ಹಣ, ಸಂಪತ್ತು ಮತ್ತು ಸಮಾಜದಲ್ಲಿ ಗೌರವ ಪಡೆಯಲು ಚಾಣಕ್ಯರು ಹೇಳಿರುವ ಮೂರು ಮುಖ್ಯ ಸೂತ್ರಗಳನ್ನು ಈ ಲೇಖನ ಒಳಗೊಂಡಿದೆ. ಭೂತಕಾಲದ ಚಿಂತೆ ಬಿಟ್ಟು, ಭವಿಷ್ಯದ ಚಿಂತೆ ಬಿಟ್ಟು, ಹೋಲಿಕೆ ಬಿಟ್ಟು ಬದುಕುವುದೇ ಈ ಮೂರು ಸೂತ್ರಗಳು.
ಆಚಾರ್ಯ ಚಾಣಕ್ಯರ ನೀತಿಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ. ಚಾಣಕ್ಯರು ಕೇವಲ ಆರ್ಥಿಕ ನೀತಿಗಳ ಬಗ್ಗೆ ಮಾತ್ರ ಹೇಳಿಲ್ಲ. ಸಮಾಜದ ಕಟ್ಟುಪಾಡುಗಳು, ವೃತ್ತಿ, ಬಾಂಧವ್ಯ ಸೇರಿದಂತೆ ಮಾನವೀಯ ಮೌಲ್ಯಗಳ ಬಗ್ಗೆ ಚಾಣಕ್ಯರು ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ. ಜೀವನದಲ್ಲಿ ಸಂಪತ್ತು, ಯಶಸ್ಸು ಹಾಗೂ ಸಮಾಜದಲ್ಲಿ ಗೌರವ ಸಿಗಬೇಕಾದ್ರೆ ನೀವು ಚಾಣಕ್ಯ ಹೇಳಿರುವ ಮೂರು ಸೂತ್ರಗಳನ್ನು ಪಾಲಿಸಬೇಕು. ಈ ತ್ರಿ ಸೂತ್ರಗಳು ಓರ್ವ ಉತ್ತಮ ವ್ಯಕ್ತಿಯಲ್ಲಿ ಮಾತ್ರ ಕಂಡು ಬರುತ್ತವೆ. ಹಾಗಾಗಿ ಮೂರು ನೀತಿಗಳನ್ನು ನಾವು ತಿಳಿದುಕೊಂಡಿರಬೇಕು.
ಸಾಮಾಜಿಕ ಜೀವನದ ಜೊತೆಯಲ್ಲಿ ವೃತ್ತಿ ಬದುಕು ಹೇಗಿರಬೇಕು ಎಂಬುದನ್ನು ಸಹ ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಕೌಟಿಲ್ಯ ಹೇಳಿರುವ ಆ ಮೂರು ಸೂತ್ರಗಳು ಏನು ಎಂದು ನೋಡೋಣ ಬನ್ನಿ.
undefined
ಸೂತ್ರ 1: ಮೊದಲು ನೀವು ಹಿಂದೆ ನಡೆದ ಘಟನೆಗಳ ಬಗ್ಗೆ ಯೋಚಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಈ ರೀತಿ ಯೋಚಿಸೋದರಿಂದ ಯಾವುದೇ ಲಾಭ ಇಲ್ಲ. ಈ ಸತ್ಯವನ್ನು ಅರಿತುಕೊಂಡು ಜೀವನ ನಡೆಸಬೇಕು. ಭೂತಕಾಲದ ವಿಷಯಗಳ ಬಗ್ಗೆಯೇ ಚಿಂತಿಸುತ್ತಿದ್ದರೆ ಸದ್ಯದ ಆನಂದ ಕ್ಷಣಗಳನ್ನು ನೀವು ಕಳೆದುಕೊಳ್ಳುತ್ತೀರಿ. ಹಾಗಾಗಿ ಎಂದಿಗೂ ಭೂತಕಾಲದ ಬಗ್ಗೆ ಚಿಂತಿಸಬಾರದು. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮುನ್ನಡೆಯುತ್ತಿರಬೇಕು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಹೇಳಿದ್ದಾರೆ.
