ಮೂಗಿನ ಮೇಲೆ ಮಹಿಳೆಯರು ಸಿಂಧೂರ ಹಚ್ಚೋದು ಏಕೆ?

By Suvarna NewsFirst Published Dec 21, 2022, 3:15 PM IST
Highlights

ಹಣೆಗೆ ಕುಂಕುಮ ಹಚ್ಚೋದನ್ನು ನಾವು ನೋಡಿದ್ದೇವೆ. ಆದ್ರೆ ಬಿಹಾರದಲ್ಲಿ ಮಹಿಳೆಯರು ಮೂಗಿನಿಂದ ತಲೆಯವರೆಗೆ ಕುಂಕುಮ ಹಚ್ಚಿಕೊಳ್ತಾರೆ. ಛತ್ ಪೂಜೆ ಸಂದರ್ಭದಲ್ಲಿ ಮಹಿಳೆಯರು ಅವಶ್ಯಕವಾಗಿ ಈ ಸಿಂಧೂರ ಹಚ್ಚಿಕೊಳ್ತಾರೆ. ಅದಕ್ಕೆ ಕಾರಣವೇನು ಗೊತ್ತಾ?
 

ಹೆಣ್ಣಿನ ಹಣೆಗೆ ಸಿಂಧೂರ ಭೂಷಣ. ಹಣೆಗೆ ಕುಂಕುಮವಿಟ್ಟ ಮಹಿಳೆಗೆ ಲಕ್ಷ್ಮಿ ಕಳೆ ಬರುತ್ತದೆ ಎನ್ನಲಾಗುತ್ತದೆ. ಕುಂಕುಮವನ್ನು ಸೌಭಾಗ್ಯಕ್ಕೆ ಹೋಲಿಕೆ ಮಾಡಲಾಗುತ್ತದೆ. ಮನೆಗೆ ಬಂದ ಮಹಿಳೆಯನ್ನು ಬರಿಗೈನಲ್ಲಿ ಕಳುಹಿಸುವ ಪದ್ಧತಿ ಭಾರತದಲ್ಲಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ, ಮನೆಗೆ ಮುತ್ತೈದೆ ಬಂದ್ರೆ ಅದಕ್ಕೆ ಅರಿಶಿನ – ಕುಂಕುಮ ನೀಡಿ ಕಳುಹಿಸಲಾಗುತ್ತದೆ. ಬರೀ ಮಹಿಳೆಗೆ ಮಾತ್ರವಲ್ಲ ಹೆಣ್ಮಕ್ಕಳಿಗೆಲ್ಲ ಹಣೆಗೆ ಕುಂಕುಮ ಹಚ್ಚುವ ಸಂಪ್ರದಾಯ ನಮ್ಮಲ್ಲಿದೆ. ಈ ಕುಂಕುಮ ಇಡುವ ವೇಳೆ ಅದು ಮೂಗಿನ ತುದಿಗೆ ಬಿದ್ರೆ, ಗಂಡ ಅವಳನ್ನು ಪ್ರೀತಿಸುತ್ತಾನೆ, ಅತ್ತೆ ಮನೆಯಲ್ಲಿ ಹುಡುಗಿಗೆ ಪ್ರೀತಿ ಸಿಗುತ್ತದೆ ಎಂದೆಲ್ಲ ಹೇಳಲಾಗುತ್ತದೆ.  

ಕರ್ನಾಟಕ (Karnataka) ಸೇರಿದಂತೆ ಭಾರತದ ಬಹುತೇಕ ಕಡೆ ಹಣೆ (Forehead)ಗೆ ಹಾಗೂ ತಲೆ (Head) ಗೆ ಮಹಿಳೆಯರು ಕುಂಕುಮ ಹಚ್ಚಿಕೊಳ್ತಾರೆ. ಆದ್ರೆ ಬಿಹಾರ (Bihar) ಮತ್ತು ಜಾರ್ಖಂಡ್‌ನ ಮಹಿಳೆಯರು ಸ್ವಲ್ಪ ಭಿನ್ನವಾಗಿದ್ದಾರೆ. ಅವರು ಮೂಗಿನ ತುದಿಯಿಂದ ಹಣೆಯ ತುದಿಯವರೆಗೆ ಸಿಂಧೂರ ಹಚ್ಚಿಕೊಳ್ತಾರೆ. ಮೂಗಿನ ತುದಿಗೆ ಕುಂಕುಮ ಹಚ್ಚಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೆವೆ.

Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಬಡತನ ಕಾಡುತ್ತೆ!

ಬಿಹಾರದಲ್ಲಿ ಛತ್ ಪೂಜೆ ಪ್ರಸಿದ್ಧಿ ಪಡೆದಿದೆ. ಈ ಪೂಜೆಯ ಸಮಯದಲ್ಲಿ ಮಹಿಳೆಯರು ಸಿಂಧೂರವನ್ನು ಅನ್ವಯಿಸುವ ವಿಧಾನ ವಿಭಿನ್ನವಾಗಿರುತ್ತದೆ. ಅವರು ಕಿತ್ತಳೆ ಬಣ್ಣದ ಸಿಂಧೂರವನ್ನು ಹಚ್ಚಿಕೊಳ್ತಾರೆ. ಅರ್ಧ ಮುಖಕ್ಕೆ ಸಿಂಧೂರವಿರಯತ್ತದೆ. ಮೂಗಿನ ತುದಿಯಿಂದ ಪ್ರಾರಂಭವಾಗುವ ಸಿಂಧೂರ ಹಣೆ ದಾಟಿ, ಬೈತಲೆಯವರೆಗೆ ಹೋಗಿರುತ್ತದೆ. ದೀಪಾವಳಿಯ ಆರು ದಿನಗಳ ನಂತರ, ಸೂರ್ಯ ದೇವರನ್ನು ಪೂಜಿಸಲಾಗುತ್ತದೆ ಮತ್ತು ನೈವೇದ್ಯವನ್ನು ನೀಡಲಾಗುತ್ತದೆ. ಈ ಹಬ್ಬವು ಮೂರು ದಿನ ನಡೆಯುತ್ತದೆ. ಅದನ್ನು ಛತ್ ಪೂಜೆ ಎಂದು ಕರೆಯಲಾಗುತ್ತದೆ.  ಮಹಿಳೆಯರು ಸಿಂಧೂರವನ್ನು ಲೇಪಿಸಿ ನೀರಿನಲ್ಲಿ ಇಳಿದು ಪೂಜೆ ಮಾಡ್ತಾರೆ. ಭಗವಂತ ರಾಮ ಮತ್ತು ಸೀತೆ ಅಯೋಧ್ಯೆಗೆ ಹಿಂದಿರುಗಿದ ನಂತರ ಜನರು ಉಪವಾಸವನ್ನು ಆಚರಿಸಿದರು ಮತ್ತು ಪೂಜೆ ಮಾಡಿದ್ದರಂತೆ. ಹಾಗಾಗಿ ಅಲ್ಲಿಂದ ಈ ಹಬ್ಬ ಆರಂಭವಾಯಿತು ಎಂದು ನಂಬಲಾಗಿದೆ. 

