ಈ ತಪ್ಪುಗಳನ್ನು ಮಾಡಿದರೆ, ಎಷ್ಟು ಶ್ರಮ ಪಟ್ಟರೂ ಯಶಸ್ಸು ಸಿಗುವುದಿಲ್ಲ –ಚಾಣಕ್ಯ

By Suvarna NewsFirst Published Jul 14, 2022, 7:01 PM IST
Highlights

 ಜೀವನದ ಪ್ರತಿ ಹಂತದಲ್ಲೂ ಯಶಸ್ಸನ್ನು ಗಳಿಸುವುದು ಹೇಗೆ ಎಂಬುದರ ರಹಸ್ಯದ ಬಗ್ಗೆ ಚಾಣಕ್ಯ ನೀತಿಯಿಂದ ತಿಳಿಯಬಹುದಾಗಿದೆ. ಹಾಗೇಯೇ ಯಶಸ್ಸು ಗಳಿಸುವ ಸಂದರ್ಭದಲ್ಲಿ ಅನೇಕ ತಪ್ಪುಗಳು ಆಗುತ್ತದೆ. ಆ ತಪ್ಪುಗಳು ಯಾವುವು ಮತ್ತು ಅದನ್ನು ಮಾಡದೇ ಯಶಸ್ಸು ಗಳಿಸುವುದು ಹೇಗೆ ಎಂಬುದರ ಬಗ್ಗೆ ಚಾಣಕ್ಯ ನೀತಿ ಸೂತ್ರದಲ್ಲಿ ಹೇಳಿದ ಅಂಶಗಳ ಬಗ್ಗೆ ತಿಳಿಯೋಣ...

ಜೀವನದಲ್ಲಿ ಎಲ್ಲರೂ ಯಶಸ್ಸನ್ನು ಗಳಿಸಲು ಶತಪ್ರಯತ್ನ ಮಾಡುತ್ತಿರುತ್ತಾರೆ. ಕನಸು (Dream) ನನಸು ಮಾಡಿಕೊಳ್ಳುವ ಗುರಿಯನ್ನು ಹೊಂದಿರುತ್ತಾರೆ. ಅದಕ್ಕೆ ತಕ್ಕ ಹಾಗೇ ಅಷ್ಟೇ ಪರಿಶ್ರಮವನ್ನೂ ಹಾಕುತ್ತಾರೆ. ಆದರೂ ಸಫಲತೆ ದೊರಕುವುದಿಲ್ಲ. ಆದರೆ ಅದಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದಿರುವುದಿಲ್ಲ. ಆದರೆ ಚಾಣಕ್ಯ ನೀತಿಯ (Chanakya niti) ಪ್ರಕಾರ ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲವು ತಪ್ಪಿನಿಂದ ಯಶಸ್ಸಿನ ಮಾರ್ಗಕ್ಕೆ ಚ್ಯುತಿ ಬರುತ್ತದೆ. ಹಾಗಾಗಿ ಸಫಲತೆಯ ಹಾದಿಯಲ್ಲಿರುವಾಗ ಈ ನಾಲ್ಕು ತಪ್ಪುಗಳನ್ನು ಮಾಡಬಾರದೆಂದು ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಹೇಳುತ್ತಾರೆ. ಹಾಗಾದರೆ ಅವು ಯಾವುವು, ಯಾವ ತಪ್ಪು (Mistakes) ಮಾಡುವುದರಿಂದ ಯಶಸ್ಸು (Success) ಕುಂಠಿತವಾಗುತ್ತದೆ ಎಂಬುದನ್ನು ತಿಳಿಯೋಣ...

ನಿತ್ಯ ಜೀವನಕ್ಕೆ (Life) ಬೇಕಾಗುವ ಅನೇಕ ನೀತಿಪಾಠಗಳನ್ನು ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಸರಳವಾಗಿ ತಿಳಿಸಿಕೊಟ್ಟಿದ್ದಾರೆ. ಅವುಗಳ ಪಾಲನೆಯಿಂದ ಸುಖ (Happiness) ಮತ್ತು ಸಮೃದ್ಧ ಜೀವನ ಸಾಧ್ಯವಾಗುತ್ತದೆ. ಮನಸ್ಸು ಮತ್ತು ಬುದ್ಧಿಗೆ ಸಂಬಂಧಿಸಿದ ಯಾವ ತಪ್ಪುಗಳ ಬಗ್ಗೆ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ ಎಂಬುದನ್ನು ತಿಳಿಯೋಣ....

