ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನೋಡಿದ್ರೆ ಅನೇಕ ಮಹಿಳೆಯರು ಹೊಟ್ಟೆ ಉರಿದುಕೊಳ್ತಾರೆ. ಅವರ ಫಿಟ್ನೆಸ್, ಡಾನ್ಸ್, ಸೌಂದರ್ಯ ಎಂಥವರನ್ನೂ ಸೆಳೆಯುತ್ತೆ. ಇಷ್ಟೆಲ್ಲ ಚೆಂದವಾಗಿರಲು ಅವರು ಏನು ಮಾಡ್ತಾರೆ ಎನ್ನುವವರಿಗೆ ಉತ್ತರ ಇಲ್ಲಿದೆ.
ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಗೆ 48 ವರ್ಷವಾದ್ರೂ ಬಳಕುವ ಬಳ್ಳಿಯಂತಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಮುದ್ದಿನ ಮಡದಿ, ಕಪೂರ್ ಕುಟುಂಬದ ಮಗಳು ಕರೀನಾ ಕಪೂರ್ ಗೂ ವಯಸ್ಸು ಕಡಿಮೆ ಏನಾಗಿಲ್ಲ. 42ರ ಆಸುಪಾಸಿನಲ್ಲಿರುವ ಕರೀನಾ ಕಪೂರ್ ಈಗ್ಲೂ ಯುವ ನಟಿಯರನ್ನು ನಾಚಿಸುವ ಸೌಂದರ್ಯ ಹೊಂದಿದ್ದಾರೆ. ವಾಟ್ ವುಮೆನ್ ವಾಂಟ್ ಕಾರ್ಯಕ್ರಮದಲ್ಲಿ ಕರೀನಾ ಕಪೂರ್, ಶಿಲ್ಪಾ ಶೆಟ್ಟಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದಾರೆ. ಕರೀನಾ ಜೊತೆ ಮಾತನಾಡಿದ ಶಿಲ್ಪಾ, ತಮ್ಮ ಈ ಸೌಂದರ್ಯದ ಗುಟ್ಟೇನು ಎಂಬುದನ್ನು ಹೇಳಿದ್ದಾರೆ.
ಶಿಲ್ಪಾ (Shilpa) ಡಯಟ್ ಮಾಡ್ತಾರಾ? : ಹಣ್ಣು (Fruit) , ಜ್ಯೂಸ್ ನಲ್ಲಿಯೇ ನಿಮ್ಮ ದಿನ ಕಳೆಯುತ್ತಾ ಎಂಬ ಕರೀನಾ ಪ್ರಶ್ನೆಗೆ ಶಿಲ್ಪಾ ಹೇಳಿದ್ದು ನೋ ನೋ ಅಂತ. ನವರಾತ್ರಿಯಲ್ಲಿ ಮಾತ್ರ ಇಂಥ ಉಪವಾಸ ಮಾಡುವ ಶಿಲ್ಪಾಗೆ ರಾತ್ರಿಯಾಗ್ತಿದ್ದಂತೆ ಹಸಿವು ಹೆಚ್ಚಾಗುತ್ತಂತೆ.
undefined
ಲಕ್ಷ್ಮಿ ಬಾರಮ್ಮಾ ಸೀರಿಯಲ್ ಕೀರ್ತಿ ಬ್ಯೂಟಿ ಸೀಕ್ರೆಟ್ ರಿವೀಲ್ಡ್, ಏನು ಗುಟ್ಟು?
ಡಯಟ್ (Diet) ಹೆಸರಿನಲ್ಲಿ ಆಹಾರದಿಂದ ದೂರ ಓಡ್ಬೇಡಿ. ತುಪ್ಪದಿಂದ ದೂರ ಹೋಗ್ಬೇಡಿ. ಸರಿಯಾದ ಆಹಾರ ಸೇವನೆ ಮಾಡಿ ಎಂದ ಶಿಲ್ಪಾ ಶೆಟ್ಟಿ, ಯಾವಾಗ ತಿನ್ನುತ್ತೀರಿ, ಎಷ್ಟು ತಿನ್ನುತ್ತೀರಿ, ಯಾಕೆ ತಿನ್ನುತ್ತೀರಿ ಮತ್ತು ಹೇಗೆ ತಿನ್ನುತ್ತಿದ್ದೀರಿ ಎಂಬುದನ್ನ ಗಮನಿಸಿ ತಿನ್ನಿ ಎಂದು ಸಲಹೆ ನೀಡಿದ್ದಾರೆ.
