Vijayapura ಮಾರುತೇಶ್ವರ ಜಾತ್ರೆಯಲ್ಲಿ ಹಾಲೋಕುಳಿ ಸಂಭ್ರಮ

By Suvarna News  |  First Published May 2, 2022, 11:24 AM IST
  • ಮೈ ಜುಂ ಎನ್ನೋದು ಹಾಲೋಕುಳಿ ಸ್ಪರ್ಧೆ!
  • ವಿಜಯಪುರ ಜಿಲ್ಲೆಯ ಮಾರುತೇಶ್ವರನ ರೋಮಾಂಚನಕಾರಿ ಹಾಲೋಕುಳಿ!
  • ಗ್ರಾಮೀಣ ಭಾಗದಲ್ಲಿ ಜಾತ್ರೆಗಳಂದು ನಡೆಯೋ ಸಾಹಸಿ ಕ್ರೀಡೆ!

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಮೇ.2) : ಬೇಸಿಗೆ ಬಂದ್ರೆ ಸಾಕು ಕರ್ನಾಟಕದಲ್ಲಿ ಜಾತ್ರೆಗಳ ಸೀಸನ್ ಶುರುವಾಗುತ್ತೆ. ಗ್ರಾಮೀಣ ಭಾಗದಲ್ಲಿ ನಡೆಯುವ ತಮ್ಮೂರಿನ ಜಾತ್ರೆಗಳಲ್ಲಿ ಗ್ರಾಮದ ಜನ್ರೆಲ್ಲ ಸೇರಿ ಒಂದಲ್ಲಾ ಒಂದು ಕ್ರೀಡೆ ಅಥವಾ ಸ್ಪರ್ಧೆಯನ್ನು ಹಮ್ಮಿಕೊಂಡಿರ್ತಾರೆ. ಯುವಕರಿಗೆ ರೈತರಿಗೆ ಪ್ರೋತ್ಸಾಹ ನೀಡಲು ಆಯೋಜಿಸಲಾಗುವ ಈ ಕಾರ್ಯಕ್ರಮಗಳು ನೋಡುಗರ ಮೈಯಲ್ಲಿ ರೋಮಾಂಚನ ಮೂಡಿಸುತ್ತವೆ. ವಿಜಯಪುರ (Vijayapura ) ಜಿಲ್ಲೆಯ ಹಡಗಲಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಜಾತ್ರೆಯಲ್ಲಿನ (Marutheshwara Jatra mahotsava) ಹಾಲೋಕುಳಿಯನ್ನ ಸಂಭ್ರಮದಿಂದ ಆಚರಿಸಲಾಯಿತು.

Latest Videos

undefined

ತುಪ್ಪ ಸವರಿದ 40 ಅಡಿ ಕಂಬ ಹತ್ತಬೇಕು!
ದೇವರ ಜಾತ್ರೆಯ ಅಂಗವಾಗಿ ಹಾಲೋಕುಳಿ ಎಂಬ ಕಂಬ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗ್ರಾಮದ ದೇವಸ್ಥಾನದ ಆವರಣದಲ್ಲಿ ಸುಮಾರು 40 ಅಡಿ ಎತ್ತರ ಬೃಹತ್ ಕಂಬವನ್ನು ನೆಡುತ್ತಾರೆ. ಆ ಕಂಬಕ್ಕೆ ಮೊದಲೇ ಆಯಿಲ್ ಹಾಗೂ ತುಪ್ಪವನ್ನು ಸುರಿದು ಜಾರುವ ಪದಾರ್ಥಗಳನ್ನು ಹಚ್ಚಲಾಗಿರುತ್ತದೆ. ಗ್ರಾಮದ ಯುವಕರೆಲ್ಲ ಸೇರಿ ಆ ಕಂಬವನ್ನು ಮೇಲೆ ಹತ್ತಿ ಮೇಲಿರುವ ಬಾಳೆಹಣ್ಣಿನ ಗೊಂಚಲು ಕೀಳುವ ಸ್ಪರ್ಧೆ ಇದಾಗಿರುತ್ತದೆ.

