ಓ ಮೈ ಗಾಡ್ ಏನಮ್ಮ ಇದು..!; ಇಯರ್ ಎಂಡ್‌ಗೆ ಹಾಟ್ ಫೋಟೋ ಹಂಚಿಕೊಂಡ ಮಲೈಕಾ ಸಖತ್ ಟ್ರೋಲ್

First Published Dec 31, 2022, 4:54 PM IST

ಬಾಲಿವುಡ್ ನಟಿ ಮಲೈಕಾ ಅರೋರಾ ಶೇರ್ ಮಾಡಿರುವ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಬಾಲಿವುಡ್ ನಟಿ ಮಲೈಕಾ ಅರೋರಾ ಸದ್ಯ ಒಟಿಟಿಯಲ್ಲಿ ಬ್ಯುಸಿಯಾಗಿದ್ದಾರೆ. ಮೂವಿಂಗ್ ಇನ್ ವಿತ್ ಮಲೈಕಾ' ಶೋ ಮೂಲಕ ಮೊದಲ ಬಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಶೋ ಮೂಲಕ ಅನೇಕ ವಿಚಾರಗಳನ್ನು ಮಲೈಕಾ ರಿವೀಲ್ ಮಾಡಿದ್ದಾರೆ. ಸಿನಿಮಾ ಮಾಡುತ್ತಿದ್ದರೂ ಮಲೈಕಾ ಸದಾ ಟ್ರೆಂಡಿಂಗ್‌ನಲ್ಲಿರುತ್ತಾರೆ. 

ಸದಾ ಫೋಟೋಶೂಟ್ ಮೂಲಕ ಸದ್ದು ಮಾಡುವ ನಟಿ ಮಲೈಕಾ ಇದೀಗ ಮತ್ತೊಂದು ಹಾಟ್ ಫೋಟೋಶೂಟ್ ಶೇರ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ ಮಲೈಕಾ ಶೇರ್ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. 

ನೀಲಿ ಬಣ್ಣದ ಬಿಕಿನಿ ಟಾಪ್ ಮತ್ತು ಪ್ಯಾಂಟ್ ಧರಿಸಿರುವ ಮಲೈಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ಮುಂದೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿಕೊಂಡಿರುವ ಮಲೈಕಾ ತರಹೇವಾರಿ ಪೋಸ್ ನೀಡಿದ್ದಾರೆ. 

ಮಲೈಕಾ ಫೋಟೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಕಾಮೆಂಟ್ ಹರಿದು ಬರುತ್ತಿದೆ. ಕೆಲವರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಹೊಗಳುತ್ತಿದ್ದಾರೆ. ಮಲೈಕಾ ಫಿಟ್ನೆಸ್‌ಗೆ ಫಿದಾ ಆಗಿದ್ದಾರೆ. ಆದರೆ ಈ ಪರಿ ಬೋಲ್ಡ್ ಆಗಿರುವ ಮಲೈಕಾ ನೋಡಿ ಏನಮ್ಮ ಅವತಾರ ಎಂದು ಕೇಳುತ್ತಿದ್ದಾರೆ.   

ಅಂದಹಾಗೆ ಮಲೈಕಾ  ಒಟಿಟಿಯಲ್ಲಿ ಬ್ಯುಸಿಯಾಗಿದ್ದಾರೆ.  ಮೂವಿಂಗ್ ಇನ್ ವಿತ್ ಮಲೈಕಾ ಶೋ ನಡೆಸಿಕೊಡುತ್ತಿದ್ದಾರೆ.ಈ ಶೋನಲ್ಲಿ ಮಲೈಕಾ ತನ್ನ ವಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅರ್ಬಾಜ್ ಖಾನ್ ಜೊತೆ ವಿಚ್ಛೇದನ ಮತ್ತು ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. 

ಇತ್ತೀಚಿಗಷ್ಟೆ ಮಲೈಕಾ ಧರಿಸಿದ್ದ ಬಟ್ಟೆಯ ಬಗ್ಗೆ ಮಗ ಅರ್ಹಾನ್ ಟ್ರೋಲ್ ಮಾಡಿದ್ದರು. ಮಲೈಕಾ ಅರೋರಾ ಅವರ 20 ವರ್ಷದ ಮಗ ಅರ್ಹಾನ್ ಖಾನ್ ಇತ್ತೀಚೆಗೆ ತನ್ನ ತಾಯಿಯ ವೆಬ್ ಶೋ 'ಮೂವಿಂಗ್ ಇನ್ ವಿತ್ ಮಲೈಕಾ'ದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ತಾಯಿಯ ಡ್ರೆಸ್ ಅನ್ನು ಗೇಲಿ ಮಾಡಿದ್ದರು.

click me!