ಆಹಾರ ತಿನ್ನದೆ ನಮ್ಮ ಕೈಯಲ್ಲಿ ಒಂದಿನಾನೂ ಇರೋಕೆ ಸಾಧ್ಯವಿಲ್ಲ. ಆದ್ರೆ ಇಲ್ಲೊಬ್ಬ ಮಾತ್ರ ಬರೋಬ್ಬರಿ 17 ವರ್ಷಗಳಿಂದ ಆಹಾರವನ್ನೇ ತಿಂದಿಲ್ಲ. ಬರೀ ಕೋಲ್ಡ್ ಡ್ರಿಂಕ್ಸ್ ಕುಡಿದು ಬದುಕಿದ್ದಾನೆ ಈ ಮಹಾನುಭಾವ. ನಂಬೋಕೆ ಕಷ್ಟವಾದರೂ ಇದು ನಿಜ.
ಮನುಷ್ಯನಾದವನು ಹಸಿವಿನಿಂದ ಇರೋದು ಕಷ್ಟ. ಕೆಲವು ಗಂಟೆಗಳ ಕಾಲ ಹಸಿದುಕೊಂಡಿದ್ದರೂ ನಂತರ ಸುಸ್ತು, ನಿಶ್ಯಕ್ತಿ ಕಾಡಲು ಶುರುವಾಗುತ್ತದೆ. ಅಟ್‌ಲೀಸ್ಟ್ ನೀರಾದರೂ ಕುಡಿಯಬೇಕು ಎಂದೆನಿಸುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 17 ವರ್ಷಗಳಿಂದ ಆಹಾರನೇ ತಿಂದಿಲ್ಲ.ಬರೀ ಕೂಲ್‌ಡ್ರಿಂಕ್ಸ್ ಮಾತ್ರ ಕುಡಿದು ಬದುಕಿದ್ದಾನೆ. ಇರಾನ್‌ನ ಘೋಲಮ್ರೆಜಾ, ಹಸಿವಾದ ಅನುಭವೇ ಆಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆಯಾಸವಾದಾಗ ಶಕ್ತಿ ಪಡೆಯಲು ಪೆಪ್ಸಿಯಂತಹ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದಾಗಿ ತಿಳಿಸಿದ್ದಾನೆ.
ಜೀವನೋಪಾಯಕ್ಕಾಗಿ ಫೈಬರ್ ಗ್ಲಾಸ್ ರಿಪೇರಿ ಮಾಡುವ ಇರಾನ್‌ನ ಘೋಲಮ್ರೇಜಾ, ಜೂನ್ 2006ರಲ್ಲಿ ಆಹಾರ (Food)ವನ್ನು ಸೇವಿಸುವುದನ್ನು ನಿಲ್ಲಿಸಿದನು.'ನನಗೆ ಹಸಿವಾಗಲ್ಲಿಲ್ಲ. ಹೀಗಾಗಿ ನಾನು ಯಾವುದೇ ಆಹಾರವನ್ನು ತಿನ್ನಲ್ಲಿಲ್ಲ. ಮತ್ತಿನ ದಿನಗಳಲ್ಲಿ ಇದೇ ಅಭ್ಯಾಸ ಮುಂದುವರಿಯಿತು. ನಾನು ಇದಕ್ಕೆ ಇನ್ನೂ ಕಾರಣವನ್ನು ಕಂಡುಹಿಡಿದಿಲ್ಲ' ಎಂದು ಮಧ್ಯ ವಯಸ್ಸಿನ ವ್ಯಕ್ತಿ ತಿಳಿಸಿದ್ದಾನೆ. ಯಾವುದೇ ಆಹಾರವನ್ನು ತಿನ್ನದೆ ವ್ಯಕ್ತಿ ಆರೋಗ್ಯ (Healthy)ವಾಗಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಮಗನಿಗೆ ಮಾತ್ರವಲ್ಲ, ಅವನ ಫ್ರೆಂಡ್‌ಗೂ ಲಂಚ್ ಬಾಕ್ಸ್ ಕಳುಹಿಸೋ ಅಮ್ಮನಿಗೆ ಚಪ್ಪಾಳೆ!
