ವಿಷ ಏಕಾಗ್ತಿದೆ ಚಿಕನ್ ಶವರ್ಮಾ... ರುಚಿ ರುಚಿಯಾಗಿದೆ ಎಂದು ತಿನ್ನೋ ಮೊದಲು ಇದನ್ನೊಮ್ಮೆ ಓದಿ

By Anusha Kb  |  First Published May 9, 2024, 1:50 PM IST

 ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿದ ಪ್ರಕರಣ ಇದೇ ಮೊದಲೇನಲ್ಲ, ಈ ಹಿಂದೆಯೂ ಕೇರಳ ಹಾಗೂ ತಮಿಳುನಾಡಿನಲ್ಲಿ ಚಿಕನ್ ಶವರ್ಮಾ ತಿಂದ ಬಳಿಕ ಅನಾರೋಗ್ಯಕ್ಕೀಡಾಗಿ ತಲಾ ಒಂದೊಂದು ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈ ಚಿಕನ್ ಶವರ್ಮಾ ಏಕೆ ಅಪಾಯಕಾರಿ ಎಂಬ ಬಗ್ಗೆ ಒಂದು ಸ್ಟೋರಿ ಇಲ್ಲಿದೆ. 


ಮುಂಬೈ: ನಾನ್‌ವೆಜ್ ಪ್ರಿಯ ಯುವ ಸಮೂಹದವರು ಇಷ್ಟಪಡುವ ಆಹಾರಗಳಲ್ಲಿ ಈ ಚಿಕನ್ ಶವರ್ಮಾ ಕೂಡ ಒಂದು ಆದರೆ ಈ ಚಿಕನ್ ಶವರ್ಮಾ ತಿಂದ ಯುವ ತರುಣನೋರ್ವ ಸಾವನ್ನಪ್ಪಿದ ಘಟನೆ ಎರಡು ದಿನದ ಹಿಂದೆ ಮುಂಬೈನಲ್ಲಿ ನಡೆದಿದ್ದು, ಇದು ಶವರ್ಮಾ ಪ್ರಿಯರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಹಾಗಂತ ಚಿಕನ್ ಶವರ್ಮಾ ತಿಂದು ಸಾವನ್ನಪ್ಪಿದ ಪ್ರಕರಣ ಇದೇ ಮೊದಲೇನಲ್ಲ, ಈ ಹಿಂದೆಯೂ ಕೇರಳ ಹಾಗೂ ತಮಿಳುನಾಡಿನಲ್ಲಿ ಚಿಕನ್ ಶವರ್ಮಾ ತಿಂದ ಬಳಿಕ ಅನಾರೋಗ್ಯಕ್ಕೀಡಾಗಿ ತಲಾ ಒಂದೊಂದು ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈ ಚಿಕನ್ ಶವರ್ಮಾ ಏಕೆ ಅಪಾಯಕಾರಿ ಎಂಬ ಬಗ್ಗೆ ಒಂದು ಸ್ಟೋರಿ ಇಲ್ಲಿದೆ. 

ಶವರ್ಮಾಗೂ ಈ ಸಾವಿಗೂ ಲಿಂಕ್ ಹೇಗೆ?