ಕಂಬ ಹತ್ತಲು ಹರಸಾಹಸ, ನೀರು ಹಾಕಿ ತಡೆಯಲು ಯತ್ನ!
30ಕ್ಕೂ ಅಧಿಕ ಯುವಕರೆಲ್ಲ ಸೇರಿ ಆ ದೊಡ್ಡದಾದ ಹಾಲುಗಂಬವನ್ನು ಹತ್ತಲು ಶುರುಮಾಡಿದ್ರೆ ಇತ್ತ ಸುತ್ತಲೂ ಇರುವ ಜನ್ರು ಬ್ಯಾರಲ್ ಗಳಲ್ಲಿ ನೀರು ತುಂಬಿರಿಸಿಕೊಂಡು ಕಂಬ ಹತ್ತುವವರಿಗೆ ನೀರು ಗೊಜ್ಜಲು(ಸಿಡಿಸಲು) ಶುರು ಮಾಡುತ್ತಾರೆ. ಮೇಲಿನಿಂದ ಜಾರುವ ಪದಾರ್ಥಗಳನ್ನು ಕಂಬಕ್ಕೆ ಬಿಡುತ್ತಿದ್ರೆ ಇತ್ತ ಯುವಕರಿಗೆ ನೀರು ಸುರಿದು ಅವರು ಮೇಲೆ ಹತ್ತದಂತೆ ಮಾಡುತ್ತಾರೆ. ಇಂತಹ ಸ್ಪರ್ಧೆಯಲ್ಲಿ ಯುವಕರೆಲ್ಲ ಒಬ್ಬರ ಮೇಲೆ ಒಬ್ಬರು ಹತ್ತಿ ಕೊನೆಗ ಕಂಬದ ತುದಿ ತಲುಪುವುದನ್ನು ನೋಡುತ್ತಿದ್ರೆ ಮೈ ರೋಮಾಂಚನಗೊಳ್ಳುತ್ತದೆ.

Ballari ರೌಡಿ ಶೀಟರ್ ಹತ್ಯೆ, ಶಾಸಕ ಸೋಮಶೇಖರ ರೆಡ್ಡಿ ನೀಡಿದ್ರಾ ಬೆಂಬಲ?

ಕೇಕೇ ಚಪ್ಪಾಳೆಗಳದ್ದೆ ಸದ್ದು!
ಹಾಲುಗಂಬವನ್ನು ಹತ್ತುವ ಸ್ಪರ್ಧೆ ಆರಂಭವಾದರೆ ಹಾಲೋಕುಳಿಯಲ್ಲಿ ಮಿಂದೆದ್ದು ಕೊನೆಗೆ ಗುರಿ ತಲುಪುವ ಈ ಆಟ ಸುಮಾರು ಗಂಟೆಗಳ ವರೆಗೆ ನಡೆಯುತ್ತದೆ. ಯುವಕರೆಲ್ಲ ಮೇಲೆ ಹತ್ತಿ ಜಾರಿ ಜಾರಿ ಬೀಳುತ್ತಿದ್ರೆ ಸುತ್ತಮುತ್ತಲು ಸೇರಿದ ಸಾವಿರಾರು ಪ್ರೇಕ್ಷಕರು ಕೇಕೇ ಸಿಳ್ಳೆಗಳನ್ನು ಹಾಕಿ ಹುರಿದುಂಬಿಸುತ್ತಿರುತ್ತಾರೆ. ಹೀಗೆ ಎರಡ್ಮೂರು ತಾಸುಗಳ ವರೆಗೆ ನಡೆಯುವ ಸ್ಪರ್ಧೆಯಲ್ಲಿ ಯುವಕರು ಹರಸಾಹಸ ಪಟ್ಟು ಶತಾಯಗತಾಯ ಗುರಿ ತಲುಪುತ್ತಾರೆ.

