ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?

ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?

Published : Nov 30, 2024, 11:39 AM IST

ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ. 

ಬಳ್ಳಾರಿ(ನ.30):   ಪುಟ್ಟ ಜೀವಗಳು ಹುಟ್ಟಿ ದಿನಗಳು ಕಳೆದಿದ್ದವು ಅಷ್ಟೆ. ಸತ್ತು ಬದುಕಿದಂತಹ ನೋವನ್ನ ಅನುಭವಿಸಿ ಜನ್ಮ ಕೊಟ್ಟಿದ್ದವು ಆ ಹೆಣ್ಣು ಜೀವಗಳು.. ಆದ್ರೆ, ಆ ಹೆಣ್ಣು ಜೀವಗಳೇ ಇಂದಿಲ್ಲ. ಒಂದಲ್ಲ… ಎರಡಲ್ಲ ಬಾಣಂತಿಯರ ಸಾವಿನ ಮರಣ ಮೃದಂಗವೇ ಬಾರಿಸಿದೆ. ನಿರ್ಲಕ್ಷ್ಯವೋ..? ನಿರ್ಲಜ್ಜತನವೋ..? ಇನ್ನೆಷ್ಟು ಬಾಣಂತಿಯರ ಬಲಿ ಬೇಕು..? ರಾಜ್ಯದ ಬಡ ಹೆಣ್ಣು ಮಕ್ಕಳ ಜೀವದ ಜೊತೆಗೆ ಇದೆಂಥಾ ಚೆಲ್ಲಾಟ..? ಜೀವ ಕೊಟ್ಟ ಜೀವಗಳನ್ನೇ ತೆಗೆದುಬಿಡ್ತಾ ಮೆಡಿಕಲ್ ಮಾಫಿಯಾ..? ಇದೇ ಈ ಹೊತ್ತಿನ ವಿಶೇಷ ಬಾಣಂತಿಯರ ಬಲಿ.. 

ಸದ್ಯ ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ. 

ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?

ರಾಜಕೀಯ ಆರೋಪ – ಪ್ರತ್ಯಾರೋಪಗಳು ಏನೇ ಇರಲಿ.. ಸಾವಿಗೆ ಕಾರಣವೂ ಕೂಡ ಏನೇ ಆಗಿರಲಿ.. ಹೋದ ಜೀವಗಳು ಮತ್ತೆ ಬರಲ್ಲ. ಆ ನೋವು ಬಲಿಯಾದ ಬಾಣಂತಿಯರ ಕುಟುಂಬವನ್ನ ಕಾಡ್ತಿದೆ. 

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಸಾವಿನ ಅರ್ಧ ಸತ್ಯ ಈಗಾಗಲೇ ಹೊರಬಿದ್ದಿದ್ದು ಇನ್ನರ್ಧ ಸತ್ಯ ಹೊರ ಬರಬೇಕಿದೆ. ಇಂದಲ್ಲಾ, ನಾಳೆ ಸಾವಿಗೆ ಕಾರಣ ಏನು ಅಂತ ಗೊತ್ತಾಗ್ಬಹುದು. ಆದ್ರೆ, ಸತ್ತು ಹೋದ ಆ ಜೀವಗಳು ಮತ್ತೆ ಮರಳಿ ಬರುತ್ವಾ..? ಹೆಣ್ಣು ಮಕ್ಕಳನ್ನ ಕಳೆದುಕೊಂಡ ಆ ಕುಟುಂಬದವರ ಆಕ್ರಂದನವನ್ನ ನೋಡೋದಿಕ್ಕೆ ಸಾಧ್ಯವೇ ಇಲ್ಲ. 

ನಾಲ್ಕು ಬಾಣಂತಿಯರ ಸಾವಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಯಾರ ನಿರ್ಲಕ್ಷ್ಯವು ಕಾರಣವಲ್ಲವಂತೆ. ಹಾಗಿದ್ರೆ, ನಾಲ್ಕು ಬಡ  ಬಾಣಂತಿಯರು ಅಲ್ಲಿ ಬಲಿಯಾಗಿದ್ದು ಹೇಗೆ..? ತಾಯಿ ಇಲ್ಲದೇ ತಬ್ಬಲಿಯಾಗಿದ್ದಾವಲ್ಲಾ  ಆ ಹಸುಗೂಸುಗಳು ಅವುಗಳು ನಮ್ಮ ಹಡೆದವ್ವನಿಗೆ ಏನಾಯ್ತು ಅಂತ ಕೇಳಿದ್ರೆ ಅದಕ್ಕೆ ಉತ್ತರವೇನು..? ಸದ್ಯಕ್ಕೆ ತಜ್ಞರ ತಂಡ ಇದಕ್ಕೆ ಉತ್ತರ ಕೊಟ್ಟಿದೆ. ಹಾಗಿದ್ರೆ, ಏನಾ ಉತ್ತರ..? ಇಲ್ಲಿ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭಯಾನಕವಾಗಿದೆ ಗೊತ್ತಾ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more