Udupi: ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ

Published : Oct 26, 2022, 09:52 PM IST
Udupi: ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ

ಸಾರಾಂಶ

ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ. ತುಳುನಾಡನ್ನು ಕಾಪಾಡುವ ದೈವಗಣಗಳಿಗೂ ದೀಪಾವಳಿ ಬಂದ್ರೆ ಅಚ್ಚುಮೆಚ್ಚು. ಬದುಕಿದ್ದವರ ಹಬ್ಬ ನೋಡಿದ್ದೇವೆ, ಅಗಲಿದವರನ್ನೂ ಸ್ಮರಿಸುವ ‘ಜನಪದ ದೀಪಾವಳಿ’ ನೋಡಬೇಕೆಂದ್ರೆ ನೀವು ಉಡುಪಿಗೆ ಬರಬೇಕು. 

ಉಡುಪಿ (ಅ.26): ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ. ತುಳುನಾಡನ್ನು ಕಾಪಾಡುವ ದೈವಗಣಗಳಿಗೂ ದೀಪಾವಳಿ ಬಂದ್ರೆ ಅಚ್ಚುಮೆಚ್ಚು. ಬದುಕಿದ್ದವರ ಹಬ್ಬ ನೋಡಿದ್ದೇವೆ, ಅಗಲಿದವರನ್ನೂ ಸ್ಮರಿಸುವ ‘ಜನಪದ ದೀಪಾವಳಿ’ ನೋಡಬೇಕೆಂದ್ರೆ ನೀವು ಉಡುಪಿಗೆ ಬರಬೇಕು. ದೀಪ ಹಚ್ಚೋದು. ಪಟಾಕಿ ಹೊಡೆಯೋದು, ಹೊಟ್ಟೆ ತುಂಬಾ ತಿನ್ನೋದು, ದೀಪಾವಳಿ ಬಂದ್ರೆ ಮತ್ತೇನು ಮಾಡ್ತೀವಿ ಅಲ್ವಾ! ಆದ್ರೆ ನಿಜಕ್ಕೂ ದೀಪಾವಳಿ ನೋಡ್ಬೇಕಂದ್ರೆ ನೀವು ಕರಾವಳಿಯ ಜಿಲ್ಲೆಗಳಿಗೆ ಬರಬೇಕು. ತುಳುನಾಡಿನಲ್ಲಿ ಈ ಹಬ್ಬಕ್ಕೆ ಬೇರೆಯದೇ ಮಹತ್ವ ಇದೆ. 

ದೀಪಾವಳಿ ಬಂದಾಗ ಸತ್ತವರನ್ನೆಲ್ಲಾ ಬರಮಾಡಿಕೊಳ್ಳುವ ಸಂಪ್ರದಾಯ ಉಡುಪಿಯಲ್ಲಿದೆ. ತುಳುವರ ನಂಬಿಕೆಯ ಪ್ರಕಾರ ನಮ್ಮನ್ನು ಅಗಲಿದ ಹಿರಿಯರು ಸ್ವರ್ಗಕ್ಕೋ, ನರಕಕ್ಕೋ ಹೋಗೋದಿಲ್ಲ. ಮನೆಯ ದೈವಗಳ ಸನ್ನಿಧಾನದಲ್ಲೇ ಇರ್ತಾರಂತೆ. ಹಾಗಾಗಿ ದೀಪಾವಳಿಯಲ್ಲಿ ನಾವು ಸಂಭ್ರಮಿಸುವ ಮುನ್ನ ನಮ್ಮ ಪೂರ್ವಿಕರನ್ನು ಕರೆದು ಅವರಿಗೆ ಹೊಸಬಟ್ಟೆ ಕೊಟ್ಟು, ತಿನ್ನಲ್ಲು ಖಾದ್ಯಗಳನ್ನಿಟ್ಟು ಬರಮಾಡಿಕೊಳ್ಳೋದು ಸಂಪ್ರದಾಯ. ಅದಕ್ಕೆ ದೀಪಾವಳಿಯ ಒಂದು ದಿನವನ್ನು ‘ಸೈದಿನಕ್ಲೆನ ಪರ್ಬ’ ಅಂದ್ರೆ ಸತ್ತವರ ಹಬ್ಬ ಅಂತಾನೇ ಆಚರಿಸಲಾಗುತ್ತೆ. 

