ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಬಗ್ಗೆ ವಿಶೇಷ ಮಾಹಿತಿಯೊಂದು ಲಭ್ಯವಾಗಿದೆ. ರಾಹುಲ್ ದ್ರಾವಿಡ್ ಅವರ ಜೊತೆಗಿರುವ ಚಿತ್ರವನ್ನು ಸೀರಿಯಲ್ ನಟಿಯೊಬ್ಬರು ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಾಕಿಕೊಂಡಿದ್ದಾರೆ.
ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ದ್ರಾವಿಡ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಲ್ಲದೆ, 'ದ್ರಾವಿಡ್ಸ್' ಎಂದು ಕ್ಯಾಪ್ಶನ್ ಕೂಡ ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲಿಯೇ ರಾಹುಲ್ ದ್ರಾವಿಡ್‌ಗೂ ಸೀರಿಯಲ್ ನಟಿಗೂ ಇರುವ ಲಿಂಕ್ ಏನು ಎನ್ನುವದರ ಬಗ್ಗೆ ಪ್ರಶ್ನೆ ಉದ್ಭವವಾಗಿದೆ.
ಮರಾಠಿ ಸೀರಿಯಲ್ ನಟಿಯಾಗಿರುವ ಆದಿತಿ ವಿನಾಯಕ್ ದ್ರಾವಿಡ್, ರಾಹುಲ್ ದ್ರಾವಿಡ್ ಅವರ ಜೊತೆಗಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.
ಇದರ ಮೂಲವನ್ನು ಹುಡುಕುತ್ತಾ ಹೋದಾಗ ಗೊತ್ತಾದ ವಿಚಾರವೇನೆಂದರೆ ರಾಹುಲ್ ದ್ರಾವಿಡ್ ಹಾಗೂ ಅದಿತಿ ವಿನಾಯಕ್ ದ್ರಾವಿಡ್ ಇಬ್ಬರೂ ಕೂಡ ಸಂಬಂಧಿಗಳು.
2022ರಲ್ಲಿ ಜನವರಿ 11 ರಂದು ಇವರ ನಂಟಿನ ಕುರಿತಾದ ಒಂದು ಫೋಟೋವನ್ನು ಆದಿತಿ ವಿನಾಯ್ ದ್ರಾವಿಡ್ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರ ಜನ್ಮದಿನಕ್ಕೆ ಶುಭಕೋರಿ ಆದಿತಿ ವಿನಾಯಕ್ ದ್ರಾವಿಡ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಹುಲ್ ದ್ರಾವಿಡ್ ಅವರ ಜೊತೆಗೆ ತಮ್ಮ ಬಾಲ್ಯದ ಚಿತ್ರವನ್ನು ಆಕೆ ಹಂಚಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರ ಜನ್ಮದಿನಕ್ಕೆ ಶುಭಕೋರಿ ಆದಿತಿ ವಿನಾಯಕ್ ದ್ರಾವಿಡ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ರಾಹುಲ್ ದ್ರಾವಿಡ್ ಅವರ ಜೊತೆಗೆ ತಮ್ಮ ಬಾಲ್ಯದ ಚಿತ್ರವನ್ನು ಆಕೆ ಹಂಚಿಕೊಂಡಿದ್ದಾರೆ.
ನಾನು ಈ ಸರ್‌ನೇಮ್‌ಅನ್ನು ಯಾವುದೇ ಕಾರಣಕ್ಕೂ ಬದಲಾಯಿಸಿಕೊಳ್ಳಲು ಬಯಸೋದಿಲ್ಲ. ನಿಮ್ಮ ಕುರಿತಾಗಿ ಪ್ರೀತಿ ಹಾಗೂ ಗೌರವ ಜೀವನಪೂರ್ತಿ ಇರಲಿದೆ ಎಂದು ಅದಿತಿ ದ್ರಾವಿಡ್ ಬರೆದುಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಜೊತೆಗೆ ಮಾತ್ರವಲ್ಲದೆ, ಕಪಿಲ್ ದೇವ್ ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರಗಳನ್ನು ಕೂಡ ಆದಿತಿ ವಿನಾಯಕ್ ದ್ರಾವಿಡ್ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಭಾವಂತ ಮರಾಠಿ ನಟಿಯಾಗಿರುವ ಆದಿತಿ ದ್ರಾವಿಡ್ ತಮ್ಮ ನಿಕ್‌ನೇಮ್ ಆದಿತಿ ಎನ್ನುವ ಹೆಸರಿನಿಂದಲೇ ಹೆಚ್ಚಾಗಿ ಇಂಡಸ್ಟ್ರಿಯಲ್ಲಿ ಪರಿಚಿತರಾಗಿದ್ದಾರೆ. ಆದರೆ, ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಸಂಪೂರ್ಣ ಆದಿತಿ ವಿನಾಯಕ್ ದ್ರಾವಿಡ್ ಎನ್ನುವ ಹೆಸರನ್ನು ಹಾಕಿಕೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿರುವ ಆದಿತಿ ದ್ರಾವಿಡ್, ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದಾರೆ. ನೋಡಲು ಆಕರ್ಷಕವಾಗಿರುವ ಈಕೆ ಅದೇ ಕಾರಣದಿಂದಲೇ ಕಿರುತೆರೆಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಆದಿತಿ ವಿನಾಯಕ್ ದ್ರಾವಿಡ್ ತಮ್ಮ ಶಾಲಾ ದಿನಗಳನ್ನು ಪುಣೆಯ ಅಭಿನವ ವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಕಾಲೇಜು ದಿನಗಳನ್ನು ಪುಣೆಯ ಬಿಎಂಸಿಸಿಯಲ್ಲಿ ಪೂರೈಸಿ ಪದವಿ ಪಡೆದುಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರನ್ನು ತಮ್ಮ ಸಂಬಂಧಿ ಎಂದು ಹೇಳಿಕೊಂಡಿರುವ ಆದಿತಿ ವಿನಾಯಕ್ ದ್ರಾವಿಡ್, ತಮ್ಮ ತಂದೆ-ತಾಯಿಯ ವಿಚಾರಗಳನ್ನು ಹೆಚ್ಚಾಗಿ ಗೌಪ್ಯವಾಗಿ ಇರಿಸಿದ್ದಾರೆ.
