Health Tips: ಮೂಲಂಗಿ ಜೊತೆ ಅಪ್ಪಿತಪ್ಪಿಯೂ ಇದನ್ನು ತಿನ್ಬೇಡಿ

Published : May 15, 2023, 02:56 PM IST
Health Tips: ಮೂಲಂಗಿ ಜೊತೆ ಅಪ್ಪಿತಪ್ಪಿಯೂ ಇದನ್ನು ತಿನ್ಬೇಡಿ

ಸಾರಾಂಶ

ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ತರಕಾರಿ ಬರುತ್ತೆ. ತರಕಾರಿ, ಹಣ್ಣು ತಿನ್ನಬೇಕು ಎನ್ನುವ ಕಾರಣಕ್ಕೆ ಜನರು ಸಿಕ್ಕಿದ್ದೆಲ್ಲ ಒಟ್ಟಿಗೆ ಸೇರಿಸಿ ಸೇವನೆ ಮಾಡ್ತಾರೆ. ಅಂಥವರು ನೀವೂ ಆಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. ಎಲ್ಲವನ್ನೂ ಮಿಕ್ಸ್ ಮಾಡಿ ತಿನ್ಬೇಡಿ.   

ಬೇಸಿಗೆ ಬರ್ತಿದ್ದಂತೆ ಆಹಾರ ಪದ್ಧತಿಯನ್ನು ಬದಲಿಸಬೇಕು. ದೇಹ ಹಾಗೂ ಮನಸ್ಸು ಎರಡೂ ಬಿಸಿಯಾಗುವ ಕಾರಣ, ತಂಪಾಗಿಸುವ ಆಹಾರವನ್ನು ಸೇವನೆ ಮಾಡ್ಬೇಕು. ಕೆಲವರು ಬೇಸಿಗೆ ಶುರುವಾದ್ರೂ ಎಚ್ಚೆತ್ತುಕೊಳ್ಳೋದಿಲ್ಲ. ತಮ್ಮಿಷ್ಟದ ಆಹಾರ ಪದ್ಧತಿಯನ್ನೇ ಪಾಲನೆ ಮಾಡುವ ಮೂಲಕ ಆರೋಗ್ಯ ಹಾಳುಮಾಡಿಕೊಳ್ತಾರೆ. ಬರೀ ಫಾಸ್ಟ್ ಫುಡ್, ಕರಿದ ಆಹಾರಗಳು ಮಾತ್ರವಲ್ಲ ತರಕಾರಿ ಕೂಡ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ತರಕಾರಿ, ಹಣ್ಣು ತಿನ್ನುವ ಸಮಯದ ಬಗ್ಗೆ  ಎಚ್ಚರಿಕೆವಹಿಸಬೇಕು. ಎಲ್ಲ ತರಕಾರಿಯನ್ನು ಒಟ್ಟಿಗೆ ಸೇವಿಸೋದು ಸೂಕ್ತವಲ್ಲ. ತರಕಾರಿ ಕಾಂಬಿನೇಷನ್ ಬಗ್ಗೆ ತಿಳಿಯದೆ ಹೋದ್ರೆ ಹೊಟ್ಟೆ ಹಾಳಾಗುತ್ತದೆ. ಗ್ಯಾಸ್ಟ್ರಿಕ್ ಸೇರಿದಂತೆ ನಾನಾ ಅನಾರೋಗ್ಯ ನಮ್ಮನ್ನು ಕಾಡುತ್ತದೆ. ಯಾವುದೋ ತರಕಾರಿ ಜೊತೆ ಮತ್ತ್ಯಾವುದೋ ತರಕಾರಿ, ಹಣ್ಣು  ತಿನ್ನುವುದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ದೇಹಕ್ಕೆ ಸಿಗುವ ಪೋಷಕಾಂಶ, ವಿಟವಿನ್ ಕೂಡ ಸರಿಯಾಗಿ ದೇಹ ಸೇರೋದಿಲ್ಲ. ನಾವಿಂದು ಮೂಲಂಗಿ ಜೊತೆ ಯಾವ ಆಹಾರ ತಿಂದ್ರೆ ಬೆಸ್ಟ್ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಮೂಲಂಗಿ ಆರೋಗ್ಯಕ್ಕೆ ಒಳ್ಳೆಯದು. ಮೂಲಂಗಿಯಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಮೂಲಂಗಿಯನ್ನು ಸಲಾಡ್ ರೂಪದಲ್ಲಿಯೂ ತಿನ್ನಬಹುದು. ಮೂಲಂಗಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ ಮತ್ತು ಕೆಮ್ಮಿನಂತಹ ಕಾಯಿಲೆಗಳನ್ನು ದೂರವಿಡುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ಇದು ಒಳ್ಳೆಯದು. ಮೂಲಂಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಸಹ ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಆದ್ರೆ ಕೆಲವರು ಮೂಲಂಗಿ ತಿನ್ನೋದ್ರಿಂದ ಗ್ಯಾಸ್ಟ್ರಿಕ್, ಹೊಟ್ಟೆ ನೋವು ಸೇರಿದಂತೆ ಕೆಲ ಸಮಸ್ಯೆ ಕಾಡುತ್ತದೆ ಎಂದು ಆರೋಪಿಸುತ್ತಾರೆ. ತಜ್ಞರ ಪ್ರಕಾರ, ಮೂಲಂಗಿ ಸೇವನೆಯ ಸಮಯ ಹಾಗೂ ಕಾಂಬಿನೇಷನ್ ಮುಖ್ಯವಾಗುತ್ತದೆ.  

