ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಜನರಿದ್ದಾರೆ. ಇಂಥವರು ವಿಚಿತ್ರ ಅಭ್ಯಾಸವನ್ನು ಸಹ ಹೊಂದಿದ್ದಾರೆ. ಕೀಟಗಳನ್ನು ತಿನ್ನುವುದು, ಅವುಗಳ ಜೊತೆ ಮಲಗುವುದು ಮೊದಲಾದ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗೆಯೇ ಇಲ್ಲೊಬ್ಬ ಯುವತಿ ತಾನು ತನ್ನದೇ ದೇಹದ ಎಲುಬನ್ನು ತಿಂದಿರುವುದಾಗಿ ಹೇಳಿದ್ದಾಳೆ.
ಮನುಷ್ಯ ಕೋಳಿ, ಆಡು, ಮೇಕೆ ಅಂತ ಇತರ ಪ್ರಾಣಿಗಳ ಮಾಂಸವನ್ನು ತಿನ್ನೋದನ್ನು ನೋಡಿದ್ದೀರಿ. ಆದರೆ ಮನುಷ್ಯ ತನ್ನದೇ ದೇಹದ ಮಾಂಸ ತಿನ್ನೋದು ಅಂದರೆ ವಾಕರಿಕೆ ಬರೋದು ಖಂಡಿತ. ಪುರಾತನ ಕಾಲದಲ್ಲಿ ಜನರು ಬದುಕುಳಿಯಲು ಹೀಗೆ ಮಾಡಿದ್ದರಂತೆ. ಮಾನವನರನ್ನೇ ಕೊಂದು ತಿನ್ನುತ್ತಿದ್ದರಂತೆ. ಆದರೆ ಇವತ್ತಿನ ಕಾಲದಲ್ಲಿ ಯಾರಾದರೂ ಹಾಗೆ ಮಾಡುತ್ತಾರೆಂದರೆ ಊಹಿಸುವುದು ಕಷ್ಟ. ಆದರೆ ನಂಬಲು ಕಷ್ಟವಾದರೂ ಸ್ಪೇನ್‌ನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನದೇ ಮೊಣಕಾಲಿನ ಎಲುಬುನ್ನು ಪಾಸ್ತಾದೊಂದಿಗೆ ಬೇಯಿಸಿ ತಿಂದಿದ್ದಾಳೆ. ಜನರು ಇದನ್ನು ತಿಳಿದು ಛೀ, ಥೂ ಅನ್ನುತ್ತಿದ್ದಾರೆ.
ಪಾಸ್ತಾಗೆ ಮೊಣಕಾಲಿನ ಕಾರ್ಟಿಲೆಜ್ ಸೇರಿಸಿದ ಮಹಿಳೆ
ಸ್ಪ್ಯಾನಿಷ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರರ್ ಪೌಲಾ ಗೊನು, ತಾನು ತನಗಾಗಿ ಮತ್ತು ತನ್ನ ಸಂಗಾತಿಗಾಗಿ (Partner) ತಯಾರಿಸಿದ ಸ್ವಾದಿಷ್ಟ ಪಾಸ್ತಾದಲ್ಲಿ ಮೊಣಕಾಲಿನ (Knee) ಕಾರ್ಟಿಲೆಜ್ ಸೇರಿಸಿದ್ದಾಗಿ ಹೇಳಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ 30 ವರ್ಷದ ಕಂಟೆಂಟ್ ಕ್ರಿಯೇಟರ್, ಗಾಯದಿಂದಾಗಿ ಶಸ್ತ್ರಚಿಕಿತ್ಸೆಯ (Surgery) ಸಮಯದಲ್ಲಿ ತೆಗೆದುಹಾಕಲಾದ ಚಂದ್ರಾಕೃತಿ ಎಂದು ಕರೆಯಲ್ಪಡುವ ತನ್ನ ಮೊಣಕಾಲಿನ ಕಾರ್ಟಿಲೆಜ್‌ನ ಭಾಗವನ್ನು ಪಾಸ್ತಾಕ್ಕೆ ಸೇರಿಸಿರುವುದಾಗಿ ಬಹಿರಂಗಪಡಿಸಿದ್ದಾಳೆ. ವೈದ್ಯರು (Doctors) ತಮ್ಮ ಭಾಗವನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸುತ್ತೀರಾ ಎಂದು ನನ್ನಲ್ಲಿ ಕೇಳಿದರು. ನಾನು ಅವರಿಗೆ 'ಹೌದು' ಎಂದು ಹೇಳಿದೆ ಎಂದು ಗೋನು ಹೇಳಿದಳು.
