ಭಾರತ; ಅನಾರೋಗ್ಯ ಆಹಾರ ತಿಂದೇ ಶೇ. 56.4 ಕಾಯಿಲೆ ಪ್ರಮಾಣ ಹೆಚ್ಚಳ!

By Vinutha Perla  |  First Published May 9, 2024, 3:22 PM IST

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯಿಂದ 56.4% ರಷ್ಟು ರೋಗದ ಪ್ರಮಾಣ ಹೆಚ್ಚಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಕಳೆದ ಕೆಲವು ದಶಕಗಳಲ್ಲಿ ಭಾರತೀಯರ ಆಹಾರ ಪದ್ಧತಿಯು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಇದು ಸಾಂಕ್ರಾಮಿಕವಲ್ಲದ ರೋಗಗಳ ಹರಡುವಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ಮಾಹಿತಿ ನೀಡಿದೆ.


ನವದೆಹಲಿ: ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯಿಂದ 56.4% ರಷ್ಟು ರೋಗದ ಪ್ರಮಾಣ ಹೆಚ್ಚಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ಕಳೆದ ಕೆಲವು ದಶಕಗಳಲ್ಲಿ ಭಾರತೀಯರ ಆಹಾರ ಪದ್ಧತಿಯು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಇದು ಸಾಂಕ್ರಾಮಿಕವಲ್ಲದ ರೋಗಗಳ ಹರಡುವಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅಪೌಷ್ಟಿಕತೆಯ ಕೆಲವು ಸಮಸ್ಯೆಗಳು ಮುಂದುವರಿದಿವೆ ಎಂದು ICMRನ ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ. ಅಗತ್ಯ ಪೋಷಕಾಂಶಗಳ ಅವಶ್ಯಕತೆಗಳನ್ನು ಪೂರೈಸಲು ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟಲು 17 ಆಹಾರ ಮಾರ್ಗಸೂಚಿಗಳನ್ನು ICMR ಬಿಡುಗಡೆ ಮಾಡಿದೆ. 

ಕಡಿಮೆ ದೈಹಿಕ ಚಟುವಟಿಕೆ ಮತ್ತು ವೈವಿಧ್ಯಮಯ ಆಹಾರಗಳಿಳ ಬದಲು ಸಕ್ಕರೆ ಮತ್ತು ಕೊಬ್ಬಿನಿಂದ ತುಂಬಿದ ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆಯ ಏರಿಕೆಯು ಉಲ್ಬಣಗೊಳ್ಳುತ್ತದೆ. ಹೀಗಾಗಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಮತ್ತು ಅಧಿಕ ತೂಕದ ಸಮಸ್ಯೆಗಳು ಇದರಿಂದಾಗಿ ಹೆಚ್ಚುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 'ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಮೂಲಕ ಅಕಾಲಿಕ ಮರಣಗಳ ಗಮನಾರ್ಹ ಪ್ರಮಾಣವನ್ನು ತಪ್ಪಿಸಬಹುದು' ಎಂದು ಅಧ್ಯಯನ ಹೇಳಿದೆ. 

Tap to resize

Latest Videos

undefined

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೇ ಸ್ತನ ಕ್ಯಾನ್ಸರ್‌ ಸಾವು ಹೆಚ್ಚು!

ಅಪೆಕ್ಸ್ ಹೆಲ್ತ್ ರಿಸರ್ಚ್ ಬಾಡಿ ಅಡಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಯು ಪರಿಧಮನಿಯ ಹೃದಯ ಕಾಯಿಲೆ (CHD) ಮತ್ತು ಅಧಿಕ ರಕ್ತದೊತ್ತಡವನ್ನು (HTN) ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹವನ್ನು 80 ಪ್ರತಿಶತದವರೆಗೆ ತಡೆಯುತ್ತದೆ ಎಂದು ತಿಳಿಸಿದೆ. ಉಪ್ಪು ಸೇವನೆಯನ್ನು ನಿರ್ಬಂಧಿಸಲು ಶಿಫಾರಸು ಮಾಡಿದೆ, ತೈಲಗಳು ಮತ್ತು ಕೊಬ್ಬನ್ನು ಮಿತವಾಗಿ ಬಳಸುವುದು, ಸರಿಯಾದ ವ್ಯಾಯಾಮ ಮಾಡುವುದು, ಸಕ್ಕರೆ ಮತ್ತು ಅಲ್ಟ್ರಾ-ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡುವುದು ಉತ್ತಮ ಮಾರ್ಗವೆಂದು ವಿವರಿಸಲಾಗಿದೆ.

ಸಮತೋಲಿತ ಆಹಾರವು ಧಾನ್ಯಗಳು ಮತ್ತು ರಾಗಿಗಳಿಂದ ಶೇಕಡಾ 45ಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಮತ್ತು ದ್ವಿದಳ ಧಾನ್ಯಗಳು, ಬೀನ್ಸ್ ಮತ್ತು ಮಾಂಸದಿಂದ ಶೇಕಡಾ 15 ರಷ್ಟು ಕ್ಯಾಲೊರಿಗಳನ್ನು ಒದಗಿಸಬೇಕು. ಉಳಿದ ಕ್ಯಾಲೊರಿಗಳು ಬೀಜಗಳು, ತರಕಾರಿಗಳು, ಹಣ್ಣುಗಳು ಮತ್ತು ಹಾಲಿನಿಂದ ಬರಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ. 

ಯಾವಾಗಲೂ ಚುಯಿಂಗ್ ಗಮ್ ಜಗೀತಾರಾ? ಬರಬಾರದ ರೋಗ ಬರ್ಬಹುದು, ಹುಷಾರು

ದ್ವಿದಳ ಧಾನ್ಯಗಳು ಮತ್ತು ಮಾಂಸದ ಹೆಚ್ಚಿನ ಬೆಲೆಯಿಂದಾಗಿ, ಭಾರತೀಯ ಜನಸಂಖ್ಯೆಯ ಗಮನಾರ್ಹ ಪ್ರಮಾಣವು ಧಾನ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದರ ಪರಿಣಾಮವಾಗಿ ಅಗತ್ಯವಾದ ಮ್ಯಾಕ್ರೋನ್ಯೂಟ್ರಿಯಂಟ್‌ಗಳು ಕಡಿಮೆ ಸೇವನೆಯಾಗುತ್ತಿದೆ. ಇದು ಭಾರತೀಯರ ಆರೋಗ್ಯ ಹದಗೆಡಲು ಕಾರಣವಾಗುತ್ತಿದೆ ಎಂದು ತಿಳಿಸಲಾಗಿದೆ.

click me!