ಮೂಲಂಗಿ (Radish) ಯನ್ನು ಎಂದಿಗೂ ಖಾಲಿ ಹೊಟ್ಟೆ (Stomach) ಯಲ್ಲಿ ತಿನ್ನಬಾರದು. ರಾತ್ರಿ (Night) ಯ ಊಟದಲ್ಲಿ ಕೂಡ ಮೂಲಂಗಿಯನ್ನು ಸೇವಿಸಬಾರದು. ಮೂಲಂಗಿಯನ್ನು ಬೆಳಗಿನ ಉಪಾಹಾರದ ನಂತರ ಅಥವಾ ಊಟದ ಮೊದಲು ತಿನ್ನಬೇಕು.  

Health Tips : ಮೂಲವ್ಯಾಧಿ ಸಮಸ್ಯೆಗೆ ಈ ಫೈಬರ್ ಆಹಾರ ಬೆಸ್ಟ್ ಪರಿಹಾರ

ಮೂಲಂಗಿ – ಹಾಗಲಕಾಯಿ : ಮೂಲಂಗಿಯನ್ನು ನೀವು ಹಾಗಲಕಾಯಿ ಜೊತೆ ಸೇವನೆ ಮಾಡಬಾರದು. ಇದ್ರಿಂದ ಆರೋಗ್ಯ ಕೆಡುತ್ತದೆ. ಈ ಎರಡೂ ಆಹಾರಗಳಲ್ಲಿ ಕಂಡುಬರುವ ಅಂಶಗಳು ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸುತ್ತವೆ. ಒಟ್ಟಿಗೆ ತಿಂದ್ರೆ ಉಸಿರಾಟ ಸಮಸ್ಯೆ ಕೂಡ ಕಾಡುತ್ತದೆ.

