Tattoo ಕಾರಣಕ್ಕೆ ಟಾಯ್ಲೆಟ್ ತೊಳೆಯೋ ಕೆಲಸವೂ ಸಿಗ್ತಿಲ್ಲ, ಆದ್ರೂ ಹುಚ್ಚು ಬಿಟ್ಟಿಲ್ಲ

By Suvarna News  |  First Published Jul 8, 2023, 5:56 PM IST

ಟ್ಯಾಟೂ ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಕೆಲವರು ದೇಹದ ತುಂಬೆಲ್ಲ ಟ್ಯಾಟೂ ಹಾಕಿಸಿಕೊಳ್ತಾರೆ. ಮತ್ತೆ ಕೆಲವರು ಅಲ್ಲೊಂದು ಇಲ್ಲೊಂದು ಹಜ್ಜೆ ಹಾಕಿಸಿಕೊಂಡು ಮಿಂಚುತ್ತಾರೆ. ಈ ಮಹಿಳೆ ಮುಖದ ತುಂಬಾ ಟ್ಯಾಟೂ ಹಾಕಿಕೊಂಡು ಈಗ ಕೆಲಸವಿಲ್ಲ ಎನ್ನುತ್ತಿದ್ದಾಳೆ. 
 


ಟ್ಯಾಟೂ ಯುವ ಜನರನ್ನು ಆಕರ್ಷಿಸುತ್ತಿದೆ. ಹಚ್ಚೆ ಫ್ಯಾಷನ್ ಆಗಿ ಮಾರ್ಪಟ್ಟಿದೆ. ಜನರು ದೇಹದ ನಾನಾ ಭಾಗಗಳಿಗೆ ಹಚ್ಚೆ ಹಾಕಿಸಿಕೊಳ್ತಾರೆ. ಟ್ಯಾಟೂ ಇಲ್ಲದ ವ್ಯಕ್ತಿಗೆ ಫ್ಯಾಷನ್ ಸೆನ್ಸ್ ಇಲ್ಲ ಎನ್ನುವವರು ನಮ್ಮಲ್ಲಿದ್ದಾರೆ. ದೇಹದ ಒಂದು ಭಾಗದಲ್ಲಾದ್ರೂ ಸಣ್ಣ ಟ್ಯಾಟೂ ಇರ್ಲೇಬೇಕು ಎನ್ನುವವರಿದ್ದಾರೆ. ದೇಹದ ಒಂದೋ ಎರಡೋ ಜಾಗಕ್ಕೆ ಟ್ಯಾಟೂ ಹಾಕಿಸಿಕೊಳ್ಳೋದನ್ನು ನಾವು ನೋಡ್ತೇವೆ. ನೀವೂ ಈಗಾಗ್ಲೇ ಹಚ್ಚೆ ಹಾಕಿಸಿಕೊಂಡಿರಬಹುದು. ಆದ್ರೆ ಬ್ರಿಟೀಷ್ ಮಹಿಳೆಯೊಬ್ಬಳು ಒಂದಲ್ಲ ಎರಡಲ್ಲ ಹಲವು ಟ್ಯಾಟೂಗಳನ್ನು ಮೈಮೇಲೆ ಹಾಕಿಸಿಕೊಂಡಿದ್ದಾಳೆ. ಆದ್ರೆ ಆಕೆ ಮೈ ತುಂಬ ಹಾಕಿಸಿಕೊಂಡ ಟ್ಯಾಟೂ ಆಕೆಯನ್ನು ಕಷ್ಟಕ್ಕೆ ನೂಕಿದೆ. ಟ್ಯಾಟೂ ಹಾಕಿಸಿಕೊಂಡ ಕಾರಣ ಆಕೆಗೆ ಎಲ್ಲೂ ಕೆಲಸ ಸಿಗುತ್ತಿಲ್ಲ. ಟಾಯ್ಲೆಟ್ ಕ್ಲೀನ್ ಮಾಡ್ತೇನೆ, ಕೆಲಸ ಕೊಡಿ ಅಂದ್ರೂ ಜನರು ಓಕೆ ಎನ್ನುತ್ತಿಲ್ಲ. ಆಕೆ ಸಂಪೂರ್ಣ ಕಥೆ ಏನು ಅನ್ನೋದನ್ನು ನಾವು ಹೇಳ್ತೇವೆ.