Tap to resize

Latest Videos

undefined

ಆಹಾರ ತಜ್ಷರ ಪ್ರಕಾರ ಈ ಶವರ್ಮಾದ ರೆಸಿಪಿಯಲ್ಲಿ ಮಾತ್ರ ಸಮಸ್ಯೆ ಇಲ್ಲ, ಆದರೆ ಅದರ ತಯಾರಿಗೆ ಬಳಸುವ ಹಲವು ಪದಾರ್ಥಗಳು (ingredients) ಅದರಲ್ಲೂ ವಿಶೇಷವಾಗಿ ಚಿಕನ್ ಕೂಡ ವಿಷಾಹಾರಕ್ಕೆ ಕಾರಣವಾಗುತ್ತಿದೆ. ಅದನ್ನು ಮಾಡುವ ರೀತಿ ಹಾಗೂ ಅದನ್ನು ಸಂಗ್ರಹಿಸುವ ರೀತಿ ಕೂಡ ಇದಕ್ಕೆ ಕಾರಣವಾಗಿದೆ. ಅರ್ಧ ಬೇಯಿಸಿದ ಮಾಂಸ ಹಾಗೂ ಮಾಂಸವನ್ನು ಫ್ರಿಡ್ಜ್‌ನಲ್ಲಿ ಸಮರ್ಪಕ ರೀತಿಯಲ್ಲಿ ಇಡದೇ ಇರುವುದು ಕೂಡ ಆಹಾರ ವಿಷವಾಗುವುದಕ್ಕೆ ಕಾರಣವಾಗುತ್ತಿದೆ. 

ಶವರ್ಮಾಕ್ಕಾಗಿ ಬಳಸುವ ಮಾಂಸದ ತುಂಡುಗಳನ್ನು ಬಹಳ ನಿಧಾನವಾಗಿ ಕೇವಲ ತುಂಬಾ ಪ್ರಖರವಲ್ಲದ ಬೆಂಕಿಯ ಜ್ವಾಲೆಯನ್ನು ಬಳಸಿಕೊಂಡು ರೋಸ್ಟ್ ಮಾಡಲಾಗುತ್ತದೆ. ಇದರಿಂದ ಮಾಂಸವೂ ಸರಿಯಾಗಿ ಬೇಯುವುದಿಲ್ಲ, ಆದರೂ ಇದಕ್ಕೆ ಬಹಳ ಸಮಯ ಹಿಡಿಯುವುದರಿಂದ ಜನ ಹೆಚ್ಚಾದ ಸಮಯದಲ್ಲಂತೂ ಅನೇಕ ಗ್ರಾಹಕರಿಗೆ ಸರಿಯಾದ ಬೇಯದ ಮಾಂಸದಿಂದ ತಯಾರಿಸಿದ ಶವರ್ಮಾ ಸಿಗುವುದು.

ಅರ್ಧ ಬೇಯಿಸಿದ ಮಾಂಸದ ಜೊತೆಗೆ ಅದನ್ನು ಸರಿಯಾದ ಅದನ್ನು ರೆಪ್ರಿಜರೇಟರ್‌ನಲ್ಲಿಯೂ ಸರಿಯಾಗಿ ಇಡದಿದ್ದಾಗಲೂ ಅರ್ಧ ಬೇಯಿಸಿದ ಚಿಕನ್ ವಿಷವಾಗುವುದು, ಅಲ್ಲದೇ ಇದು ಅಪಾಯಕಾರಿಯಾ ಬ್ಯಾಕ್ಟಿರೀಯಾಗಳಾದ ಸಾಲ್ಮೊನೆಲ್ಲಾ ಅಥವಾ ಇ.ಕೋಲಿ ಮುಂತಾದ ಬ್ಯಾಕ್ಟಿರೀಯಾಗಳನ್ನು ಉತ್ಪಾದಿಸಬಹುದು ಎಂದು ಉಜಾಲಾ ಸೈನಸ್ ಗ್ರೂಪ್ ಆಫ್ ಹಾಸ್ಪಿಟಲ್‌ನ  ವೈದ್ಯ ಡಾ ಸುಚಿನ್ ಬಜಾಜ್ ಹೇಳಿದ್ದಾರೆ. 

