ಆಯಸ್ಸು ಹೆಚ್ಚಾಗ್ಬೇಕು ಅಂದ್ರೆ ವಯಸ್ಸಾದಾಗ ಇಂಥಾ ಆಹಾರ ತಿನ್ನೋದನ್ನು ಮರೀಬೇಡಿ

By Suvarna NewsFirst Published Oct 7, 2022, 12:24 PM IST
Highlights

ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಾ ಹೋಗುತ್ತವೆ. ಕಡಿಮೆ ರೋಗ ನಿರೋಧಕ ಶಕ್ತಿಯಿಂದ ವಯಸ್ಸಾದವರನ್ನು ಹೆಚ್ಚು ಕಾಯಿಲೆಗಳು ಕಾಡುತ್ತವೆ. ವಯಸ್ಸಾದವರು ಆರೋಗ್ಯವಾಗಿರಲು ಅವರ ಆಹಾರಕ್ರಮ ಹೇಗಿದ್ದರೆ ಒಳ್ಳೆಯದು. ಇಲ್ಲಿದೆ ಹೆಚ್ಚಿನ ಮಾಹಿತಿ. 

ವಯಸ್ಸಾದವರ ಆಯಸ್ಸನ್ನು ಹೆಚ್ಚಿಸಲು, ನಾವು ಅವರ ಆರೋಗ್ಯವನ್ನು ಜೋಪಾನದಿಂದ ಕಾಪಾಡಿಕೊಳ್ಳಬೇಕು. ಉತ್ತಮ ಜೀವನಶೈಲಿ ಮತ್ತು ಆಹಾರಕ್ರಮದಿಂದ ಮಾತ್ರ ಇದನ್ನು ಪಡೆಯಲು ಸಾಧ್ಯ. ಕಳಪೆ ಜೀವನಶೈಲಿ ಮತ್ತು ಆಹಾರ ಹಿರಿಯರಿಗೆ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದೇ ಸಮಯದಲ್ಲಿ, ವೃದ್ಧಾಪ್ಯದಲ್ಲಿ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದಾಗಿ ನಾವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಆಹಾರಗಳಿಂದ ದೂರವಿರಬೇಕು. ಹಾಗಾದರೆ ವೃದ್ಧರ ಆಹಾರ ಕ್ರಮ ಹೇಗಿರಬೇಕು ಮತ್ತು ವೃದ್ಧಾಪ್ಯದಲ್ಲಿ ಅವರಿಗೆ ಯಾವ ಆರೋಗ್ಯಕರ ಆಹಾರ ನೀಡಬೇಕು ?

ಆರೋಗ್ಯ ತಜ್ಞರ ಪ್ರಕಾರ, ವಯಸ್ಸಾದವರ ಆಹಾರದಲ್ಲಿ ವಿವಿಧ ತರಕಾರಿಗಳು (Vegetables), ದ್ವಿದಳ ಧಾನ್ಯಗಳು, ತಾಜಾ ಹಣ್ಣುಗಳು (Fruits), ಧಾನ್ಯಗಳು, ಫೈಬರ್ ಭರಿತ ಆಹಾರಗಳು ಮತ್ತು ಕಡಿಮೆ ಕೊಬ್ಬಿನ ಆಹಾರಗಳು ಇರಬೇಕು. ಜೊತೆಗೆ ದಿನವಿಡೀ ಸಾಕಷ್ಟು ನೀರು (Water) ಕುಡಿಯಬೇಕು ಮತ್ತು ಲಘು ವ್ಯಾಯಾಮ (Exercise) ಮಾಡಬೇಕು ಎಂದು ಸೂಚಿಸಲಾಗಿದೆ. ಹಾಗಿದ್ರೆ ವಯಸ್ಸಾದವರು ಆರೋಗ್ಯವಾಗಿರಲು ಎಂಥಾ ಆಹಾರ ಕೊಡ್ಬೇಕು ಅನ್ನೋದನ್ನು ತಿಳಿಯೋಣ. 

ನಿನಗೆ ನಾನು ನನಗೆ ನೀನು: ವೃದ್ಧ ಜೋಡಿಯ ಅನುರಾಗ ತುಂಬಿದ ವಿಡಿಯೋ ವೈರಲ್

ಹಿರಿಯ ನಾಗರಿಕರು ಎಂಥಾ ಆಹಾರ ಸೇವಿಸೋದು ಒಳ್ಳೆಯದು ?

ಮೊಟ್ಟೆ: ವೃದ್ಧಾಪ್ಯದಲ್ಲಿ, ದೇಹವು (Body) ಪ್ರೋಟೀನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ದೇಹದ ಶಕ್ತಿ ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ನಿರ್ದಿಷ್ಟ ಪ್ರಮಾಣದ ಪ್ರೋಟೀನ್ ಅಗತ್ಯವಿದೆ. ಮೊಟ್ಟೆ (Egg)ಗಳನ್ನು ತಿನ್ನುವುದರಿಂದ ಇದನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ, ವಯಸ್ಸಾದವರ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಬೇಕು. ವೃದ್ಧಾಪ್ಯದಲ್ಲಿ ಮೊಟ್ಟೆಗಳನ್ನು ತಿನ್ನುವುದರಿಂದ 13 ಅಗತ್ಯ ಪೋಷಕಾಂಶಗಳು ದೊರೆಯುತ್ತವೆ.