Food Habits in World: ಹಸುವಿನ ರಕ್ತ, ಕೊಳೆತ ಶಾರ್ಕ್ ಮಾಂಸ… ಅಬ್ಬಬ್ಬಾ, ಏನೆಲ್ಲ ತಿಂತಾರೆ ಗೊತ್ತಾ
'ನಾನು ಅದನ್ನು ತಿನ್ನಲು ಬಯಸುತ್ತೇನೆ. ಏಕೆಂದರೆ ಅದು ನನ್ನ ದೇಹದ ಭಾಗವಾಗಿದೆ ಮತ್ತು ನಾನು ಅದನ್ನು ಮತ್ತೆ ನನ್ನ ದೇಹ (Body)ದಲ್ಲಿ ಸೇರಿಸಬೇಕಾಗಿದೆ' ಎಂದು ಗೋನು ಹೇಳಿದರು. 'ನಾನು ರುಚಿಕರವಾದ ಪಾಸ್ತಾವನ್ನು ತಯಾರಿಸಿದೆ. ಈ ಸಂದರ್ಭದಲ್ಲಿ ಮೊಣಕಾಲಿನ ಮಾಂಸವನ್ನು ಇದಕ್ಕೆ ಸೇರಿಸಲು ಬಯಸಿದೆ' ಎಂದವರು ಹೇಳಿದಳು. ಅವಳು ತನ್ನ ಗೆಳೆಯನೊಂದಿಗೆ (Boyfriend) ತಿನ್ನುವ ಮೊದಲು ಖಾದ್ಯವನ್ನು ಹೇಗೆ ತಯಾರಿಸಿದಳು ಮತ್ತು ಸಾಸ್‌ಗೆ ಕಾರ್ಟಿಲೆಜ್ ಅನ್ನು ಹೇಗೆ ಸೇರಿಸಿದಳು ಎಂಬುದನ್ನು ವಿವರಿಸಿದಳು. ಗೋನು ತಮ್ಮ ಜೀವನದ (Life) ಪ್ರತಿ ವಿಷಯದ ಕುರಿತು ನಿಯಮಿತವಾಗಿ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ.
ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್
ಸೋಷಿಯಲ್ ಮೀಡಿಯಾ ಪ್ರಭಾವಿಯ ಈ ಕೆಲಸಕ್ಕೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿನ ಕಾಮೆಂಟ್ ವಿಭಾಗದಲ್ಲಿ ಹಲವರು ಮಹಿಳೆಯ (Woman) ಕಾರ್ಯಕ್ಕೆ ಅಸಹ್ಯವನ್ನು ವ್ಯಕ್ತಪಡಿಸಿದ್ದಾರೆ. 'ಹೀಗೆಲ್ಲಾ ಪ್ರಾಣಿಗಳಷ್ಟೇ ತಿನ್ನಲು ಸಾಧ್ಯ' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 'ಹೀಗೆಲ್ಲಾ ಮಾಡಿದ ಆಹಾರವನ್ನು ಇಷ್ಟಪಟ್ಟು ತಿನ್ನಲು ಸಾಧ್ಯವಾಯಿತು' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚಿಕನ್ ಲೆಗ್ ಪೀಸ್ ಅಲ್ಲ, ಭಾರತದ ಈ ತಾಣದಲ್ಲಿ ಕಪ್ಪೆ ಲೆಗ್ ಪೀಸ್ ಸಖತ್ ಫೇಮಸ್