Ayurvedic remedy for hair: ಕೂದಲು ಉದ್ದ ಬೆಳೆಯಬೇಕೆಂದು ಈಗಾಗಲೇ ನಾವು ಹಲವಾರು ಮನೆಮದ್ದನ್ನ ಟ್ರೈ ಮಾಡಿದ್ದೇವೆ. ಆದರೆ ರಿಸಲ್ಟ್ ಅಷ್ಟಕಷ್ಟೇ ಅಲ್ಲವೇ. ಅಗಿದ್ದಾಯ್ತು ಮುಂದಿನ ದಿನದಲ್ಲಾದರೂ ನಮ್ಮ ಕೂದಲು ದಟ್ಟವಾಗಿ ಬೆಳೆಯಬೇಕೆಂದು ಬಯಸುವವರು ಡಾ. ಶೋಭನ ತಿಳಿಸಿರುವ ಈ ಮನೆಮದ್ದನ್ನು ಟ್ರೈ ಮಾಡಿ.
ಹೆಣ್ಣುಮಕ್ಕಳಿಗೆ ಉದ್ದ ಕೂದಲಿರುವ ಹುಡುಗಿಯರನ್ನು ನೋಡಿದಾಗಲೆಲ್ಲಾ ನಮ್ಮ ಕೂದಲು ಅಷ್ಟೇ ದಪ್ಪ ಮತ್ತು ಉದ್ದವಾಗಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಂತ ಅನಿಸುವುದು ಸಹಜ. ಹಾಗಾಗಿಯೇ ಕೆಲವರು ಕೂದಲಿಗೆ ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಕೊನೆಗೆ ಫಲಿತಾಂಶ ಶೂನ್ಯ.
27
ಮೂಲೆ ಮೂಲೆಯಲ್ಲೂ ಕೂದಲಿನ ಉಂಡೆ
ಇತ್ತೀಚಿನ ದಿನಗಳಲ್ಲಿಯಂತೂ ಕೂದಲು ಉದುರುವುದು ಬಹುತೇಕ ಎಲ್ಲರಿಗೂ ಸಮಸ್ಯೆಯಾಗಿ ಕಾಡುತ್ತಿದೆ. ದೊಡ್ಡವರು ಬಿಡಿ, ಚಿಕ್ಕಮಕ್ಕಳಲ್ಲಿಯೂ ಇದು ಸಾಮಾನ್ಯವಾಗಿದೆ. ಇನ್ನು ಕೂದಲಿನ ಬೆಳವಣಿಗೆಯಂತೂ ಅಸಾಧ್ಯವಾಗಿದೆ. ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಳಪೆ ನಿದ್ರೆಯ ಚಕ್ರದಿಂದಾಗಿ ಮನೆಯ ಪ್ರತಿಯೊಂದು ಮೂಲೆಯಲ್ಲೂ ಕೂದಲಿನ ಉಂಡೆಗಳು ಗೋಚರಿಸುತ್ತವೆ.
37
ಈ ಮನೆಮದ್ದನ್ನು ಟ್ರೈ ಮಾಡಿ
ಒಂದು ವೇಳೆ ನೀವು ಇಂದು ಕೂದಲು ಉದುರುತ್ತೆ, ಮತ್ತೆ ನಾಳೆ ಹುಟ್ಟುತ್ತಲ್ಲ ಬಿಡಿ ಎಂದು ನಿರ್ಲಕ್ಷ್ಯ ಮಾಡಿದರೊ, ಮುಂದಿನ ದಿನಗಳಲ್ಲಿ ಖಂಡಿತ ಸಮಸ್ಯೆಗಳನ್ನು ಎದುರಿಸುತ್ತೀರಿ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಹಾಕಲು ನೀವು ಈ ಮನೆಮದ್ದನ್ನು ಟ್ರೈ ಮಾಡಬಹುದು.
ಈಗಾಗಲೇ ನೀವು ಎಲ್ಲಾ ಮನೆಮದ್ದನ್ನು ಪ್ರಯತ್ನಿಸಿ ಸುಸ್ತಾಗಿದ್ದು, ಇಂದಿಗೂ ಕೂದಲು ಉದುರುವುದು ಮುಂದುವರಿದರೆ ಟೀ ಪೌಡರ್ ತುಂಬಾ ಸಹಾಯಕವಾಗಬಹುದು.
57
ಶೇರ್ ಮಾಡಿದ ಡಾ. ಶೋಭನ
ಹೌದು, ಈ ಮನೆಮದ್ದನ್ನು ಡಾ. ಶೋಭನ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿದ್ದು, ಇದನ್ನು ತಯಾರಿಸಲು ನಿಮಗೆ ಟೀ ಪೌಡರ್, ಕರಿಬೇವು, ಕಾಫಿ ಪುಡಿ ಮತ್ತು ಸಾಮಾನ್ಯ ಶಾಂಪೂ ಬೇಕಾಗುತ್ತದೆ.
67
ತಯಾರಿಸುವ ವಿಧಾನ
ಈಗ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ನೀರನ್ನು ಬಿಸಿ ಮಾಡಿ. ಟೀ ಪುಡಿ ಸೇರಿಸಿ ಕುದಿಸಿ. ನಂತರ, ಕರಿಬೇವು ಮತ್ತು ಕಾಫಿ ಪುಡಿಯನ್ನೂ ಸೇರಿಸಿ..ಇವುಗಳನ್ನೂ ಕುದಿಸಿ. ಹೆಚ್ಚು ಕಡಿಮೆ ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ.
77
15 ದಿನದಲ್ಲಿ ಬೆಳೆಯುತ್ತೆ
ಚೆನ್ನಾಗಿ ಕುದಿಯಲು ಪ್ರಾರಂಭಿಸಿದ ನಂತರ ಅದನ್ನು ಸೋಸಿ ಬೇರ್ಪಡಿಸಿ. ನಂತರ ನೀವು ಬಳಸುವ ಶಾಂಪೂ ಅಥವಾ ಯಾವುದೇ ಸೌಮ್ಯವಾದ, ನೈಸರ್ಗಿಕ ಶಾಂಪೂ ಜೊತೆ ಬೆರೆಸಿ ನಿಮ್ಮ ಕೂದಲನ್ನು ತೊಳೆಯಿರಿ. ನೀವು ಪ್ರತಿ ಬಾರಿ ಕೂದಲು ತೊಳೆಯುವಾಗ ಇದನ್ನು ಬಳಸಿ. ನಿಮ್ಮ ಕೂದಲು 15 ದಿನಗಳಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ.