 ಕಲ್ಲಂಗಡಿ ಹಣ್ಣಿನ ಬಿಳಿ ಭಾಗ ನೀರಿನಿಂದ ಸಮೃದ್ಧವಾಗಿದೆ ಮತ್ತು ಬೇಸಿಗೆಯ ದಿನಗಳಲ್ಲಿ ದೇಹವನ್ನು ಹೈಡ್ರೇಟ್ (hydrate) ಮಾಡುತ್ತದೆ. ಈ ಬಿಳಿ ಭಾಗವು ಕಡಿಮೆ ಕೊಬ್ಬು ಹೊಂದಿರೋದ್ರಿಂದ ತೂಕ ನಷ್ಟಕ್ಕೆ ಉತ್ತಮವಾಗಿದೆ. ಇದು ನಾರಿನ ಉತ್ತಮ ಮೂಲವಾಗಿದೆ ಮತ್ತು ಸಿಟ್ರುಲಿನ್, ಪೊಟ್ಯಾಸಿಯಮ್, ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಸಹ ಹೊಂದಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣಿನ ಬಿಳಿ ಭಾಗ ಬಳಸಿ ಏನು ಮಾಡಬಹುದು
ಕಲ್ಲಂಗಡಿಯ ಬಿಳಿ ಭಾಗ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ನೀವು ಇದನ್ನು ಸಲಾಡ್ಗಳು, ಸಿಹಿತಿಂಡಿಗಳು, ಜಾಮ್ಗಳು ಮತ್ತು ಉಪ್ಪಿನಕಾಯಿಗಳಲ್ಲಿ ಬಳಸಬಹುದು. ಇದಕ್ಕೆ ಯಾವುದೇ ರುಚಿ ಇರೋದಿಲ್ಲ. ಹಾಗಾಗಿ ನೀವು ಅದನ್ನು ಯಾವುದೇ ರೀತಿಯ ಸಿಹಿ ಅಥವಾ ಉಪ್ಪು ಬಳಸಿ ಡಿಶ್ ತಯಾರಿಸಬಹುದು.  

 ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಿಂದ ಯಾವ ತಿಂಡಿ ತಯಾರಿಸಬಹುದು ನೋಡೋಣ…
ಕಲ್ಲಂಗಡಿ ಹಣ್ಣಿನ 1/2 ಬಿಳಿ ಭಾಗ
1 ಟೇಬಲ್ ಸ್ಪೂನ್ ತುಪ್ಪ
1 1/2 ಕಪ್ ಸಕ್ಕರೆ (sugar)
1 ಕಪ್ ಹಾಲು
1/2 ಟೀಸ್ಪೂನ್ ಏಲಕ್ಕಿ ಪುಡಿ
ಅಗತ್ಯಕ್ಕೆ ತಕ್ಕಂತೆ ಕತ್ತರಿಸಿದ ಡ್ರೈ ಫ್ರುಟ್ಸ್ 

 - ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು ಪುಡ್ಡಿಂಗ್ ಮಾಡಲು, ಕಲ್ಲಂಗಡಿ ಹಣ್ಣಿನ ಹಸಿರು ಭಾಗವನ್ನು ಸಿಪ್ಪೆ ಸುಲಿದು ಅದರ ಬಿಳಿ ಭಾಗವನ್ನು ಮಾತ್ರ ಬೇರ್ಪಡಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.

 - ಈಗ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ. ನಂತರ ಅದಕ್ಕೆ ಕಲ್ಲಂಗಡಿಯ ಬಿಳಿ ಭಾಗ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ.  ಅದರ ಬಣ್ಣ ಬದಲಾಗಲು ಪ್ರಾರಂಭಿಸಿದಾಗ, ಅದಕ್ಕೆ ಹಾಲು ಸೇರಿಸಿ ಮತ್ತು ಚೆನ್ನಾಗಿ ಬೇಯಲು ಬಿಡಿ. 

- ಹಾಲು ಸಂಪೂರ್ಣವಾಗಿ ಆರಿ ಹೋದ ಬಳಿಕ, ಸಕ್ಕರೆ, ಏಲಕ್ಕಿ ಪುಡಿ ಮತ್ತು ಕತ್ತರಿಸಿದ ಡ್ರೈ ಫ್ರುಟ್ಸ್ (dry fruits) ಸೇರಿಸಿ ಮತ್ತು ಮತ್ತೆ 2-3 ನಿಮಿಷಗಳ ಕಾಲ ಬೇಯಿಸಿ. ನಂತರ ಬಿಸಿಯಾಗಿ ಸರ್ವ್ ಮಾಡಿ. ಇದು ತುಂಬಾನೆ ಟೇಸ್ಟಿಯಾಗಿರುತ್ತೆ.

Latest Videos

click me!