ಅಸಫಲತೆಯ ಭಯ ಬೇಡ (Scare)
ಯಶಸ್ಸನ್ನು ಗಳಿಸಬೇಕೆಂದು ಕೊಂಡವರು ಇಡಬೇಕಾದ ಮೊದಲ ಹೆಜ್ಜೆಯೇ ಅಸಫಲತೆಯ ಭಯವನ್ನು ಮನಸ್ಸಿನಿಂದ ತೆಗೆದು ಹಾಕುವುದು. ಚಾಣಕ್ಯ ನೀತಿಯ ಪ್ರಕಾರ ಭಯವಿದ್ದಲ್ಲಿ ಯಶಸ್ಸಿನ ವೇಗ (Speed) ಕುಂಠಿತಗೊಳ್ಳುವುದಲ್ಲದೆ, ಯಶಸ್ಸಿನ ಮಾರ್ಗವನ್ನು ಸಹ ಮುಚ್ಚಿಹಾಕುತ್ತದೆ. ಹಾಗಾಗಿ ಮನಸ್ಸಿನಲ್ಲಿರುವ ಅಸಫಲತೆಯ ಭಯವು ಮನಸ್ಸಿನಲ್ಲಿದ್ದರೆ, ಅದರ ಕಾರಣದಿಂದಾಗಿ ಯಶಸ್ಸಿನ ಕಡೆಗೆ ಪೂರ್ಣ ಮನಸ್ಸಿನಿಂದ ಪ್ರಯತ್ನಿಸುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಪೂರ್ಣ ಶ್ರದ್ಧೆಯಿಲ್ಲದೇ ಮಾಡಿದ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುವುದಿಲ್ಲ.

ಇದನ್ನು ಓದಿ: ಮಳೆಗಾಲದಲ್ಲಿ ಹುಟ್ಟಿದವರಾ ನೀವು? ಸೀಸನ್‌ಗೆ ತಕ್ಕಂತೆ ಬದಲಾಗುತ್ತೆ ವ್ಯಕ್ತಿತ್ವ

ಇಷ್ಟದ ಕೆಲಸ ಮಾಡಿ (Loving Work)
ಬೇರೆಯವರನ್ನು ನೋಡಿ ಎಲ್ಲದನ್ನು ಅನುಸರಿಸುವುದು ಒಳ್ಳೆಯದಲ್ಲ. ಬೇರೆಯವರು ಮಾಡಿದ್ದಾರೆಂಬ ಕಾರಣಕ್ಕೆ ಯಾವುದೇ ಕೆಲಸವನ್ನು ಆರಂಭಿಸಬೇಡಿ. ಮನಸ್ಸಿಗೆ ಇಷ್ಟವಾದ ಕೆಲಸವನ್ನು ಆರಂಭಿಸಿ ಅದರಲ್ಲಿ ಯಶಸ್ಸು ಪಡೆಯಬಹುದಾಗಿದೆ. ಅದರಲ್ಲೂ ಕೆಲಸವನ್ನು ಆರಂಭಿಸುವ ಮೊದಲು ಮೂರು ಪ್ರಶ್ನೆಗಳನ್ನು (Question) ನಮಗೆ ನಾವೇ ಕೇಳಿಕೊಳ್ಳಬೇಕು. ನಾನು ಈ ಕೆಲಸವನ್ನು ಏಕೆ ಮಾಡುತ್ತಿದ್ದೇನೆ?, ಇದರ ಪರಿಣಾಮ ಏನಾಗಬಹುದು? , ಇದರಲ್ಲಿ ನಾನು ಸಫಲತೆಯನ್ನು ಕಂಡುಕೊಳ್ಳಲು ಸಾಧ್ಯವೇ?  ಎಂದು ಕೇಳಿಕೊಂಡಾಗ ಮನಸ್ಸು ಹೇಳುವ ಉತ್ತರ ಖುಷಿಕೊಡುವುದಾಗಿದ್ದರೆ, ಆಗ ಹೊಸ ಕೆಲಸವನ್ನು ಆರಂಭಿಸಬಹುದು. ಯಾವುದೇ ಮುಂದಾಲೋಚನೆ ಇಲ್ಲದೇ ಮಾಡುವ ಕೆಲಸದಿಂದ ಯಶಸ್ಸು ಗಳಿಸುವುದು ಅಸಾಧ್ಯವಾಗಿರುತ್ತದೆ.

