ಜೀನ್ಸ್ ಪ್ಯಾಂಟ್ ಧರಿಸುವವರು ತಪ್ಪದೇ ಈ ಸುದ್ದಿ ಓದಿ

First Published Oct 11, 2021, 11:24 AM IST

ಅನೇಕ ಬಾರಿ  ಹಳೆಯ ಜೀನ್ಸ್ ಪ್ಯಾಂಟ್ ಟೈಟ್(Tight Jeans) ಆಗಿತೊಂದರೆ ನೀಡುತ್ತದೆ. ಬಣ್ಣ ಕಳೆದುಕೊಂಡು ಮಸುಕಾಗಿರುವ ಜೀನ್ಸ್(Old Jeans) ಧರಿಸಲು ಸಾಧ್ಯವಾಗುವುದಿಲ್ಲ. ತೂಕ ಹೆಚ್ಚಳ ಅಥವಾ ತೂಕ ನಷ್ಟದ ಕಾರಣದಿಂದ  ಹಳೆಯ ಜೀನ್ಸ್ ಸರಿಹೊಂದುವುದಿಲ್ಲ. ಇದರಿಂದ ನೆಚ್ಚಿನ ಜೀನ್ಸ್ಅನ್ನು ಮತ್ತೆ ಧರಿಸಲು ಸಾಧ್ಯವಿಲ್ಲ.

ನಿಮ್ಮ ಬಳಿಯೂ ಧರಿಸಲು ಸಾಧ್ಯವಾಗದ ಜೀನ್ಸ್ ಇದ್ದರೆ ಅದನ್ನು ಅದನ್ನು ಬೀಸಾಕಬೇಡಿ. ಯಾಕೆಂದರೆ ಅದನ್ನು ಮರು ಬಳಕೆ ಮಾಡಿ ಹಲವು ರೀತಿಯಲ್ಲಿ ಉಪಯೋಗಿಸಬಹುದು. ಹಳೆಯ ಜೀನ್ಸ್ ಅನ್ನು ಮತ್ತೆ ಉಪಯೋಗಿಸಲು ಈ ಸುಲಭ ತಂತ್ರಗಳನ್ನು ಅನುಸರಿಸಿ

ಬಿಗಿಯಾದ ಜೀನ್ಸ್ ಸರಿಪಡಿಸುವುದು ಹೇಗೆ..?: ಜೀನ್ಸ್ ಸ್ವಲ್ಪ ಟೈಟ್(Tight Jeans) ಆಗಿದ್ದರೆ ಅದನ್ನು ಹಿಗ್ಗಿಸಬಹುದು. ಇದು ತುಂಬಾ ಸರಳ ಮತ್ತು ಸುಲಭ. ಮೊದಲು ಸ್ಪ್ರೇ ಬಾಟಲಿಯಲ್ಲಿ ಬಿಸಿನೀರನ್ನು ತುಂಬಿಸಿ ಮತ್ತು ಜೀನ್ಸ್ ಅನ್ನು ಹ್ಯಾಂಗರ್‌ನಲ್ಲಿ ನೇತುಹಾಕಿ.
 

ಈಗ ಸ್ಪ್ರೇ ಬಾಟಲಿಯಿಂದ ಸೊಂಟ ಮತ್ತು ತೊಡೆಯ ಭಾಗದ ಸುತ್ತಲೂ ನೀರನ್ನು ಸಿಂಪಡಿಸಿ. ಇದರ ನಂತರ ಜೀನ್ಸ್ ಅನ್ನು ಹಿಗ್ಗಿಸಿ ಮತ್ತೇ ಹ್ಯಾಂಗರ್ ನಲ್ಲಿ (Hanger) ನೇತುಹಾಕಿ. ನೀರು ತುಂಬಾ ಬಿಸಿಯಾಗಿರಬೇಕು ಅನ್ನೋದು ನೆನಪಿನಲ್ಲಿರಲಿ. ಇಲ್ಲವಾದರೆ ಉಪಯೋಗವಾಗೋದಿಲ್ಲ.. 

ಬಳಿಕ ಜೀನ್ಸ್ ಅನ್ನು ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಈಗ ನೆಚ್ಚಿನ ಜೀನ್ಸ್ ಪ್ಯಾಂಟ್ ಅನ್ನು ಹಾಕಿಕೊಂಡು ನೋಡಿ. ಇದರ ನಂತರವೂ ಜೀನ್ಸ್ ಬಿಗಿಯಾದಂತೆ ಅನಿಸಿದರೆ,  ಈ ಟ್ರಿಕ್ ಅನ್ನು ಮತ್ತೊಮ್ಮೆ ಪ್ರಯತ್ನಿಸಬಹುದು. ಖಂಡಿತಾ ವರ್ಕೌಟ್ ಆಗುತ್ತೆ. 