ಮೂಲಂಗಿ – ಸೌತೆಕಾಯಿ : ಮೂಲಂಗಿ ಹಾಗೂ ಸೌತೆಕಾಯಿ ಎರಡೂ ಆರೋಗ್ಯಕ್ಕೆ ಬೆಸ್ಟ್. ಹಾಗಂತ ಎರಡನ್ನೂ ಒಟ್ಟಿಗೆ ತಿಂದ್ರೆ ಆರೋಗ್ಯ ಹದಗೆಡುತ್ತದೆ. ಎರಡರಲ್ಲೂ ಹೆಚ್ಚಿನ ಪ್ರಮಾಣದ ನೀರಿರುವ ಕಾರಣ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಸೌತೆಕಾಯಿಯಲ್ಲಿರುವ ಆಸ್ಕೋರ್ಬೇಟ್ ಎಂಬ ಅಂಶ ವಿಟಮಿನ್ ಸಿ ಅನ್ನು ಹೀರಿಕೊಳ್ಳುತ್ತದೆ. ಇದನ್ನು ಮೂಲಂಗಿಯೊಂದಿಗೆ ತಿಂದರೆ ಹೊಟ್ಟೆಯಲ್ಲಿ ಅಜೀರ್ಣ, ವಾಯು, ಆಮ್ಲೀಯತೆ ಕಾಡುತ್ತದೆ.

ಫ್ರಿಡ್ಜ್ ಇಲ್ಲದೇನೆ ಬೆಣ್ಣೆಯನ್ನು ತಾಜಾವಾಗಿರಿಸೋದು ಹೇಗೆ?

ಮೂಲಂಗಿ – ಹಾಲು : ಮೂಲಂಗಿ ಮತ್ತು ಹಾಲನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಮೂಲಂಗಿ ಮತ್ತು ಡೈರಿ ಉತ್ಪನ್ನ ಒಟ್ಟಿಗೆ ಒಳಗೆ ಹೋದ್ರೆ ಹೊಟ್ಟೆಯಲ್ಲಿ ತೊಂದರೆ ಕಾಡುತ್ತದೆ. ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬುವಿಕೆ, ವಾಂತಿ ಮತ್ತು ವಾಕರಿಕೆ ಕಾಣಿಸಿಕೊಳ್ಳುತ್ತದೆ. 

ಮೂಲಂಗಿ – ಕಿತ್ತಳೆ : ಮೂಲಂಗಿ ಜೊತೆ ನೀವು ಯಾವಾಗ್ಲೂ ಕಿತ್ತಳೆ ಹಣ್ಣನ್ನು ಸೇವನೆ ಮಾಡಬಾರದು. ನಿಮಗೆ ಇವೆರಡರ ಕಾಂಬಿನೇಷನ್ ಒಳ್ಳೆಯದೆನ್ನಿಸುತ್ತದೆ. ಆದ್ರೆ ಇದರಿಂದ ಗ್ಯಾಸ್, ಅಜೀರ್ಣ, ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆ ಉದ್ಭವಿಸುತ್ತದೆ.

ಮೂಲಂಗಿ – ಕ್ಯಾರೆಟ್ : ನೀವು ಬೇಸಿಗೆ ಸಮಯದಲ್ಲಿ ಮೂಲಂಗಿ ಜೊತೆ ಕ್ಯಾರೆಟ್ ತಿನ್ನಬಹುದು. ಸಲಾಡ್ ರೂಪದಲ್ಲಿ ಇದನ್ನು ಸೇವಿಸೋದ್ರಿಂದ ಅನೇಕ ಲಾಭವಿದೆ.

ಇವರು ಮೂಲಂಗಿ ತಿನ್ನಬಾರದು : ದೇಹದಲ್ಲಿ ಹೆಚ್ಚು ನೋವು ಇದ್ದವರು  ಮೂಲಂಗಿಯನ್ನು ಸೇವಿಸಬಾರದು. ದೈಹಿಕ ಚಟುವಟಿಕೆಯನ್ನು ಮಾಡದ ಜನರು ಕೂಡ ಮೂಲಂಗಿಯನ್ನು ತಿನ್ನಬಾರದು. ಇಂಥವರು ಮೂಲಂಗಿಯನ್ನು ತಿನ್ನುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?