ಬೇಸಿಗೆ ಶುರುವಾಗಿದೆ. ಆರೋಗ್ಯ ಸಮಸ್ಯೆ ಕಾಡದಿರಲು ದೇಹವನ್ನು ಹೈಡ್ರೀಕರಿಸಿ ಇಟ್ಟುಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ಹೀಗಾಗಿಯೇ ಎಲ್ಲರೂ ಹೆಚ್ಚೆಚ್ಚು ಎಳನೀರು ಕುಡಿಯುತ್ತಾರೆ. ಆದ್ರೆ ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಬಾರ್ದು ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ?
ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗಿರುವಂತೆ ನೋಡಿಕೊಳ್ಳವುದು ಬಹಳ ಮುಖ್ಯ. ದೇಹ ತಂಪಾಗಿರಲು ದೇಹದಲ್ಲಿ ನೀರಿನ ಅಂಶ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿಯೇ ಸಮ್ಮರ್ ಟೈಂನಲ್ಲಿ ಎಲ್ಲರೂ ಹೆಚ್ಚೆಚ್ಚು ನೀರು ಕುಡಿಯುತ್ತಾರೆ. ಜ್ಯೂಸ್, ಎಳನೀರು ಮೊದಲಾದವುಗಳ ಸೇವನೆಗೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ಎಳನೀರಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವನ್ನು ತಂಪು ಮಾಡುವುದಲ್ಲದೆ, ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಆದ್ರೆ ಎಳನೀರಿನಿಂದ ಡೈರೆಕ್ಟ್ ಆಗಿ ನೀರು ಕುಡಿಬಾರ್ದು ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ?
ಎಳನೀರು ಸೇವನೆ ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಬೆಸ್ಟ್. ಇದು ಜೀರ್ಣಕ್ರಿಯೆಗೆ ಉತ್ತಮ. ಮಾತ್ರವಲ್ಲ ಎಳನೀರಿನ ಸೇವನೆ ದಿನವಿಡೀ ಎನರ್ಜಿಟಿಕ್ ಆಗಿರುವಂತೆ ಮಾಡುತ್ತದೆ. ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಅಮಿನೋ ಆಸಿಡ್ ಮೊದಲಾದ ಅಂಶಗಳಿರುತ್ತವೆ. ಇದು ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಬೇಸಿಗೆಯಲ್ಲಿ ಕಾಡೋ ಅಜೀರ್ಣ, ಎದೆಯುರಿ, ಹೊಟ್ಟೆ ಉಬ್ಬರ ಮೊದಲಾದ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ.
undefined
ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಹಣ್ಣು ಸೇವಿಸಿ
ಸಾಮಾನ್ಯವಾಗಿ ಎಲ್ಲರೂ ರಸ್ತೆಬದಿಯಲ್ಲಿ ಎಳನೀರು ಮಾರುವವರ ಬಳಿ ಹೋಗಿ ಅವರು ಕೊಟ್ಟ ಎಳನೀರನ್ನು ಸ್ಟ್ರಾ ಆಗಿ ಕುಡಿದುಬಿಡುತ್ತಾರೆ. ಆದ್ರೆ ಹೀಗೆ ಮಾಡಲೇಬಾರದು. ಎಳನೀರಿನಿಂದ ನೀರನ್ನು ಕುಡಿಯುವ ಬದಲು ಎಳನೀರಿನ ಒಳಭಾಗವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಯಾಕೆಂದರೆ ಎಳನೀರಿನ ಒಳಗೆ ಮೋಲ್ಡ್ ಎಂಬ ವಿಧದ ಒಂದು ರೀತಿಯ ಫಂಗಸ್ ಬೆಳೆಯುವ ಸಾಧ್ಯತೆ ಇರುತ್ತದೆ.
ಎಳನೀರಿನ ಒಳಭಾಗವನ್ನು ಪರಿಶೀಲಿಸದೇ ಅದರಲ್ಲಿರುವ ನೀರು ಕುಡಿಯುವುದರಿಂದ ಆ ಫಂಗಸ್ ನಮ್ಮ ದೇಹವನ್ನು ಸೇರಬಹುದು. ಮಾತ್ರವಲ್ಲ ಅಲರ್ಜಿ, ಉಸಿರಾಟದ ಸಮಸ್ಯೆ ಮೊದಲಾದ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಯಾವಾಗಲೂ ಎಳನೀರನ್ನು ಕಟ್ ಮಾಡಿದ ನಂತರ ಅದನ್ನು ಲೋಟಕ್ಕೆ ಸುರಿದು ಕುಡಿಯುವುದು ಸರಿಯಾದ ವಿಧಾನ ಅಂತಾರೆ ಆರೋಗ್ಯ ತಜ್ಞರು.
ಹೆಚ್ಚು ನೀರಿರುವ ಎಳನೀರು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್