ಅದಿತಿ ದ್ರಾವಿಡ್ ಸದ್ಯ ಅವಿವಾಹಿತರಾಗಿದ್ದು, ಸಿಂಗಲ್ ಆಗಿಯೇ ಇರುವುದಾಗಿ ತಿಳಿಸಿದ್ದಾರೆ. ತನ್ನ ಬಾಯ್ ಫ್ರೆಂಡ್ ಯಾವುದಾದರೂ ಇದ್ದರೆ ಯಾರು ಎಂದು ಆಕೆ ಇನ್ನೂ ಬಹಿರಂಗಪಡಿಸಿಲ್ಲ.
ಅದಿತಿ ದ್ರಾವಿಡ್ ಸದ್ಯ ಅವಿವಾಹಿತರಾಗಿದ್ದು, ಸಿಂಗಲ್ ಆಗಿಯೇ ಇರುವುದಾಗಿ ತಿಳಿಸಿದ್ದಾರೆ. ತನ್ನ ಬಾಯ್ ಫ್ರೆಂಡ್ ಯಾವುದಾದರೂ ಇದ್ದರೆ ಯಾರು ಎಂದು ಆಕೆ ಇನ್ನೂ ಬಹಿರಂಗಪಡಿಸಿಲ್ಲ.
ಕಿರುತೆರೆಯಲ್ಲಿ ಆದಿತಿ ದ್ರಾವಿಡ್ ಸಾಕಷ್ಟು ಹೆಸರು ಮಾಡಿದ್ದರೂ. ಇನ್ನೂ ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿಲ್ಲ. ಅವರು ಭರತನಾಟ್ಯ ಡಾನ್ಸರ್ ಕೂಡ ಆಗಿದ್ದಾರೆ.
ಕೆಲ ವರ್ಷಗಳ ಹಿಂದೆ ಆದಿತಿ ವಿನಾಯಕ್ ದ್ರಾವಿಡ್ ತಮ್ಮದೇ ಆದ ಕ್ಲಾತಿಂಗ್ ಬ್ರ್ಯಾಂಡ್‌ಅನ್ನು ಘೋಷಿಸಿದ್ದಾರೆ. ದಿ ಡ್ರೆಸ್‌ವಾಲಿ ಕಂಪನಿ ಎಂದು ಅದಕ್ಕೆ ಹೆಸರಿಟ್ಟಿದ್ದಾರೆ.
ಅಂದಾಜು ಕಳೆದ ಮೂರು ವರ್ಷಗಳಿಂದ ಕಂಪನಿಯ ಜೊತೆ ಕೆಲಸ ಮಾಡುತ್ತಿರುವ ಆದಿತಿ ದ್ರಾವಿಡ್, ಅಕ್ಷಯ ತೃತೀಯ ದಿನದಂದು ಕಂಪನಿಯನ್ನು ಅನಾವರಣ ಮಾಡಿದ್ದರು.
ಅದಿತಿ ಹೆಮ್ಮೆಯಿಂದ ತನ್ನ ಚಿಕ್ಕಪ್ಪ, ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರೊಂದಿಗೆ ತನ್ನ ವಂಶವನ್ನು ಹಂಚಿಕೊಂಡಿದ್ದಾರೆ.ರಾಹುಲ್ ದ್ರಾವಿಡ್‌ಗೆ ಹೃತ್ಪೂರ್ವಕ ಹುಟ್ಟುಹಬ್ಬದ ಸಂದೇಶದಲ್ಲಿ ಅವರು ತಮ್ಮ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು.
ಇನ್ನು ಕ್ರಿಕೆಟ್‌ನೊಂದಿಗೆ ತಮ್ಮ ಕುಟುಂಬ ಬೆಸೆದುಕೊಂಡಿರುವ ಆಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವೇ ಮೆಚ್ಚುಗೆಯಾಗುತ್ತದೆ ಎನ್ನುತ್ತಾರೆ. ತಮಗೆ ಐಪಿಎಲ್ ನೋಡುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.