ಬಿಗ್ ಬಾಸ್ ಸೀಸನ್ 10 ಮೂಲಕ ಧೂಳೆಬ್ಬಿಸಿದ ನಟಿ ಸಂಗೀತ ಶೃಂಗೇರಿ, ಸೋಶಿಯಲ್ ಮೀಡಿಯಾದಲ್ಲಿ ಹೊಸದಾದ ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡಿದ್ದು, ಫೋಟೊಗಳ ಜೊತೆಗೆ Sshhh not your Barbie Girl ಎನ್ನುವ ಕ್ಯಾಪ್ಶನ್ ಕೂಡ ಹಾಕಿದ್ದಾರೆ. ನಟಿಯ ಲುಕ್ ಮಾತ್ರ ಸೂಪರ್ ಆಗಿದೆ.
ಪ್ರತಿ ಬಿಗ್ ಬಾಸ್ ಬಂದಾಗ ವೀಕ್ಷಕರು ಸಂಗೀತ ಶೃಂಗೇರಿಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಕಾರಣ ಆಕೆಯ ಪವರ್ ಫುಲ್ ಆಟ, ಸ್ಪರ್ಧಿಗಳು ನೀಡುತ್ತಿದ್ದ ಸವಾಲು, ಮಾತು, ಏನೆ ಬಂದರು ಎದುರಿಸಿ ನಿಲ್ಲುತ್ತಿದ್ದ ಆಕೆಯ ತಾಕತ್ತು. ಆ ಕಾರಣದಿಂದಾಗಿಯೇ ನಟಿಯನ್ನು ಸಿಂಹಿಣಿ ಎನ್ನುತ್ತಾರೆ.
27
ಟ್ರೋಲ್ ಗೆ ಒಳಗಾಗಿ ನಂತರ ಮನ ಗೆದ್ದ ಬೆಡಗಿ
ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟವರಲ್ಲಿ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿ, ಇನ್’ಸ್ಟಾಗ್ರಾಂನಲ್ಲಿ ಫ್ಯಾನ್ಸ್ ಗಳನ್ನೆ ಕಳೆದುಕೊಂಡು, ಬಳಿಕ ಆಕೆಯ ನಿಜವಾದ ಗುಣದ ಬಗ್ಗೆ ತಿಳಿದ ನಂತರ ಅತಿ ಹೆಚ್ಚಿನ ಫ್ಯಾನ್ ಪಡೆದುಕೊಂಡು, ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ಸಂಗೀತ ಶೃಂಗೇರಿ.
37
ಸೋಶಿಯಲ್ ಮೀಡಿಯಾದಲ್ಲಿ ಹವಾ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಂಗೀತಾ ಹೊಸ ಹೊಸ ಫೋಟೊ ಶೂಟ್ ಶೇರ್ ಮಾಡುವ ಮೂಲಕ ಹವಾ ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಗ್ಲಾಮರಸ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ನಟಿಯ ಈ ಲುಕ್ ನೋಡಿ ಜನ ಹೊಗಳೋದನ್ನು ನಿಲ್ಲಿಸ್ತಾನೆ ಇಲ್ಲ.
ಡೆನಿಮ್ ಶಾರ್ಟ್ ಡ್ರೆಸ್ ಜೊತೆಗೆ ಬ್ಲ್ಯಾಕ್ ಹೀಲ್ಸ್ ಶೂ ಧರಿಸಿರುವ ಸಂಗೀತ ಶೃಂಗೇರಿ ತಮ್ಮ ಮುದ್ದಾದ ಫೋಟೊಗಳ ಜೊತೆಗೆ Sshhh not your Barbie Girl ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಸಂಗೀತ ಈ ರೀತಿಯಾಗಿ ಹೇಳಿದ್ದು ಯಾರಿಗೆ ಎಂದು ಕೇಳ್ತಿದ್ದಾರೆ ಜನ.
57
ರಂಭೆ, ಊರ್ವಶಿ , ಮೇನಕೆ ಸೇರಿದ್ರೆ ಸಂಗೀತ
ನಟಿಯ ಮುದ್ದಾದ ರೂಪವನ್ನು ನೋಡಿ ಜನರು ಹೊಗಳೋದನ್ನು ನಿಲ್ಲಿಸ್ತಾನೆ ಇಲ್ಲ. ಅಪ್ಸರೆಯನ್ನು ಮೀರಿಸುವಂತಹ ಅಂದಗಾತಿ ಚಂದನವನದ ಗೊಂಬೆ ಸಂಗೀತ ಮ್ಯಾಮ್, ಕಣ್ಣಲ್ಲೇ ಸೆಳೆಯುವ ನೋಟ, ಕರ್ನಾಟಕ ಕ್ರಷ್ ನಮ್ಮ ಮಲೆನಾಡು ಹುಡುಗಿ ಸಂಗೀತಾ, ದಂತದ ಬೊಂಬೆ ಎಂದೆಲ್ಲಾ ಹೊಗಳಿದ್ದಾರೆ.
67
ಗ್ಲಾಮರಸ್ ಬೊಂಬೆ
ನೀವು ಕೇವಲ ಬಾರ್ಬಿ ಡಾಲ್ ಅಲ್ಲ, ಗ್ಲಾಮರಸ್ ಬೊಂಬೆ, ಅಡೋರೇಬಲ್ ಲವೇಬಲ್, ಗಾರ್ಜಿಯಸ್ ಕ್ವೀನ್, ಸ್ಟೈಲಿಶ್ ಕ್ವೀನ್, ಬಿಗ್ ಬಾಸ್ ಬೊಂಬೆ, ಹಾಟಿ ಎನ್ನುತ್ತಾ ಸಖತ್ ಗ್ಲಾಮರಸ್ ಆಗಿ ಕಾಣಿಸುತ್ತಿರುವ ಬೆಡಗಿಗೆ ಮೆಚ್ಚುಗೆ ಸೂಚಿಸಿದ್ದಾರೆ.
77
ಸಂಗೀತಾ ನಟಿಸಿದ ಸಿನಿಮಾಗಳು
ಹರ ಹರ ಮಹಾದೇವ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಸಂಗೀತಾ ನಂತರ ಎ+, ಪಂಪ, 777 ಚಾರ್ಲಿ, ಲಕ್ಕಿ ಮ್ಯಾನ್ ಮತ್ತು ಶಿವಾಜಿ ಸುರತ್ಕಲ್, ಮಾರಿ ಗೋಲ್ಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಇನ್ನೂ ಹೆಸರಿಡದ ಹಾರರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.