ಮೂಗಿನ ಮೇಲೆ ಸಿಂಧೂರ ಹಚ್ಚುವ ಅರ್ಥವೇನು? : ಸಿಂಧೂರವನ್ನು ಮೂಗಿನ ಮೇಲೆ ಹಚ್ಚುವುದು ಮನೆಯ ಸಂತೋಷ ಮತ್ತು ಗಂಡನ ಭವಿಷ್ಯಕ್ಕೆ ಸಂಬಂಧಿಸಿದೆ. ಸಿಂಧೂರವನ್ನು ಮೂಗಿನಿಂದ ತಲೆಯವರೆಗೂ ಎಲ್ಲರೂ ನೋಡುವಂತೆ ಹಚ್ಚಬೇಕು ಎಂಬುದು ನಂಬಿಕೆ. ಸಿಂಧೂರವು ಮೂಗಿನಿಂದ ತಲೆಗೆ ಹೋದರೆ, ಸಿಂಧೂರದ ಉದ್ದನೆಯ ಸಾಲಿನಂತೆ, ಗಂಡನ ಆಯುಷ್ಯವು ದೀರ್ಘವಾಗಿರುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡಿದ್ರೆ ಛತ್ ಮಾತೆ ಆಶೀರ್ವಾದ ನೀಡುತ್ತಾಳೆ ಎಂದು ಅಲ್ಲಿನವರ ನಂಬಿಕೆಯಾಗಿದೆ. ಈ ನಂಬಿಕೆಯ ಪ್ರಕಾರ, ಪ್ರತಿ ವಿವಾಹಿತ ಮಹಿಳೆ ತನ್ನ ಮೂಗಿನಿಂದ ತನ್ನ ತಲೆಗೆ ಸಿಂಧೂರವನ್ನು ಹಚ್ಚುತ್ತಾಳೆ. ಕನ್ಯೆಯ ಮೇಲೆ ಈ ಸಿಂಧೂರ ಬಿದ್ದರೆ ಆಕೆಗೆ ಬೇಗ ಮದುವೆಯಾಗುತ್ತದೆ ಎಂದು ಅಲ್ಲಿನವರು ನಂಬುತ್ತಾರೆ.  ಇಷ್ಟೇ ಅಲ್ಲ ಸಿಂಧೂರದ ರೇಖೆಯು ಗಂಡನ ಪ್ರಗತಿಯನ್ನು ತೋರಿಸುತ್ತದೆ ಎಂಬುದು ಕೂಡ ಇಲ್ಲಿನವರ ನಂಬಿಕೆಯಾಗಿದೆ.  ರೇಖೆಯು ಉದ್ದವಾಗಿದ್ದರೆ ಪತಿಯ ಪ್ರಗತಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಈ ರೇಖೆಯನ್ನು ಕಡಿಮೆ ಮಾಡಲು ಒಪ್ಪಿಗೆ ನೀಡಲಾಗುವುದಿಲ್ಲ. ಹಾಗಾಗಿ ಮಹಿಳೆಯರು ಸಾಧ್ಯವಾದಷ್ಟು ಸಮಯ ಈ ರೀತಿ ಸಿಂಧೂರವನ್ನು ಹಚ್ಚುತ್ತಾರೆ.

ಹಿಂದೂ ಧರ್ಮದ ಐದು ಶಕ್ತಿಯುತ ಹಾವುಗಳು ಇವೇ ನೋಡಿ..

ಕಿತ್ತಳೆ ಸಿಂಧೂರ ಮಾತ್ರ ಏಕೆ? : ಈ ಕಿತ್ತಳೆ ಸಿಂಧೂರವನ್ನು ಸೂರ್ಯನ ಕೆಂಪು ಬಣ್ಣಕ್ಕೆ ಹೋಲಿಸಲಾಗುತ್ತದೆ. ಉದಯಿಸುತ್ತಿರುವ ಸೂರ್ಯ ಎಲ್ಲರಿಗೂ ಒಳ್ಳೆಯದು ಮಾಡುತ್ತಾನೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಕಿತ್ತಳೆ ಬಣ್ಣದ ಸಿಂಧೂರವನ್ನು ದೇವರಿಗೆ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಪೌರಾಣಿಕ ಮಹತ್ವವನ್ನು ಹೊಂದಿದೆ. ರಾಮಾಯಣದಲ್ಲಿ ಕೂಡ ಇದರ ವಿವರವಿದೆ.  ವಧುವಿನ ಜೀವನವು ಸಂತೋಷವಾಗಿರಲಿ ಎನ್ನುವ ಕಾರಣಕ್ಕೆ ಮದುವೆ ಸಮಯದಲ್ಲಿ ಕಿತ್ತಳೆ ಸಿಂಧೂರವನ್ನು ಹಚ್ಚಲಾಗುತ್ತದೆ. 
 

click me!