ಸವಾಲುಗಳನ್ನು ಎದುರಿಸುವುದು (Challenges)
ಯಾವುದೋ ಹೊಸ ಕೆಲಸವನ್ನು ಆರಂಭಿಸಿದಾಗ, ಪರಿಸ್ಥಿತಿಗಳಿಗೆ ಸಿಕ್ಕಿ ಆರಂಭಿಸಿದ ಕೆಲಸವನ್ನು ಮುಂದುವರಿಲಾಗದೇ ಅರ್ಧಕ್ಕೇ ಕೈ ಬಿಡುವುದು ಒಳ್ಳೆಯದಲ್ಲ. ಪರಿಶ್ರಮದಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸಬೇಕು. ಅಸಫಲತೆಯಿಂದ ಪಾಠ ಕಲಿತು ಅದರಿಂದ ತಪ್ಪನ್ನು ಅರಿತು ಮುಂದುವರೆಯ ಬೇಕಾಗಿರುತ್ತದೆ. ಆಗ ಮಾತ್ರ ಯಶಸ್ಸು ದೊರಕುತ್ತದೆ. ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡುವವರಿಗೆ ಎಂದಿಗೂ ಸಫಲತೆ ದೊರಕುವುದಿಲ್ಲ. ಅವರ ಕನಸುಗಳು ನನಸಾಗುವುದೂ ಸಹ ಕಷ್ಟಸಾಧ್ಯವಾಗುತ್ತದೆ.

ಇದನ್ನು ಓದಿ: ಶನಿಯನ್ನು ಮನೆಯಲ್ಲಿ ಪೂಜಿಸೋಲ್ಲ.. ಏಕೆ ಕೇಳಿದ್ರಾ?

ಯೋಜನೆ ನಿಮ್ಮಲ್ಲೇ ಇರಲಿ (Planning)
ಯಾವುದೇ ಕೆಲಸವ್ನನು ಮಾಡುವ ಮೊದಲು ಯೋಜನೆ ಹಾಕಿಕೊಳ್ಳುವುದು ರೂಢಿ. ಆ ಯೋಜನೆಯ ಬಗ್ಗೆ ಇತರರೊಂದಿಗೆ ಚರ್ಚಿಸದಿರುವುದು ಒಳ್ಳೆಯದು. ಹಾಗೆ ಇತರರೊಂದಿಗೆ ಯೋಜನೆಯನ್ನು ಹಂಚಿಕೊಂಡಾಗ ಅದನ್ನು ಇತರರು ತಮ್ಮ ಕೆಲಸಕ್ಕೆ ಉಪಯೋಗಿಸುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂದುಕೊಂಡ ಕೆಲಸವಾಗಬೇಕೆಂದರೆ ಕಾರ್ಯ ವೈಖರಿಯ ಯೋಜನೆಯನ್ನು ರಹಸ್ಯವಾಗಿ (Secret) ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೇ ಯಶಸ್ಸು ಗಳಿಸಿದ ನಂತರ ಯಶಸ್ಸಿನ ಗುಟ್ಟನ್ನು ಯಾರಿಗೂ ತಿಳಿಸಬೇಡಿ. ಇದು ಮುಂದಿನ ಯಶಸ್ಸಿಗೆ ಮುಳುವಾಗುವ ಸಾಧ್ಯತೆ ಇರುತ್ತದೆ. ಇದು ಮನಸ್ಸಿನಲ್ಲಿ ಅಸೂಯೆಯ ಭಾವನೆಯನ್ನು ಉಂಟುಮಾಡುತ್ತದೆ.

click me!