ಕೊರೋನಾ ಭಯವನ್ನು ಬಿಟ್ಟು ನವರಾತ್ರಿಯನ್ನು ಸಂಭ್ರಮದಿಂದ ಈ ರೀತಿ ಆಚರಿಸಿ

First Published Oct 1, 2021, 5:58 PM IST

ನವರಾತ್ರಿ ಇನ್ನೆನೂ ವಾರದಲ್ಲಿ ಬರಲಿದೆ, ಆದರೆ ಕೋವಿಡ್-19 ಇನ್ನು ಸುತ್ತುವರೆದಿರುವುದರಿಂದ ಸಾಧ್ಯವಾದಷ್ಟು ಸಾರ್ವಜನಿಕವಾಗಿ ಸೇರದಿರುವುದೇ ಉತ್ತಮ. ಯಾಕೆಂದರೆ ಇದರಿಂದ ಕೊರೋನಾ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹಬ್ಬಗಳು, ಆಚರಣೆಗಳು ಮತ್ತು ಕುಟುಂಬ ಕೂಟಗಳು ಕೊರೋನಾದಿಂದಾಗಿ ಸ್ಥಗಿತಗೊಂಡಿದ್ದವು, ಆದರೆ ಚಿಂತಿಸಬೇಡಿ. ಪ್ರಸ್ತುತ ಬಿಕ್ಕಟ್ಟಿನ ನಡುವೆ ನವರಾತ್ರಿಯನ್ನು ಹೇಗೆ ಆಚರಿಸುವುದು ಎಂಬುದರ ಬಗ್ಗೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ. 
 

ಆನ್ ಲೈನ್ ಪೂಜೆ ಆಯೋಜಿಸಿ (Host online pooja gatherings)
ನಿಮ್ಮ ಸಂಬಂಧಿಕರನ್ನು ಝೂಮ್ ಕರೆಯಲ್ಲಿ ಆಹ್ವಾನಿಸಿ ಮತ್ತು ಒಟ್ಟಿಗೆ ಪೂಜೆಯನ್ನು ಆಚರಿಸಿ. ಈ ರೀತಿಯಾಗಿ, ಪ್ರತಿಯೊಬ್ಬ ಕುಟುಂಬದ ಸದಸ್ಯರು ಹಾಜರಿರಬಹುದು, ಮತ್ತು ನೀವು ಮಿಸ್ ಮಾಡುತ್ತೀರಿ ಎಂಬ ಭಯವಿಲ್ಲ.ಕೋವಿಡ್ ಭಯ ಇಲ್ಲದೇ ಈ ರೀತಿಯಾಗಿ ಎಲ್ಲರೂ ಜೊತೆಯಾಗಿ ಆಚರಣೆ ಮಾಡಬಹುದು.

ಆಹಾರ ಪೊಟ್ಟಣಗಳನ್ನು ಕಳುಹಿಸಿ (Send food packages)
ಹಬ್ಬದ ಸಮಯದಲ್ಲಿ ಅಜ್ಜಿ, ಅಥವಾ ನೀವು  ಸಂಬಂಧಿಕರು (Relatives) ಮಾಡಿದ ವಿವಿಧ ಭಕ್ಷ್ಯಗಳನ್ನು (Sweets) ಮಿಸ್ ಮಾಡಿಕೊಳ್ಳುತ್ತಿದ್ದರೆ ಆದರೆ ಅವರ ಮನೆಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ? ಅವರಿಗೆ ಅಲ್ಲಿಂದ ಅದು ಪ್ಯಾಕೇಜ್ ಮಾಡಿ ಫೂಡ್ ಡೆಲಿವರಿ (Food Delivery) ಮಾಡಲು ಹೇಳಬಹುದು. ಜೊತೆಗೆ ನೀವೂ ಸಹ ಅವರಿಗೆ ಅದನ್ನು ಕಳುಹಿಸಿಕೊಡಬಹುದು. 
 

ಮನೆಯಲ್ಲಿ ಕೀರ್ತನೆಗಳನ್ನು ಹಾಡಿ (Kirtans at home)
ನೀವು ವಿಸ್ತೃತ ಕುಟುಂಬವನ್ನು ಕೀರ್ತನೆ, ಭಜನೆ ಪೂಜೆಗಾಗಿ ಕರೆಯಲು ಸಾಧ್ಯವಾಗದಿದ್ದರೆ, ಮಕ್ಕಳು, ಹೆಂಗಸರು ಮತ್ತು ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಚೆನ್ನಾಗಿ ಕೀರ್ತನೆಗಳನ್ನು ಹಾಡುವ ಮೂಲಕ ಸಮಯ ಕಳೆಯಿರಿ. ಇದರಿಂದ ಬ್ಯುಸಿ ಸಮಯದಲ್ಲೂ ಎಲ್ಲರೂ ಜೊತೆಯಾಗಿ ಒಟ್ಟಾಗುವ ಸಾಧ್ಯತೆ ಇರುತ್ತದೆ. 