'ನನಗೆ ಒಂದು ವಿಚಿತ್ರವಾದ ಅನುಭವವಾಗುತ್ತದೆ, ನನ್ನ ಬಾಯಿಯೊಳಗೆ ಕೂದಲಿನಂತೆ ಯಾವುದೋ ವಸ್ತುವಿರುವಂತೆ ಭಾಸವಾಗುತ್ತದೆ. ಈ ಕೂದಲಿನ ತಲೆ ನನ್ನ ಬಾಯಿಯೊಳಗೆ ಮತ್ತು ಕೊನೆಯಲ್ಲಿ ನನ್ನ ಹೊಟ್ಟೆಯೊಳಗೆ ಇದೆ ಎಂಬಂತಾಗುತ್ತದೆ. ಆದರೆ ಏನು ಮಾಡಿದರೂ ಆ ಕೂದಲನ್ನು ತೆಗೆಯಲು ಸಾಧ್ಯವಾಗುವುದಿಲ್ಲ' ಎಂದು ವ್ಯಕ್ತಿ ತಿಳಿಸಿದ್ದಾನೆ. ಮಾತ್ರವಲ್ಲ 'ಗಂಟಲಿನಿಂದ ಕೂದಲು ಎಳೆದಂತಾಗುತ್ತದೆ. ಈ ಬಗ್ಗೆ ನಾನು ವೈದ್ಯರನ್ನು ಭೇಟಿ ಮಾಡಿದೆ' ಎಂದು ವ್ಯಕ್ತಿ ಹೇಳಿದ್ದಾನೆ.
ಘೋಲಮ್ರೇಜಾ ಹಲವಾರು ವೈದ್ಯರನ್ನು ಭೇಟಿ ಮಾಡಿದನು. ಆದರೆ ಯಾರಿಂದಲೂ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಯಾಕೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಸಹ ಪರಿಹಾರ ದೊರಕಲ್ಲಿಲ್ಲ. ಘೋಲಮ್ರೇಜಾ ಮನೆಯವರು ಸಹ ಅವನ ಮುಂದೆ ಊಟ ಮಾಡುವುದಿಲ್ಲ, ಏಕೆಂದರೆ ಮತ್ತೊಬ್ಬರು ತಿನ್ನುವುದನ್ನು ನೋಡಿದರೆ ಘೋಲಮ್ರೇಜಾಗೆ ವಾಕರಿಕೆ ಬರುತ್ತದೆ. ಘೋಲಮ್ರೇಜಾ ಅವರು ರಾತ್ರಿಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಿದ್ರಿಸುತ್ತಾರೆ ಮತ್ತು ದಿನಕ್ಕೆ ಸುಮಾರು ಮೂರು ಲೀಟರ್ ಫಿಜ್ಜಿ ಪಾನೀಯಗಳನ್ನು ಸೇವಿಸುತ್ತಾರೆ ಎಂದು ತಿಳಿದುಬಂದಿದೆ.
