ಶುದ್ಧ ಮನಸ್ಸಿಲ್ಲವೆಂದ್ರೆ ಹೆಣಕ್ಕೆ ಬಟ್ಟೆ ಹಾಕಿದಂತೆ : ಫ್ಯಾಷನ್ ಬಗ್ಗೆ ರವಿಶಂಕರ್ ಗುರೂಜಿ ಮಾತು

By Suvarna News  |  First Published Jul 8, 2023, 4:51 PM IST

ಫ್ಯಾಷನ್ ಈಗಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪ್ರತಿಯೊಂದು ವಿಷ್ಯದಲ್ಲೂ ಫ್ಯಾಶನ್ ಹುಡುಕುವ ನಾವು, ಮನಸ್ಸಿನಲ್ಲಿ ಮಾತ್ರ ಅದೇ ಹಳೆ ದ್ವೇಷ, ಬೇಸರ, ಕೋಪವನ್ನಿಟ್ಟುಕೊಂಡಿರ್ತೇವೆ. ಫ್ಯಾಷನ್ ಅಂದ್ರೆ ಏನು ಅನ್ನೋದನ್ನು ರವಿಶಂಕರ್ ಗುರೂಜಿ ಹೇಳಿದ್ದಾರೆ. ತಿಳಿದ್ಕೊಳ್ಳಿ. 
 


ಹಿಂದೆ, ಮೈ ಮುಚ್ಚಿಕೊಳ್ಳೋಕೆ ಒಂದು ಬಟ್ಟೆ ಎಂಬ ಭಾವನೆ ಇತ್ತು. ಆದರೆ ಈಗ ಬಟ್ಟೆ ಫ್ಯಾಶನ್ ಗೆ ಸೀಮಿತವಾಗಿದೆ. ಯಾವುದೇ ಸಭೆ, ಸಮಾರಂಭಗಳಿಗೆ ಹೋದ್ರೂ ಎಲ್ಲರ ಕಣ್ಣು ಡ್ರೆಸ್,ಅವರ ಪ್ಯಾಶನ್ ಎಕ್ಸಸರೀಸ್ ಮೇಲಿರುತ್ತೆ. ಇದ್ರಲ್ಲಿ ಸೆಲೆಬ್ರಿಟಿಗಳು ಎತ್ತಿದ ಕೈ. ಅವರ ಸ್ಟೈಲ್, ಫ್ಯಾಶನ್ ಸೆನ್ಸ್ ನೋಡಿ ಅಭಿಮಾನಿಗಳು ಅದನ್ನು ಫಾಲೋ ಮಾಡ್ತಾರೆ.  

ಫ್ಯಾಶನ್ (Fashion) ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಭಾವನೆ ಇರುತ್ತದೆ. ಈಗಿನ ಯುವಜನತೆಯನ್ನು ಫ್ಯಾಶನ್ ಏನೆಂದು ಕೇಳಿದರೆ ಬಟ್ಟೆ, ಶೂ, ಮೇಕಪ್ ಹೀಗೆ ಉದ್ದದ ಪಟ್ಟಿ ಹೇಳ್ತಾರೆ. ಆದ್ರೆ ಆರ್ಟ್ ಆಫ್ ಲಿವಿಂಗ್ (Art of Living) ಮುಖ್ಯಸ್ಥ ರವಿಶಂಕರ್ (Ravi Shankar) ಗುರೂಜಿ ಫ್ಯಾಶನ್ ಪರಿಕಲ್ಪನೆ ಭಿನ್ನವಾಗಿದೆ. 

Latest Videos

undefined

ಕೃತಿ ಸನೋನ್ ಅದ್ಭುತ ತ್ವಚೆಯ ಬ್ಯೂಟಿ ಸೀಕ್ರೆಟ್ ಇದಂತೆ!

ರವಿಶಂಕರ ಗುರೂಜಿ ಫ್ಯಾಶನ್ ಬಗ್ಗೆ ಏನ್ ಹೇಳ್ತಾರೆ ? : ಫ್ಯಾಶನ್ ಸ್ಟೈಲಿಸ್ಟ್ ಆದ ಎಮಿ ಪಟೇಲ್ ಅವರು ಇನ್ಸ್ಟಾಗ್ರಾಂ ಪೇಜ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ರವಿಶಂಕರ ಗುರೂಜಿ ಅವರ ಸಂದರ್ಶನವಿದೆ. ಸಂದರ್ಶನದ ಸಮಯದಲ್ಲಿ ಎಮಿ ಪಟೇಲ್  ಗುರುಗಳ ಬಳಿ ನೀವು ಯಾವ 5 ವರ್ತನೆಯನ್ನು ಪ್ಯಾಶನೆಬಲ್ ಅಥವಾ ಗ್ಲೋಬಲ್ ಟ್ರೆಂಡ್ ನ ಭಾಗವಾಗಿ ನೋಡಲು ಬಯಸುತ್ತೀರಿ? ಎಂದು ಕೇಳಿದ್ದಾರೆ. ಎಮಿ ಪಟೇಲ್ ಅವರು ಕೇಳಿದ ಪ್ರಶ್ನೆಗೆ ಗುರೂಜಿಯವರು ಉತ್ತರ ನೀಡಿದ್ದಾರೆ.