ಹಸುಗಳು ಮತ್ತು ಅಗತ್ಯವಿರುವ ಜನರಿಗೆ ಆಹಾರ ನೀಡುವುದು (Feeding cows and strays)
ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಊಟ ನೀಡಲಾಗುತ್ತದೆ. ಆದರೆ ಈ ವರ್ಷ ಹೆಚ್ಚಿನವರು ತಮ್ಮ ಮಕ್ಕಳನ್ನು ಇತರರ ಮನೆಗೆ ಕಳುಹಿಸಲು ಬಯಸುವುದಿಲ್ಲ. ಆದರೆ ಚಿಂತಿಸಬೇಡಿ, ಈ ಬಾರಿ ನೀವು ದಾರಿ ತಪ್ಪಿದ ಹಸುಗಳು ಅಥವಾ ಅಗತ್ಯವಿರುವ ಜನರಿಗೆ ಆಹಾರ ನೀಡಬಹುದು. 

ಮನೆಯಲ್ಲಿ ಸಣ್ಣ ಪೆಂಡಾಲ್ (small pandals )ಮಾಡಿ
ಪ್ರತಿ ವರ್ಷ ಜನರು ಪೂಜೆ ಮತ್ತು ಪ್ರಾರ್ಥನೆಗಾಗಿ ದೊಡ್ಡ ದುರ್ಗಾ ಪೆಂಡಾಲ್ ಗಳಿಗೆ ಹೋಗುತ್ತಾರೆ, ಆದರೆ ಈ ವರ್ಷ ನೀವು ನಿಮ್ಮ ಪುಟ್ಟ ಪೆಂಡಾಲ್ ಅನ್ನು ಮನೆಯಲ್ಲಿ ಸ್ಥಾಪಿಸಬಹುದು, ಇಂಟರ್ನೆಟ್ ನಲ್ಲಿ ಅಲಂಕಾರದ ಕುರಿತು ಹಲವಾರು ಮಾಹಿತಿ ಸಿಗುತ್ತವೆ. ಇವುಗಳನ್ನು ನೀವು ಪಾಲಿಸಬಹುದು. 

ಮನೆಯಲ್ಲಿಯೇ ಹೊಸ ಉಡುಪು ಧರಿಸಿ (dressing up) ಆನಂದಿಸಿ
ಹಬ್ಬದ ಸೀಸನ್ ನಲ್ಲಿಎಲ್ಲಾ ಈ ಬಾರಿ ಮನೆಯಲ್ಲಿಯೇ ಇದ್ದರೂ ಸುಮ್ಮನೆ ಏಕೆ ಕುಳಿತುಕೊಳ್ಳುವುದು?  ಮನೆಯ ಪ್ರತಿಯೊಬ್ಬ ಮಹಿಳೆಯೂ ಸುಂದರವಾಗಿ ಕಾಣಲು ಮತ್ತು ಹಬ್ಬದ ಸಂಭ್ರಮವನ್ನು ಎಂಜಾಯ್ ಮಾಡಲು ಅರ್ಹರಾಗಿರುತ್ತಾರೆ. ಆದುದರಿಂದ ಈ ಸಂದರ್ಭವನ್ನು ಬಳಸಿಕೊಂಡು ಪ್ರತಿಯೊಬ್ಬರು ಮನೆಯಲ್ಲಿಯೇ ಹೊಸ ಡ್ರೆಸ್ ಧರಿಸಿ ಎಂಜಾಯ್ ಮಾಡಿ. 

ಮನೆಯಲ್ಲಿ ಪೂಜಾ ಚಟುವಟಿಕೆಗಳನ್ನು (pooja activities) ಆಯೋಜಿಸಿ
ರಂಗೋಲಿ ಸ್ಪರ್ಧೆ, ಸಿಹಿ ತಯಾರಿಕೆ ಮತ್ತು ಇನ್ನಿತರ ಸ್ಪರ್ಧೆಗಳನ್ನು ಒಂಬತ್ತು ದಿನಗಳ ವರೆಗೆ ಮನೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಬಹುದು. ನವರಾತ್ರಿಯ ಮಹತ್ವವನ್ನು ವಿವರಿಸುವಾಗ ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳಲು ಮತ್ತು ಅವರೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಮರೆಯಬೇಡಿ.

click me!