ನ್ಯಾಚುರಲ್ ಆಗಿ ಕಣ್ಣಿನ ಸೌಂದರ್ಯ ಹೆಚ್ಚಿಸುತ್ತೆ ಈ ಆಹಾರಗಳು

First Published Oct 5, 2021, 5:06 PM IST

ದಪ್ಪ ರೆಪ್ಪೆಗಳನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ದಟ್ಟವಾದ ಕಣ್ಣುರೆಪ್ಪೆಗಳನ್ನು (Eye Lashes) ಹೊಂದಿರದ ಜನರು ಅವುಗಳನ್ನು ದಪ್ಪಗೊಳಿಸಲು ಏನೆನೋ ಮಾಡುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಮೇಕಪ್ ಸಮಯದಲ್ಲಿ ಕರ್ಲರ್ ಗಳು ಮತ್ತು ಮಸ್ಕರಾಗಳ ಸಹಾಯದಿಂದ ಅವುಗಳನ್ನು ಮತ್ತಷ್ಟು ದಪ್ಪವಾಗಿ ಕಾಣುವಂತೆ ಮಾಡುತ್ತಾರೆ. 

ಕಣ್ಣಿನ ರೆಪ್ಪೆಗಳನ್ನು ನೈಸರ್ಗಿಕವಾಗಿ (naturally) ದಪ್ಪವಾಗಿಸಲು ಬಯಸಿದರೆ,  ಆಹಾರದಲ್ಲಿ ಕೆಲವು ವಿಷಯಗಳನ್ನು ಸೇರಿಸುವ ಮೂಲಕ ಅದನ್ನ ಮಾಡಬಹುದು. ಇದಕ್ಕೆ ಸಾಮಾನ್ಯವಾಗಿ ದೇಹದಲ್ಲಿ ಹಾರ್ಮೋನ್ (harmones) ಬದಲಾವಣೆ,  ಪೌಷ್ಟಿಕಾಂಶದ ಕೊರತೆ ಇತ್ಯಾದಿಗಳು ಕಾರಣವಾಗುತ್ತವೆ. 

ಕೆಲವೊಮ್ಮೆ ಅಗ್ಗದ ಮತ್ತು ಕಳಪೆ ಮೇಕಪ್ ಉತ್ಪನ್ನಗಳನ್ನು (cheap makeup product) ಬಳಸುವುದು ಸಹ ವಯಸ್ಸಾದಂತೆ ಕಣ್ಣಿನ ಸುಕ್ಕು ಹೆಚ್ಚಲು ಕಾರಣವಾಗುತ್ತದೆ. ಕೆಲವೊಮ್ಮೆ ಇದು ವೈದ್ಯಕೀಯ ಸ್ಥಿತಿಯಿಂದ ಉಂಟಾಗಬಹುದು. ಈ ಸಂದರ್ಭದಲ್ಲಿ, ಆಹಾರದಲ್ಲಿ (Diet) ಕೆಲವು ಅಂಶಗಳನ್ನು ಸೇರಿಸುವ ಮೂಲಕ ಕಣ್ಣುರೆಪ್ಪೆಗಳನ್ನು ದಪ್ಪಗೊಳಿಸಬಹುದು.

ಈ  ಆಹಾರಗಳನ್ನು ಡಯಟ್ ನಲ್ಲಿ ಸೇರಿಸಿ:

1.ಮಶ್ರೂಮ್ (Mushroom): ಅಣಬೆಗಳಲ್ಲಿ ವಿಟಮಿನ್ ಬಿ3 ಸಮೃದ್ಧವಾಗಿದೆ. ಇದರಲ್ಲಿರುವ ವಿಟಮಿನ್ ಬಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಸೆಲ್ ಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ, ಇದು ಕಣ್ಣಿನ ರೆಪ್ಪೆ ವೇಗವಾಗಿ ಬೆಳೆಯುವಂತೆ ಮಾಡುತ್ತದೆ.

dry fruits

2. ಡ್ರೈ ಫ್ರುಟ್ಸ್ (Dry fruits): ಡ್ರೈ ಫ್ರುಟ್ಸ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮಾತ್ರವಲ್ಲ, ಇದು  ಕಣ್ಣಿನ ರೆಪ್ಪೆಗಳು ಬೆಳೆಯಲು ಸುಲಭವಾದ ವಿಷಯವಾಗಿದೆ. ಇದರಲ್ಲಿ ಸಾಕಷ್ಟು ವಿಟಮಿನ್ ಇ ಮತ್ತು ಒಮೆಗಾ 3 ಇದ್ದು, ಕಣ್ಣಿನ ರೆಪ್ಪೆಗಳ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇವೆರಡರ ಸಂಯೋಜನೆಯು ಕಣ್ಣಿನ ರೆಪ್ಪೆಯ ಬೇರುಗಳನ್ನು ಬಲಪಡಿಸುತ್ತದೆ.

3.ಬೀನ್ಸ್ (Beans): ಬೀನ್ಸ್ ನಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲ ಮತ್ತು ವಿಟಮಿನ್ ಎಚ್ ಇದೆ. ಫೋಲಿಕ್ ಆಮ್ಲವು ಕಣ್ಣಿನ ರೆಪ್ಪೆಯ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ ಎಚ್ ರಕ್ತ ಪರಿಚಲನೆಯನ್ನು ಬೀಳದಂತೆ ತಡೆಯುತ್ತದೆ.

4.ಹಣ್ಣುಗಳು ಮತ್ತು ತರಕಾರಿಗಳು (Fruits and vegetables): ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವ ಹಣ್ಣುಗಳು ಕಣ್ಣಿನ ರೆಪ್ಪೆಗಳನ್ನು ಉದ್ದ, ದಪ್ಪ ಮತ್ತು ಸದೃಢಗೊಳಿಸಲು ಕೆಲಸ ಮಾಡುತ್ತವೆ. ಅವು ದೇಹದಲ್ಲಿ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಕಣ್ಣಿನ ಲಾಶ್ ಗೆ ವಾಲ್ಯೂಮ್ ಆಗಿ ಕೆಲಸ ಮಾಡುತ್ತದೆ.

5. ಧಾನ್ಯಗಳು : ವಿವಿಧ ಧಾನ್ಯಗಳು ಕಬ್ಬಿಣ ಮತ್ತು ವಿಟಮಿನ್ ಬಿ6 (Vitamin B6) ಅನ್ನು ಹೊಂದಿರುತ್ತವೆ, ಅದು ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ವಿಶೇಷ ವರ್ಣದ್ರವ್ಯ ಅಂಶವಾಗಿದೆ. ಇದು ಹೆಚ್ಚು ಉತ್ಪತ್ತಿಯಾದರೆ ಕಣ್ಣು ರೆಪ್ಪೆ ದೀರ್ಘಕಾಲದವರೆಗೆ ಕಪ್ಪು ಮತ್ತು ದಟ್ಟವಾಗಿರುತ್ತದೆ. 

click me!