ಜೀನ್ಸ್ ಲೂಸ್ ಆಗಿದ್ದರೆ ಈ ವಿಧಾನ ಅನುಸರಿಸಿ: ಇತ್ತೀಚೆಗೆ ತೂಕ ಕಳೆದುಕೊಂಡಿದ್ದರೆ ಮತ್ತು ಹಳೆಯ ಜೀನ್ಸ್ ಸಡಿಲ(Loose Jeans)ವಾಗಿದ್ದರೆ ಅದನ್ನು ಮತ್ತೆ ಬಳಸಬಹುದು. ಇದಕ್ಕಾಗಿ ಸೊಂಟದ ಬದಿಯಿಂದ ಜೀನ್ಸ್ ಹೊಲಿಯಬೇಕು. ಇದನ್ನು ಟೈಲರ್‌ಗೂ ನೀಡಿ ಸರಿಪಡಿಸಬಹುದು. ಮತ್ತೊಂದೆಡೆ ಸಡಿಲವಾದ ಜೀನ್ಸ್ ಧರಿಸಲು ಬಯಸಿದರೆ ಇದೇ ರೀತಿ ಧರಿಸಬಹುದು.

ಬಣ್ಣ ಕಳೆದುಕೊಂಡ ಜೀನ್ಸ್ ಅನ್ನು ಏನು ಮಾಡಬೇಕು?
ಜೀನ್ಸ್ ಬಣ್ಣ ಕಳೆದುಕೊಂಡು ಮಸುಕಾಗಿದ್ದರೆ(Jeans Reuse Tricks)  ಅದಕ್ಕೆ ಮತ್ತೆ ಬಣ್ಣ ಹಚ್ಚುವ ಮೂಲಕ ಧರಿಸಬಹುದು. ಬೇರೆ ಬೇರೆ ರೀತಿಯಲ್ಲಿ ಜೀನ್ಸ್ ಗೆ ಬಣ್ಣ ಹಚ್ಚಿ ಅದನ್ನು ಹೊಸದರಂತೆ ಕಾಣುವಂತೆ ಮಾಡಬಹುದು. ಹೇಗೆ ಅನ್ನೋದು ನೋಡೋಣ.

ಮನೆಯಲ್ಲಿಯೇ ಜೀನ್ಸ್ ಗೆ ಬಣ್ಣ ಹಚ್ಚಲು ಬಯಸಿದರೆ ಅದೂ ಕೂಡ ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಮೊದಲು ಮಾರುಕಟ್ಟೆಯಲ್ಲಿ ನಿಮ್ಮ ಜೀನ್ಸ್ ಗೆ ಹೊಂದುವಂತಹ ಬಣ್ಣವನ್ನು ಖರೀದಿಸಿ ತನ್ನಿ. ನಂತರ ಅದನ್ನು ಬಿಸಿ ನೀರಿನಲ್ಲಿ  (Hot water)ಸರಿಯಾಗಿ ಮಿಶ್ರಣ ಮಾಡಿ. 

ಈಗ ಹಳೆಯ ಜೀನ್ಸ್ ಅನ್ನು ಅದರಲ್ಲಿ ಅದ್ದಿ. ಇದರಿಂದ  ಜೀನ್ಸ್ ಗೆ ಬಣ್ಣ ಚೆನ್ನಾಗಿ ಬರುತ್ತದೆ. ಬಣ್ಣ ಹಾಕುವ ಮೊದಲು ಜೀನ್ಸ್ ಅನ್ನು ಸರಿಯಾಗಿ ತೊಳೆಯಲು ಮರೆಯಬೇಡಿ.ಸ್ವಲ್ಪ ಹೊತ್ತಿನ ಬಳಿಕ ಅದನ್ನು ನೀರಿನಿಂದ ತೆಗೆದು ಒಣಗಲು ಬಿಡಿ. ಈಗ ಜೀನ್ಸ್ ಹೊಸ ಬಣ್ಣದೊಂದಿಗೆ ಹೊಸದರಂತೆ ಕಾಣಿಸುತ್ತದೆ. 

click me!