ಪ್ರಕೃತಿ ಮಡಿಲಲ್ಲಿ ಬೋಲ್ಡ್ ಆವತಾರ ತಾಳಿದ ಸಾರಾ ಅಲಿ ಖಾನ್; ಫೋಟೋ ವೈರಲ್

First Published Nov 12, 2022, 11:26 AM IST

ಸಾರಾ ಅಲಿ ಖಾನ್ ಪ್ರವಾಸದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸುತ್ತಾರೆ. ಇದೀಗ ಸಾರಾ ಹಂಚಿಕೊಂಡಿರುವ ಹಾಟ್ ಫೋಟೋ ವೈರಲ್ ಆಗಿದೆ. 

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳ ಸಂಖ್ಯೆ ಕಮ್ಮಿ ಇದ್ದರೂ ಇಲ್ಲದಿದ್ದರೂ ಸಾರಾ ಮಾತ್ರ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಸದಾ ಜಿಮ್, ವರ್ಕೌಟ್, ಯೋಗ ಅಂತ ಬ್ಯುಸಿ ಇರುವ ಸಾರಾ ಆಗಾಗ ಪ್ರವಾಸವನ್ನು ಎಂಜಾಯ್ ಮಾಡುತ್ತಿರುತ್ತಾರೆ. 

ಸಾರಾ ಅಲಿ ಖಾನ್ ಪ್ರವಾಸದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸುತ್ತಾರೆ. ಹಾಟ್ ಅಂಡ್ ಬೋಲ್ಡ್ ಅವತಾರದ ಮೂಲಕ ಸದ್ದು ಮಾಡುವ ಸಾರಾ ಇದೀಗ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಬಾಲಿವುಡ್ ಸ್ಟಾರ್ ನಟಿ ಸಾರಾ ಪ್ರಕೃತಿ ಮಡಿಲಲ್ಲಿ ಬೋಲ್ಡ್ ಅವತಾರ ತಾಳಿದ್ದಾರೆ. ಹೌದು ಬಿಕಿನಿ ಧರಿಸಿ ಪೋಸ್ ನೀಡಿರುವ ಸಾರಾ ಅಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರವಾಸದ ಒಂದಿಷ್ಟು ಫೋಟೋಗಳನ್ನು ಸಾರಾ ಶೇರ್ ಮಾಡಿದ್ದಾರೆ. 

ಸಾರಾ ಅಲಿ ಖಾನ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ದಪ್ಪಗಿದ್ದ ಸಾರಾ ಅಲಿ ಖಾನ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ಬೆಂಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಸಾರಾ ಸಿನಿಮಾ ವಿಚಾರಕ್ಕೆ ಬರುವುದಾದರೆ 2018ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸಾರಾ ಅಲಿ ಖಾನ್ ನಾಲ್ಕೈದು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಕೊನೆಯದಾಗಿ ಸಾರಾ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಕಾಲಿವುಡ್ ಸ್ಟಾರ್ ಧನುಷ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 

ಸದ್ಯ ಸಾರಾ ಬಳಿ ಎರಡು ಸಿನಿಮಾಗಳಿವೆ. ಗ್ಯಾಸ್‌ಲೈಟ್ ಮತ್ತು ಇನ್ನು ಹೆಸರಿಡದ ಮತ್ತೊಂದು ಸಿನಿಮಾ ಸಾರಾ ಕೈಯಲ್ಲಿದೆ. ಚಿತ್ರರಂಗದಲ್ಲಿ ಸಾರಾಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿಲ್ಲ. ಹಾಗಾಗಿ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರೂ ಸಾರಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಿಲ್ಲ. 

click me!