ಭೂತಕಾಲದಲ್ಲಿ ನಡೆದ ಘಟನೆಗಳಿಂದ ನಮ್ಮಿಂದ ಎಲ್ಲಿ ತಪ್ಪಾಯ್ತು ಎಂದು ಕಲಿತುಕೊಳ್ಳಬೇಕು ತಪ್ಪುಗಳು ಪಾಠವನ್ನಾಗಿ ಮಾಡಿಕೊಳ್ಳಬೇಕೆಂದು ಆಚಾರ್ಯ ಚಾಣಕ್ಯ ಸಲಹೆ ನೀಡತ್ತಾರೆ.
ಈ 10 ಸಂದರ್ಭಗಳಲ್ಲಿ ಮೌನವಾಗಿದ್ದರೆ ಯಶಸ್ಸು ಪಕ್ಕಾ
ಸೂತ್ರ 2: ಎರಡನೇ ಸೂತ್ರ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸೋದನ್ನು ಸಹ ನಿಲ್ಲಿಸಬೇಕು ಎಬುವುದು ಆಚಾರ್ಯ ಚಾಣಕ್ಯರ ಮಾತಾಗಿದೆ. ಪ್ರತಿದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಾ ಕುಳಿತರೆ ಅಥವಾ ಅಧಿಕ ಕೆಲಸ ಮಾಡಿದರೆ ಭವಿಷ್ಯ ಚೆನ್ನಾಗಿ ಇರುತ್ತೆ ಎಂದು ಯಾರು ನಿಶ್ಚಿತವಾಗಿ ಹೇಳಲ್ಲ. ಆದ ಕಾರಣ ದೇವರು ನೀಡಿರುವ ಆ ದಿನವನ್ನು ಆನಂದಿಸಬೇಕು. ಅಂದಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ರೆ ಸಂಪತ್ತು ಸಹ ನಿಮ್ಮದಾಗುತ್ತದೆ. ಅತಿಯಾದ ಭವಿಷ್ಯದ ಚಿಂತನೆ ನಿಮ್ಮ ಸಮಯ, ಹಣ, ನೆಮ್ಮದಿಯನ್ನು ಹಾಳು ಮಾಡುತ್ತದೆ.
ಸೂತ್ರ 3: ಬೇರೆಯವರನ್ನು ನಿಮ್ಮೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ನಿಮಗಿಂತ ಹೆಚ್ಚು ವಿಲಾಸಿಮಯ ಅಥವಾ ಉನ್ನತ ಸ್ಥಾನದಲ್ಲಿರೋರನ್ನು ನೋಡಿ ಅಸೂಯೆಗೆ ಒಳಗಾಗಬಾರದು. ಇದನ್ನು ಹೊಟ್ಟೆಕಿಚ್ಚು ಎಂದು ಕರೆಯಬಹುದು. ಅಸೂಯೆಪಡುವ ಬದಲು ಅಂತಹವರಿಂದ ಸ್ಪೂರ್ತಿ ಪಡೆದುಕೊಳ್ಳಬೇಕು. ನಿಮಗಿಂತ ಉನ್ನತ ಸ್ಥಾನದಲ್ಲಿರುವ ಜನರು ಈ ಹಂತಕ್ಕೆ ಬರಲು ಕಾರಣ ಏನೆಂದು ತಿಳಿದು ಕೆಲಸ ಮಾಡಬೇಕು. ಈ ರೀತಿ ಸ್ಪೂರ್ತಿ ಪಡೆದು ಕೆಲಸ ಮಾಡಿದಾಗ ಹಣ, ಸಂಪತ್ತು ಮತ್ತು ಸಮಾಜದಲ್ಲಿ ಉತ್ತಮ ಗೌರವ ನಿಮ್ಮದಾಗುತ್ತದೆ ಎಂದು ಆಚಾರ್ ಚಾಣಕ್ಯರು ಹೇಳಿದ್ದಾರೆ.
ಚಾಣಕ್ಯ ನೀತಿ: ಈ ಐದು ಜನರು ಯಾವಾಗಲೂ ಮೂರ್ಖರಾಗಿಯೇ ಇರ್ತಾರೆ, ಇವರ ಜೊತೆಯಲ್ಲಿರೋರು ಹುಷಾರ್ ಆಗಿರಿ!