Chikkamagaluru: ದೀಪಾವಳಿ ಹಬ್ಬದಂದು ಗೋವುಗಳಿಗೆ ಸಿಂಗಾರ ಮಾಡಿ ವಿಶೇಷ ಪೂಜೆ

ಕುಟುಂಬದ ಹಿರಿಯರು ಮಾತ್ರವಲ್ಲ ದೈವಗಳ ಆರಾಧನೆಗೂ ದೀಪಾವಳಿಯಲ್ಲಿ ವಿಶೇಷ ಮಹತ್ವ. ಮನೆಯ ಆವರಣದಲ್ಲೇ ಇರುವ ದೈವದ ಗುಡಿಯನ್ನು ಸ್ವಚ್ಛ ಮಾಡಿ. ಕುಟುಂಬವನ್ನು ಸಲಹಿಕೊಂಡು ಬಂದ ದೈವಗಳಿಗೆ ಅಲಂಕಾರ ಮಾಡಿ, ದೀಪ ಬೆಳಗಿ, ಆಹಾರ ಕೊಟ್ಟು ಆರಾಧಿಸುವ ಜನಪದ ಪದ್ದತಿ ಇವತ್ತಿಗೂ ಜೀವಂತವಾಗಿದೆ.  ಹಾಗಾಗಿ ದೈವಗಳಿಗೂ ದೀಪಾವಳಿ ಬಂದ್ರೆ ಭಕ್ತರ ಬಳಿಗೆ ಬರುವ ಹುಮ್ಮಸ್ಸಿರುತ್ತೆ. ನಾಲ್ಕಾರು ಶತಮಾನಗಳಿಂದ ಅಗಲಿದ ಚೇತನಗಳನ್ನು ಆ ದಿನ ಕರೆಯಲಾಗುತ್ತೆ. 

ಯಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ.. ಇದು ಹಾವೇರಿಯ ಮೈ ನವಿರೇಳಿಸೋ ಹೋರಿ ಹಬ್ಬ!

ಅವರು ತೊಡಲೆಂದು ಮೀಸಲಿಟ್ಟ ಬಟ್ಟೆ, ಬಳಸುತ್ತಿದ್ದ ಬಳೆ, ಕರಿಮಣಿ ಇತ್ಯಾದಿಗಳನ್ನು ಪೆಟ್ಟಿಗೆಯಿಂದು ಹೊರ ತೆಗೆದು ಒಣಗಿಸಿ ಮತ್ತೆ ಪೆಟ್ಟಿಗೆಯಲ್ಲಿ ಭದ್ರವಾಗಿ ಇರಿಸಲಾಗುತ್ತೆ. ಹಾಗಾಗಿ ಕರಾವಳಿಯಲ್ಲಿ ಪೂರ್ವಿಕರನ್ನು ಸ್ಮರಿಸುವ ಹಬ್ಬ ಈ ದೀಪಾವಳಿ ತಲೆಮಾರುಗಳಿಂದ ಪೂರ್ವಿಕರನ್ನು ಗೌರವಿಸುವ ವಿಶಿಷ್ಟ ಸಂಸ್ಕೃತಿ ಉಡುಪಿಯಲ್ಲಿ ನಡೆದುಕೊಂಡು ಬಂದಿದೆ. ಸತ್ತ ನಂತರವೂ ಜನರು ನೆನಪಿಟ್ಟುಕೊಳ್ಳುವಂತೆ ಬದುಕಬೇಕು ಅನ್ನೋದು ಎಲ್ಲರ ಜೀವನದ ಉದ್ದೇಶ. ಬದುಕಿದ್ದವರಿಗೆ ಹಿರಿಯರ ಸ್ಮರಣೆ ಮಾಡುವುದನ್ನು ಕಲಿಸುವ ಈ ಜನಪದ ದೀಪಾವಳಿಯೇ ಉಡುಪಿ ಸ್ಪೆಷಲ್!

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