ಮೊಸರು: ವಯಸ್ಸಾದವರು ತಮ್ಮ ಆಹಾರದಲ್ಲಿ ಮೊಸರನ್ನು (Curd) ಸೇರಿಸಬೇಕು. ಏಕೆಂದರೆ, ಮೊಸರು ತಿಂದರೆ ದೇಹಕ್ಕೆ ಕ್ಯಾಲ್ಸಿಯಂ ಸಿಗುತ್ತದೆ. ಇದು ವೃದ್ಧಾಪ್ಯದಲ್ಲಿ ದುರ್ಬಲಗೊಳ್ಳುತ್ತಿರುವ ಮೂಳೆಗಳನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಇದು ಕರುಳಿನ ಆರೋಗ್ಯಕ್ಕೆ (Gut health) ಅತ್ಯುತ್ತಮ ಆಹಾರವಾಗಿದೆ. ಏಕೆಂದರೆ, ಮೊಸರು ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾದ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ.

ಬ್ರೊಕೊಲಿ: ವೃದ್ಧರೂ ಬ್ರೊಕೋಲಿಯನ್ನು ಸೇವಿಸಬೇಕು. ಏಕೆಂದರೆ, ಬ್ರೊಕೋಲಿಯು ನಾರಿನಂಶವಿರುವ ಆಹಾರ ಮಾತ್ರವಲ್ಲ, ಜೀರ್ಣಕ್ರಿಯೆಯನ್ನು ಸರಿಯಾಗಿ ಇಡುತ್ತದೆ. ಬದಲಿಗೆ, ಬ್ರೊಕೊಲಿಯಲ್ಲಿರುವ ಪೌಷ್ಟಿಕಾಂಶವು ಹೃದ್ರೋಗ, ಮಧುಮೇಹ (Diabetes) ಮತ್ತು ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತದೆ. ಬ್ರೊಕೊಲಿ ಫೈಬರ್, ವಿಟಮಿನ್ ಎ, ವಿಟಮಿನ್ ಕೆ, ಪೊಟ್ಯಾಸಿಯಮ್, ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್‌ಗಳು, ಬಯೋಆಕ್ಟಿವ್ ಸಂಯುಕ್ತಗಳು ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.

ಮೊಬೈಲ್‌ನಿಂದಾಗಿಯೇ ಹಿರಿಯನ್ನು ಇಗ್ನೋರ್ ಮಾಡ್ತಿದ್ದಾರೆ ಮಕ್ಕಳು, ನಿಮಗೂ ಹೀಗನ್ಸುತ್ತಾ?

ಪಾಲಕ್ ಸೊಪ್ಪು: ವೃದ್ಧಾಪ್ಯದಲ್ಲಿ ರಕ್ತಹೀನತೆಯ ಸಮಸ್ಯೆ ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ದೇಹದಲ್ಲಿ ಕಬ್ಬಿಣದ (Iron) ಕೊರತೆಯಿಂದ ಉಂಟಾಗುತ್ತದೆ. ಆದ್ದರಿಂದ ಕಬ್ಬಿಣದಂಶವಿರುವ ಪಾಲಕ್ ಸೊಪ್ಪನ್ನು ವಯಸ್ಸಾದವರ ಆಹಾರದಲ್ಲಿ ಸೇರಿಸಬೇಕು. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಶಿಯಂ, ಫೋಲೇಟ್, ಪ್ರೊಟೀನ್ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಈ ಆರೋಗ್ಯಕರ ಆಹಾರವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಸಹಾಯಕವಾಗಿದೆ.

ಹಾಲು: ವೃದ್ಧಾಪ್ಯದಲ್ಲಿ ಹಾಲು ಕುಡಿಯುವುದರಿಂದ ದೇಹಕ್ಕೆ ಅದ್ಭುತವಾದ ಪ್ರಯೋಜನಗಳು ದೊರೆಯುತ್ತವೆ. ಏಕೆಂದರೆ ಹಾಲು (Milk) ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಪಾನೀಯವಾಗಿದೆ. ವಯಸ್ಸಾದಂತೆ, ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ, ಇದು ಮೂಳೆಗಳನ್ನು ದುರ್ಬಲಗೊಳಿಸುವ ಆಸ್ಟಿಯೊಪೊರೋಸಿಸ್‌ಗೆ ಕಾರಣವಾಗಬಹುದು. ಆದರೆ, ಯಾರಾದರೂ ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿದ್ದರೆ, ಅವರು ಡೈರಿ ಹಾಲಿನ (ಹಸು ಅಥವಾ ಎಮ್ಮೆ ಹಾಲು) ಬದಲಿಗೆ ಸೋಯಾ ಹಾಲು ಕುಡಿಯಬಹುದು.

ಒಣ ಹಣ್ಣುಗಳು: ಸಾಮಾನ್ಯವಾಗಿ ವಯಸ್ಸಾದವರು ಒಣಗಿದ ಹಣ್ಣುಗಳು (Dry fruits) ಮತ್ತು ಆರೋಗ್ಯಕರ ಬೀಜಗಳನ್ನು ಸೇವಿಸುವುದಿಲ್ಲ. ಆದರೆ ಇವುಗಳ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನ ದೊರಕುತ್ತದೆ. ಬಾದಾಮಿ, ವಾಲ್‌ನಟ್ಸ್, ಗೋಡಂಬಿ, ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ವಯಸ್ಸಾದಾಗ ಉಂಟಾಗುವ ಆರೋಗ್ಯ ಸಮಸ್ಯೆ (Health problem)ಗಳನ್ನು ತಡೆಯಬಹುದು, 60 ವರ್ಷ ವಯಸ್ಸಿನ ನಂತರ ಟೈಪ್ 2 ಮಧುಮೇಹ, ನರಗಳ ಸಮಸ್ಯೆ, ದುರ್ಬಲ ಜ್ಞಾಪಕ, ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಒಣಹಣ್ಣುಗಳ ಸೇವನೆಯನ್ನು ಇಂಥಾ ಕಾಯಿಲೆಯನ್ನು ದೂರವಿಡಬಹುದು. 

click me!