• ಫ್ಯಾಶನ್ ವಾಕ್ ವೇಳೆ ಮುಖದಲ್ಲಿ ನಗು ಇರಲಿ : ಮೊದಲನೆಯದಾಗಿ ನಾನು ರ್ಯಾಂಪ್ ವಾಕ್ ಮಾಡಿ ಜಗತ್ತಿಗೆ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡುವವರ ಮುಖದಲ್ಲಿ ನಗುವನ್ನು ನೋಡಲು ಬಯಸುತ್ತೇನೆ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ. ಹಾಗೇ ತಮ್ಮ ಮಾತನ್ನು ಮುಂದುವರೆಸಿದ ಗುರೂಜಿ, ಸೌಂದರ್ಯವನ್ನು ಕೇವಲ ಬಟ್ಟೆಯಿಂದ ತೋರಿಸುವುದಲ್ಲ. ನಮ್ಮ ಅಂತರಂಗದ ಸೌಂದರ್ಯವನ್ನು ಕೂಡ ನಾವು ಹೊರಗೆ ತರಬೇಕು ಎಂದಿದ್ದಾರೆ.

Beauty Tips: ಯಾರದ್ದೋ ಒತ್ತಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡು ಅನುಭವಿಸ್ಬೇಡಿ, ಕಾಜೋಲ್ ಹೇಳಿದ್ದು

• ಅಂತರಂಗ ಶುದ್ಧವಾಗಿ ಇರದಿದ್ರೆ ಹೆಣಕ್ಕೆ ಬಟ್ಟೆ ತೊಡಿಸಿದಂತೆಯೇ ಸರಿ : ಆಧ್ಯಾತ್ಮಿಕ ಗುರುಗಳಾದ ರವಿಶಂಕರ ಗುರೂಜಿಯವರು ‘ಇನ್ನರ್ ಬ್ಯೂಟಿ’ಯ ಕುರಿತು ಮಾತನಾಡಿ ನಮ್ಮ ಮನಸ್ಸು ಅಥವಾ ಅಂತರಂಗದ ಸೌಂದರ್ಯವನ್ನು ನಾವು ಜಾಗೃತಗೊಳಿಸದೇ ಫ್ಯಾಶನ್ ಮಾಡಿದರೆ, ಶವ ಬಟ್ಟೆ ಹಾಕಿಕೊಂಡು ಬಂದ ಹಾಗೆಯೇ ಕಾಣಿಸುತ್ತದೆ ಎಂದಿದ್ದಾರೆ.

•  ಬಟ್ಟೆಯಂತೆಯೇ ನಿಮ್ಮ ಮೆದುಳೂ ಫ್ರೆಶ್ ಆಗಿರ್ಲಿ : ಬಟ್ಟೆ ಮತ್ತು ಫ್ಯಾಶನ್ ಟ್ರೆಂಡ್ ಕುರಿತು ಮಾತನಾಡಿದ ಗುರೂಜಿ ನೀವು ಹೇಗೆ ಹೊಸ ಹೊಸ ಬಟ್ಟೆಯನ್ನು ಹಾಕಿಕೊಳ್ಳುತ್ತೀರೋ ಹಾಗೆ ನಿಮ್ಮ ಮೆದುಳನ್ನು ಕೂಡ ಹೊಸದಾಗಿ ಫ್ರೆಶ್ ಆಗಿ ಇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.  ಏಕೆಂದರೆ ಅನೇಕರು ದಿನೇ ದಿನೇ ಹೊಸ ಬಟ್ಟೆಯನ್ನೇನೋ ಹಾಕುತ್ತಾರೆ. ಆದರೆ ಅವರ ವಿಚಾರ ಮತ್ತು ವ್ಯಕ್ತಿತ್ವದಲ್ಲಿ ಹೊಸತನ ಇರೋದಿಲ್ಲ. ಅವರ ಬಟ್ಟೆ ಹಾಗೂ ಅವರ ವಿಚಾರ ಒಂದಕ್ಕೊಂದು ಮ್ಯಾಚ್ ಆಗೊಲ್ಲ ಎಂದು ಗುರೂಜಿ ಅಂತರಂಗದ ಸೌಂದರ್ಯದ ಮಹತ್ವವನ್ನು ತಿಳಿಸಿದ್ದಾರೆ.

• ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸದೇ ನಮ್ಮ ಸಂಸ್ಕೃತಿಯನ್ನು ಗೌರವಿಸಿ : ಗುರೂಜಿಯವರು ನಮಗೆ ನಮ್ಮ ಸಂಸ್ಕೃತಿಯ ಮೇಲೆ ಹೆಮ್ಮೆಯಿರಬೇಕು ಹಾಗೂ ಅದನ್ನು ನಾವು ಎಲ್ಲರಿಗೂ ತೋರಿಸಬೇಕು. ಅದರ ಬದಲಾಗಿ ಇಂದು ನಾವು ಬೇರೆ ದೇಶ ಮತ್ತು ಅವರ ಸಂಸ್ಕೃತಿಯನ್ನು ನಕಲು ಮಾಡುತ್ತಿದ್ದೇವೆ. ಭಾರತದಲ್ಲಿ ಅನೇಕ ಬಣ್ಣದ ಬಟ್ಟೆಗಳನ್ನು ಕಾಣಬಹುದು. ಇಲ್ಲಿನ ವಸ್ತ್ರೋದ್ಯಮ ಜಗತ್ತಿನ ಉನ್ನತ ಕೈಗಾರಿಕೆಯಲ್ಲಿ ಒಂದಾಗಿದೆ. ಇದರ ಬಗ್ಗೆಯೂ ನಾವು ಗೌರವ ತೋರಬೇಕು ಎಂದು ಸಲಹೆ ನೀಡಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by Ami Patel (@stylebyami)

click me!