ಯುವಕರಿಗೆ ಭಾರ ಎತ್ತುವ ಸ್ಪರ್ಧೆ!
ಇನ್ನು ಇದೆ ಮಾರುತೇಶ್ವರ ಜಾತ್ರೆಯಲ್ಲಿ ಗುಂಡು ಎತ್ತುವುದು, ಕಬ್ಬಿಣದ ವಸ್ತುಗಳು ಎತ್ತುವುದು, ಧಾನ್ಯಗಳ ಚೀಲ ಎತ್ತುವುದು ಸೇರಿದಂತೆ ಇತರೇ ಭಾರ ಎತ್ತುವ ಸ್ಪರ್ಧೆ ಗಳು ನಡೆದವು. ಇನ್ನೊಂದೆಡೆ ಜಂಗಿ ನಿಕಾಲಿ ಕುಸ್ತಿ ಕೂಡ ನಡೆಯಿತು. ನಶಿಸಿ ಹೋಗುತ್ತಿರುವ ಬಲ ಪ್ರದರ್ಶನ, ವಿವಿಧ ಪ್ರತಿಭೆಗಳನ್ನು ತೋರಿಸುವ ಪ್ರದರ್ಶನಗಳಿಗೆ ಇಲ್ಲಿ ಅವಕಾಶ ನೀಡಲಾಗಿತ್ತು.

TUMAKURU ಎಸ್ಐಟಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಗೆ ಕೊಡುಗೆ!

ಯುವಕರನ್ನ ಗಟ್ಟಿಯಾಗಿಡಲು ಈ ದೇಶಿಕ್ರೀಡೆ!
ಗ್ರಾಮೀಣ ಪ್ರದೇಶಗಳಲ್ಲಿ ತಲೆತಲಾಂತರಗಳಿಂದ ಇಂಥಹ ಸಾಹಸ ಕ್ರೀಡೆಗಳನ್ನ ಹಮ್ಮಿಕೊಳ್ಳೊದು ವಾಡಿಕೆ ಇದೆ. ಊರ ದೇವರ ಜಾತ್ರೆಗಳಲ್ಲಿ ಈ ಸಾಹಸ ಕ್ರೀಡೆಗಳನ್ನ ಆಯೋಜಿಸಲಾಗುತ್ತೆ. ಇದರ ಮುಖ್ಯ ಉದ್ದೇಶ ಅಂದ್ರೆ ಗ್ರಾಮೀಣ ಪ್ರದೇಶದ ಯುವಕರು ಗಟ್ಟಿಮುಟ್ಟಾಗಿರಬೇಕು ಅನ್ನೋದು. ಸದಾ ಹೊಲ-ಜಮೀನುಗಳಲ್ಲಿ ದುಡಿಯೋ ರೈತಾಪಿ ವರ್ಗಕ್ಕೆ ಮನರಂಜನೆಯು ಸಿಗಲಿ ಅನ್ನೋ ದೃಷ್ಟಿಯಿಂದ ಸಾಹಸಮಯ ಕ್ರೀಡಗಳನ್ನ ಆಯೋಜಿಸಲಾಗುತ್ತೆ.

ಗ್ರಾಮೀಣ ಭಾಗದ ಸಾಹಸ ಕ್ರೀಡೆಗಳಿ ಸಾಕ್ಷಿ ಪ್ರಜ್ಞೆ ಜಾತ್ರೆಗಳು!
ಹಾಲೋಕುಳಿ, ಭಾರ ಎತ್ತುವುದು, ಕುಸ್ತಿ, ನಾಟಕ ಪ್ರದರ್ಶನ, ಪುರಾಣ, ಪ್ರವಚನ, ಡೊಳ್ಳಿನ ಪದಗಳು, ಜಾನಪದ ಸೇರಿದಂತೆ ನಿತ್ಯ ಒಂದು ಕಾರ್ಯಕ್ರಮಗಳನ್ನು ಕಮೀಟಿ ಹಾಗೂ ಹಡಗಲಿ ಜನ್ರು ಆಯೋಜಿಸಿದ್ದರು. ಮಾರುತೇಶ್ವರನ 56ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಒಂದು ವಾರಗಳ ವರೆಗೆ ವಿವಿಧ ಕಾರ್ಯಕ್ರಮಗಳು ನಡೆದವು.  ಈಗಲು ಜಾತ್ರಾ ಮಹೋತ್ಸವಗಳು ಗ್ರಾಮೀಣ ಭಾಗದ ಸಾಹಸಿ ಕ್ರೀಡೆಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ನಿಂತಿವೆ

click me!