ಬೇಸಿಗೆಯಲ್ಲಿ ಚಿಕನ್ ಎಷ್ಟು ಸೇಫ್‌? ಚಿಕನ್ ಶವರ್ಮಾ ತಿಂದ 19 ವರ್ಷದ ತರುಣ ಸಾವು, ಐವರು ಅಸ್ವಸ್ಥ

ಶುಚಿತ್ವವಿಲ್ಲದ ಅರ್ಧ ಬೇಯಿಸಿದ ಅಥವಾ ಕಲುಷಿತ ಆಹಾರ ಅಥವಾ ನೀರು ಸೂಕ್ಷ್ಮವಾದ ಬ್ಯಾಕ್ಟೀರಿಯಾಗಳನ್ನು ಉತ್ಪಾದಿಸುತ್ತದೆ ಇದು ತುಂಬಾ ಸಾಂಕ್ರಾಮಿಕವಾಗಿರುವ ಕರುಳಿ ಸೋಂಕಿಗೆ ಕಾರಣವಾಗುತ್ತದೆ. 

ಅದಕ್ಕಿಂತ ಹೆಚ್ಚಾಗಿ ಶುಚಿತ್ವದ ಕಳಪೆ ನಿರ್ವಹಣೆ, ಕಲುಷಿತ ಪಾತ್ರಗಳು, ಕೆಟ್ಟು ಹೋದ ಸಾಸ್, ಅಥವಾ ಪದಾರ್ಥಗಳು ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತವೆ. ಅಲ್ಲದೇ  ಬಹಳ ದಿನಗಳವರೆಗೆ ಮಾಂಸವನ್ನು ಪ್ರಿಡ್ಜ್‌ನಲ್ಲಿ ಇಡುವುದು ಕೂಡ ಗಂಭೀರವಾದ ಬ್ಯಾಕ್ಟಿರಿಯಾಗಳ ಉತ್ಪಾದನೆಗೆ ಕಾರಣವಾಗುತ್ತದೆ. 

ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು, ಇಬ್ಬರ ಬಂಧನ!

ಪ್ರಕರಣ ಇದೇ ಮೊದಲಲ್ಲ, 

  • 2022ರ ಏಪ್ರಿಲ್‌ನಲ್ಲಿ ಕೇರಳದ ಚೆರುವತ್ತೂರ್‌ನಲ್ಲಿ ಚಿಕನ್ ಶವರ್ಮಾ ತಿಂದ 52 ಜನ ಅಸ್ವಸ್ಥಗೊಂಡಿದ್ದರು, ಇದರ ಜೊತೆಗೆ 16 ವರ್ಷದ ಬಾಲಕಿ ದೇವಾನಂದ ವಿಷಾಹಾರವಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಳು. 
  • ಹಾಗೆಯೇ 2023ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಮಕ್ಕಲ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ ಬಳಿಕ ಅಸ್ವಸ್ಥಗೊಂಡ 14 ವರ್ಷದ ಬಾಲಕಿ ಸಾವನ್ನಪ್ಪಿದ್ದರೆ ಆಕೆಯ ನಾಲ್ವರಿದ್ದ ಕುಟುಂಬ ಸೇರಿದಂತೆ ಒಟ್ಟು 43 ಮಂದಿ ಜ್ವರ, ವಾಂತಿ, ಹೊಟ್ಟೆನೋವು, ಡಯೇರಿಯಾ ಮುಂತಾದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು. 
  • ಇದಾದ ನಂತರ 2023ರ ಆಕ್ಟೋಬರ್‌ನಲ್ಲಿ ಕೇರಳದ ಕೊಚ್ಚಿಯ ಮೆವೆಲಿಪುರಂನ ರೆಸ್ಟೋರೆಂಟ್‌ವೊಂದರಲ್ಲಿ ಚಿಕನ್ ಸೇವಿಸಿದ್ದ 22 ವರ್ಷದ ಯುವಕ ಬಳಿಕ ಸಾವನ್ನಪ್ಪಿದ್ದ, ಈತನ ಸಾವಿಗೆ ಸೆಫ್ಟಿಸಿಮಿಯಾ ಕಾರಣವಾಗಿತ್ತು, ಇದು ಗಂಭೀರವಾದ ರಕ್ತದ ಸೋಂಕಾಗಿದೆ. 
click me!