ಶಿಲ್ಪಾ ರೋಲ್ ಮಾಡೆಲ್ ಯಾರು?: ಫಿಟ್ನೆಸ್ ವಿಷ್ಯದಲ್ಲಿ ನಿಮ್ಮ ರೋಲ್ ಮಾಡೆಲ್ ಯಾರು ಎಂದು ಕರೀನಾ ಕೇಳ್ತಿದ್ದಂತೆ ಶಿಲ್ಪಾ ಬಾಯಿಂದ ಬಂದಿದ್ದು ನಟಿ ರೇಖಾ ಹೆಸರು. ಅಲ್ಲದೆ ಜನಿಫರ್ ಲೋಫೇಸ್ ಬಗ್ಗೆ ಹೇಳಿದ ಶಿಲ್ಪಾ, 50ನೇ ವಯಸ್ಸಿನಲ್ಲಿ ನಾನೂ ಅವರಂತೆ ಇರಲು ಇಷ್ಟಪಡ್ತೇನೆ ಎಂದಿದ್ದಾರೆ.
ಕೃತಿ ಸನೋನ್ ಅದ್ಭುತ ತ್ವಚೆಯ ಬ್ಯೂಟಿ ಸೀಕ್ರೆಟ್ ಇದಂತೆ!
ಕಾರ್ಬ್ಸ್ ಆಹಾರನಿಂದ ದೂರವಿದ್ದಾರಾ ನಟಿ?: ಈಗಿನ ದಿನಗಳಲ್ಲಿ ನೋ ಕಾರ್ಬ್ಸ್ ಡಯಟ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಆದ್ರೆ ಶಿಲ್ಪಾ ಫಿಟ್ನೆಸ್ ಗೆ ಈ ರೂಲ್ಸ್ ಫಾಲೋ ಮಾಡ್ತಿಲ್ಲ. ಫ್ರೆಂಚ್ ಟೋಸ್ಟ್ ಅಂದ್ರೆ ಇಷ್ಟ ಎನ್ನುವ ನಟಿ, ಕಾರ್ಬೋಹೈಡ್ರೇಟ್ ಸೇವನೆ ಮಾಡ್ತಾರೆ. ಹೆರಿಗೆ ನಂತ್ರ 32 ಕೆಜೆ ತೂಕ ಏರಿದ್ದಾಗ ಲೋ ಕಾರ್ಬ್ಸ್ .. ನೋ ಕಾರ್ಬ್ಸ್ ರೂಲ್ಸ್ ಫಾಲೋ ಮಾಡಿದ್ದರಂತೆ. ಅದು ಮ್ಯಾಜಿಕ್ ನಂತೆ ಕೆಲಸ ಮಾಡಿತ್ತು ಎನ್ನುತ್ತಾರೆ ಶಿಲ್ಪಾ. ಆದ್ರೆ ಕಾರ್ಬ್ಸ್ ತುಂಬಾ ಅಗತ್ಯ. ಅದು ಶಕ್ತಿಯನ್ನು ನೀಡುತ್ತದೆ. ನೀವು ಯಾವ ಕಾರ್ಬ್ಸ್ ಸೇವನೆ ಮಾಡ್ತೀರಿ ಎಂಬುದು ಮುಖ್ಯವಾಗುತ್ತೆ ಎನ್ನುತ್ತಾರೆ ಶಿಲ್ಪಾ. ಕರಿದ ಆಲೂಗಡ್ಡೆ ಸೇವನೆ ಮಾಡುವ ಬದಲು ಬೇಯಿಸಿದ ಆಲೂಗಡ್ಡೆ ತಿನ್ನಲು ಶಿಲ್ಪಾ ಸಲಹೆ ನೀಡ್ತಾರೆ. ಸಂಜೆ ಆರು ಅಥವಾ 7 ಗಂಟೆ ನಂತ್ರ ಕಾರ್ಬ್ಸ್ ಸೇವನೆ ಮಾಡದಿರಲು ಅವರು ಪ್ರಯತ್ನಪಡ್ತಾರೆ.
