ಫ್ಯಾಷನ್ ಹೆಸರಲ್ಲಿ ಈ ತಪ್ಪು ಮಾಡುವ ಮುನ್ನ ಸ್ವಲ್ಪ ಯೋಚಿಸಿ
ಟ್ರೆಂಡ್ಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಆದರೆ ನೀವು ಮಾಡುವ ಫ್ಯಾಷನ್ ಮಿಸ್ಟೇಕ್ಸ್ ಎಲ್ಲಾ ಪರಿಶ್ರಮವನ್ನು ನೀರಿನಲ್ಲಿ ಹೋಮ ಮಾಡಿದಂತೆ ಮಾಡುತ್ತವೆ. ಅಂತಹ ಫ್ಯಾಷನ್ ಮಿಸ್ಟೇಕ್ ಗಳನ್ನು ಮಾಡಲೇ ಬೇಡಿ. ಫ್ಯಾಷನ್ ಡ್ರೆಸ್ ಧರಿಸುವ ಮುನ್ನ ಸ್ವಲ್ಪ ಯೋಚಿಸಿ. ಯಾವ ಮಿಸ್ಟೇಕ್ ಗಳನ್ನು ಮಾಡಬಾರದು ತಿಳಿಯಿರಿ...
ಔಟ್ ಫಿಟ್‌ಗೆ ಟ್ರೆಂಡಿ ಲುಕ್ ಕೊಡಲು ಮಿಕ್ಸ್ ಆ್ಯಂಡ್ ಮ್ಯಾಚ್ ಫಾರ್ಮುಲಾ ಅಳವಡಿಸುವ ಮುನ್ನ ಧರಿಸುವ ಕಾಂಬಿನೇಷನ್ ಒಂದಕ್ಕೊಂದು ಮ್ಯಾಚ್ ಆಗುತ್ತದೆಯೇ ಎಂದು ನೋಡಲೇಬೇಕು. ಕೆಲವೊಂದು ಬಾರಿ ಈ ಎಕ್ಸ್‌ಪೆರಿಮೆಂಟ್ ತುಂಬಾ ಕೆಟ್ಟದಾಗಿ ಕಾಣುತ್ತದೆ. ಆದುದರಿಂದ ಇಲ್ಲಿ ಒಂದಿಷ್ಟು ಟಿಪ್ಸ್ ಇವೆ. ಅಂತಹ ತಪ್ಪುಗಳನ್ನು ಮಾಡಬೇಡಿ...
ಬಿಳಿ ಸ್ಕರ್ಟ್ ಅಥವಾ ಪ್ಯಾಂಟ್ ಜೊತೆ ಬಿಳಿ ಶೂಸ್ ಧರಿಸಲೇಬೇಡಿ. ಯಾಕೆಂದರೆ ಅದರಿಂದ ಸ್ನೋ ಮ್ಯಾನ್‌ನಂತೆ ಕಾಣಿಸುತ್ತೀರಿ.
ವಯಸ್ಸು ಹೆಚ್ಚಾದಂತೆ ಆಸಿಡ್ ಶೇಡ್ಸ್ ಜೀನ್ಸ್ ಧರಿಸಬೇಡಿ. ಬದಲಾಗಿ ಡಾರ್ಕ್ ಬಣ್ಣದ ಜೀನ್ಸ್ ಧರಿಸಿ. ಇದು ಸ್ಮಾರ್ಟ್ ಲುಕ್ ನೀಡುತ್ತದೆ.
ಕೇಪ್ರೀ ಜೊತೆ ಸಣ್ಣ ಕುರ್ತಾ ಧರಿಸಬೇಡಿ. ಕೆಪ್ರೀಸ್ ಜೊತೆ ಫಿಟ್ ಆಗಿರುವ ಟಾಪ್ ಧರಿಸಿ. ಶಾರ್ಟ್ ಕುರ್ತಾವನ್ನು ಜೀನ್ಸ್ ಜೊತೆ ಧರಿಸಬಹುದು.
ಮಾಡೆಲ್ಸ್‌ನಂತೆ ಸೀರೆಯಲ್ಲಿ ಹಾಟ್ ಆಗಿ ಕಾಣಲು ಬಿಕಿನಿ ಬ್ಲೌಸ್ ಧರಿಸಬೇಡಿ. ಸೆಕ್ಸಿಯಾಗಿ ಕಾಣಬೇಕೆಂದು ಆರಾಮ ಎನಿಸದ ಡ್ರೆಸ್ ಧರಿಸಿದರೆ ಎಂಜಾಯ್ ಮಾಡಲು ಸಾಧ್ಯವಾಗದು.
ಉಗುರು ನೀಟ್ ಆಗಿ ಇಟ್ಟು ಕೊಳ್ಳಲು ಆಗದೆ ಇದ್ದರೆ ರೆಗ್ಯುಲರ್ ಮೆನಿಕ್ಯೂರ್ ಮಾಡುವುದು ಉತ್ತಮ. ಸಾಧ್ಯವಾದಷ್ಟು ಉಗುರು ಸಣ್ಣದಾಗಿ ಇರಲಿ. ಜೊತೆಗೆ ಸುಂದರ ಬಣ್ಣದ ನೈಲ್ ಪಾಲಿಶ್ ಹಾಕಿದರೆ ಚೆನ್ನಾಗಿ ಕಾಣಿಸುತ್ತದೆ.
ಡಾರ್ಕ್ ಐ ಮೇಕಪ್ ಜೊತೆಗೆ ಡಾರ್ಕ್ ಲಿಪ್ಸ್ಟಿಕ್ ಹಾಕಬೇಡಿ. ಇದರಿಂದ ಮೇಕಪ್ ಅಸಹ್ಯವಾಗಿ ಕಾಣಬಹುದು. ಜೊತೆಗೆ ಅಪಹಾಸ್ಯಕ್ಕೀಡಾಗುವ ಸಾಧ್ಯತೆ ಇದೆ.
ಬೇಸಿಗೆ ಸಮಯದಲ್ಲಿ ಬೂಟ್ಸ್ ಧರಿಸುವುದು ಒಂದು ದೊಡ್ಡ ಮಿಸ್ಟೇಕ್. ಫುಟ್ ವೇರ್ ಧರಿಸುವ ಮುನ್ನ ಹವಾಮಾನದ ಬಗ್ಗೆ ಗಮನ ಇರಲಿ.