ಹಸಿವು ಆಗೋಲ್ವಾ? ಹಾಗಿದ್ರೆ ಹಸಿವನ್ನು ಹೆಚ್ಚಿಸುವ ಮ್ಯಾಜಿಕ್ ಇಲ್ಲಿದೆ
ತನಗೆ ಊಟವಿಲ್ಲದಿದ್ದರೂ ಬೆಕ್ಕುಗಳಿಗೆ ಆಹಾರ ನೀಡ್ತಾಳೆ ಈ ಇಂಗ್ಲೆಂಡ್ ಮಹಿಳೆ
ಮಕ್ಕಳು ಊಟ ಮಾಡಲಿ ಎಂದು ಎರಡು ದಿನಕ್ಕೊಮ್ಮೆ ಆಹಾರ ಸೇವಿಸುವ ಅಮ್ಮಂದಿರು ಹಲವರಿದ್ದಾರೆ. ಪುಟ್ಟ ತಂಗಿ ತಿನ್ನಲಿ ಎಂದು ತನ್ನ ಆಹಾರ ಬಿಟ್ಟುಕೊಟ್ಟ ಅಕ್ಕನಿದ್ದಾಳೆ. ಎಲ್ಲರೂ ತಮ್ಮ ಪ್ರೀತಿಪಾತ್ರರು ಊಟ ಮಾಡಲಿ, ಅವರಿಗೆ ಹಸಿವಿನ ಸಂಕಟ ತಟ್ಟದಿರಲಿ ಎಂದು ಪ್ರಯತ್ನಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಾಕುಪ್ರಾಣಿಗಳ ಕಡೆಗೆ ಗಮನ ನೀಡುವವರು ಕಡಿಮೆಯೇ. ಆದರೆ, ಈ ಮಹಿಳೆಯೊಬ್ಬಳಿಗೆ (Woman) ಬೆಕ್ಕುಗಳೆಂದರೆ (Cats) ಪಂಚಪ್ರಾಣ. 6 ಬೆಕ್ಕುಗಳನ್ನು ಮನೆಯಲ್ಲಿ ಸಾಕಿದ್ದಾಳೆ. ಅವುಗಳಿಗೆ ಹೊತ್ತೊತ್ತಿಗೆ ಹಾಲು (Milk), ಆಹಾರದ (Food) ವ್ಯವಸ್ಥೆ ಆಗಬೇಕು. ಆದರೆ, ಏರುತ್ತಿರುವ ಜೀವನ ವೆಚ್ಚಕ್ಕೆ (Life Cast) ಈಕೆ ಕಂಗಾಲಾಗಿದ್ದಾಳೆ. ಹೀಗಾಗಿ, ಕಂಡುಕೊಂಡ ಮಾರ್ಗವೆಂದರೆ, ತಾನೇ ಊಟವನ್ನು ತ್ಯಜಿಸುವುದು! ಹೌದು, ಈಕೆ ವಾರಕ್ಕೆ ಒಮ್ಮೆ ಮಾತ್ರ ಊಟ (Meal) ಮಾಡುತ್ತಾಳೆ.
ತನ್ನ ಸಾಕುಪ್ರಾಣಿ ಬೆಕ್ಕುಗಳ ಕುರಿತು ಸಿಕ್ಕಾಪಟ್ಟೆ ಪ್ರೀತಿ ಹೊಂದಿರುವ ಯಾಸ್ಮೀನ್, ಸಂಗಾತಿಯಿಂದ (Partner) ದೊರೆಯುವ 69 ಪೌಂಡ್ ಹಣದಲ್ಲಿ ಸುಮಾರು 60 ಪೌಂಡ್ ಅನ್ನು ಬೆಕ್ಕುಗಳಿಗಾಗಿ ವೆಚ್ಚ ಮಾಡುತ್ತಾಳೆ. ಬೆಕ್ಕುಗಳ ಆಹಾರ, ಹಾಲು, ಇತ್ಯಾದಿ ಕಾರಣಕ್ಕೆ ಹಣ ವೆಚ್ಚವಾಗಿ, ಈಕೆಯ ಆಹಾರಕ್ಕೆ ಏನೆಂದರೆ ಏನೂ ಉಳಿಯುವುದಿಲ್ಲ. ಹೀಗಾಗಿ, ಈಕೆ ಕಳೆದ ಒಂದು ವರ್ಷದಿಂದ ವಾರಕ್ಕೆ ಒಮ್ಮೆ ಮಾತ್ರ ಆಹಾರ ಸೇವನೆ ಮಾಡುತ್ತಿದ್ದಾಳೆ.