ಮಾನಸಿಕ ಆರೋಗ್ಯಕ್ಕೆ (Mental Health) ಏನು ಮುಖ್ಯ: ಮೆಂಟಲ್ ಹೆಲ್ತ್ ಬಗ್ಗೆ ಕರೀನಾ ಪ್ರಶ್ನೆಗೆ ಉತ್ತರ ನೀಡಿದ ಶಿಲ್ಪಾ, ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಹಾಗೂ ಧ್ಯಾನಕ್ಕೆ ಮಹತ್ವ ನೀಡ್ತೇನೆ ಎಂದಿದ್ದಾರೆ. ಯೋಗ ನನ್ನ ದೇಹ, ಮನಸ್ಸು ಹಾಗೂ ಆತ್ಮದ ಮಧ್ಯೆ ದೊಡ್ಡ ಬದಲಾವಣೆ ಮಾಡಿದೆ. ಅದೇನೇ ಆಗಿರಲಿ ರಾತ್ರಿ ಮಲಗುವ ಮೊದಲು 12 ನಿಮಿಷ ನನಗಾಗಿ ಸಮಯ ಮೀಸಲಿಡ್ತೇನೆ. ನಾನು ಆ ಸಮಯದಲ್ಲಿ ಧ್ಯಾನ ಮಾಡಿ, ದೀರ್ಘವಾಗಿ ಉಸಿರಾಟಕ್ರಿಯೆ ನಡೆಸುತ್ತೇನೆ ಎನ್ನುತ್ತಾರೆ ಶಿಲ್ಪಾ. ನನಗೆ ಯಾವುದೇ ಸಮಸ್ಯೆಯಿಲ್ಲ ಕೂಲ್ ಆಗಿದ್ದೇನೆ ಎನ್ನುವುದು ಸುಳ್ಳು. ಎಲ್ಲರಿಗೂ ಸಮಸ್ಯೆ ಇರುತ್ತದೆ. ಖಿನ್ನತೆಗೆ ಒಳಗಾಗಿದ್ದೀರಿ ಎಂದಾದ್ರೆ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ಎಲ್ಲವನ್ನೂ ಕುಟುಂಬಸ್ಥರ ಮುಂದೆ ಹೇಳಲು ಸಾಧ್ಯವಿಲ್ಲ. ಮಾನಸಿಕ ತಜ್ಞರನ್ನು ಭೇಟಿಯಾಗೋದು ಮುಜುಗರದ ಸಂಗತಿಯಲ್ಲ ಎಂದು ಶಿಲ್ಪಾ ಸಲಹೆ ನೀಡಿದ್ದಾರೆ.
ಫಿಟ್ನೆಸ್ (Fitness) ಬಗ್ಗೆ ಟಿಪ್ಸ್ ಏನು? : ಫಿಟ್ನೆಸ್ ಬಗ್ಗೆ ಗಮನ ನೀಡುವ ಜನರು ಬರೀ ವರ್ಕ್ ಔಟ್ ಮಾಡಿದ್ರೆ ಸಾಲೋದಿಲ್ಲ. ಡಯಟ್ ಪಾಲನೆ ಮಾಡ್ಬೇಕು. ಅದಕ್ಕೆ ಎಂದೂ ಮೋಸ ಮಾಡ್ಬಾರದು ಎನ್ನುತ್ತಾರೆ ಶಿಲ್ಪಾ. ಡಯಟ್ ಅನ್ನೋದು ಮದುವೆ. ಅಲ್ಲಿ ಮೋಸ ಸಾಧ್ಯವಿಲ್ಲ ಎಂದ ಶಿಲ್ಪಾ, ಒಂದು ಡೈರಿ ಸಿದ್ಧಪಡಿಸಿ. ಇಡೀ ವೀಕ್ ನಲ್ಲಿ ನೀವು ಸಕ್ಕರೆ, ಮೈದಾ ಬಿಟ್ಟು ಇರ್ತೇನೆ ಅಂತಾ ಶಪತ ಮಾಡಿ. ಭಾನುವಾರ ಅಥವಾ ವಾರದಲ್ಲಿ ಎರಡು ದಿನ ಬೇಕಾದ್ರೆ ಊಟದಲ್ಲಿ ವ್ಯತ್ಯಾಸವಿರಲಿ ಎಂದು ಶಿಲ್ಪಾ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.