ಈಕೆ ಮೈಮೇಲಿದೆ 800 ಟ್ಯಾಟೂ (Tattoo) : ಮೈತುಂಬ ಟ್ಯಾಟೂ ಹಾಕಿಸಿಕೊಂಡ ಮಹಿಳೆ ಇರೋದು ಯುನೈಟೆಡ್ ಕಿಂಗ್‌ಡಂ (United Kingdom) ನ ವೇಲ್ಸ್ ನಲ್ಲಿ. ಆಕೆಗೆ 46 ವರ್ಷ ವಯಸ್ಸು. ಹೆಸರು ಮೆಲಿಸ್ಸಾ ಸ್ಲೋನ್ . ಮೆಲಿಸ್ಸಾ ಸ್ಲೋನ್ ತನ್ನ ದೇಹದ ಮೇಲೆ ಒಂದೋ ಎರಡೋ ಹಚ್ಚೆ ಹಾಕಿಸಿಕೊಂಡಿಲ್ಲ. ಬರೋಬ್ಬರಿ 800ಕ್ಕೂ ಹೆಚ್ಚು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾಳೆ. ಒಂದು ಟ್ಯಾಟೂ ಹಾಕಿಕೊಂಡಾಗ ನೋವು ತಡೆಯೋಕೆ ಆಗಲ್ಲ. ಈಕೆ 800 ಟ್ಯಾಟೂ ಹೇಗೆ ಹಾಕಿಸಿಕೊಂಡಿದ್ದಾಳೋ ಗೊತ್ತಿಲ್ಲ. 

Tap to resize

Latest Videos

ಶಾರ್ಟ್ಸ್ ಇಲ್ಲದ ಫೋಟೋದಲ್ಲಿ ರಮ್ಯಾ ಹಾಟ್, ತಮ್ಮೆದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆಂದ ಫ್ಯಾನ್ಸ್

ಮುಖ (Face) ದ ಮೇಲೆಲ್ಲ ಇದೆ ಹಚ್ಚೆ : ಮೆಲಿಸ್ಸಾ ಬರೀ ಮೈ–ಕೈ ಮೇಲೆ ಮಾತ್ರವಲ್ಲ ತನ್ನ ಮುಖದ ಮೇಲೂ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಮೆಲಿಸ್ಸಾ ಸ್ಲೋನ್ ಮೊದಲು ಟಾಯ್ಲೆಟ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಹಚ್ಚೆ ಹಾಕಿಸಿಕೊಂಡ ನಂತರ ಈ ಕೆಲಸದಿಂದಲೂ ಆಕೆಯನ್ನು ತೆಗೆದು ಹಾಕಲಾಗಿದೆ.

ಹಚ್ಚೆ ಜರ್ನಿ ಶುರುವಾಗಿದ್ದು ಎಲ್ಲಿಂದ? : ಮೆಲಿಸ್ಸಾ ಸ್ಲೋನ್ ತನ್ನ 20 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಹಚ್ಚೆ ಹಾಕಿಸಿಕೊಳ್ಳಲು ಶುರು ಮಾಡಿದ್ಲು. ನಂತರ ನಿಧಾನವಾಗಿ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳೋದನ್ನು ಮುಂದುವರೆಸಿದಳು. ಒಂದಾದ್ಮೇಲೆ ಒಂದರಂತೆ ಹಚ್ಚೆ ಮೈಮೇಲೆ ಬರ್ತಾ ಹೋಯ್ತು. ಎರಡು ಮಕ್ಕಳ ತಾಯಿಯಾಗಿರುವ ಮೆಲಿಸ್ಸಾ ಮೈ ಮೇಲೆಲ್ಲ ಈಗ ಹಚ್ಚೆಯಿದೆ. 

ಅಮೇರಿಕಾದಲ್ಲಿ ಕನ್ನಡಿಗರ ಕಲರವ: ಕಾರ್ನೆಗೀ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನ

ಯಾವುದೇ ಕೆಲಸ ಸಿಗ್ತಿಲ್ಲ : ಮುಖ, ಮೈ ಎಲ್ಲ ಕಡೆ ಹಚ್ಚೆ ಇರುವ ಕಾರಣ ಕೆಲಸ ಸಿಗ್ತಿಲ್ಲ. ಇನ್ನು ಮುಂದೆ ಜೀವನ ಪರ್ಯಂತ ಕೆಲಸ ಸಿಗುವುದಿಲ್ಲ ಎಂದು ಮೆಲಿಸ್ಸಾ ಬೇಸರ ವ್ಯಕ್ತಪಡಿಸಿದ್ದಾಳೆ. ಇಷ್ಟು ಟ್ಯಾಟೂ ಹಾಕಿಸಿಕೊಂಡ ನಂತರವೂ ಮೆಲಿಸ್ಸಾಗೆ ಒಂದೇ ಕಡೆ ಕೆಲಸ ಸಿಕ್ಕಿತು. ಆದರೆ ಹೆಚ್ಚು ದಿನ ಅಲ್ಲಿ ಇಟ್ಟುಕೊಳ್ಳಲಿಲ್ಲವಂತೆ. ಕೆಲಸದ ಅವಶ್ಯಕತೆ ನನಗಿದೆ. ಹಾಗಾಗಿ ಯಾವುದೇ ಕೆಲಸ ಬಂದ್ರೂ ನಾನು ಮಾಡ್ತೇನೆ ಎಂದು ಮೆಲಿಸ್ಸಾ ಹೇಳಿದ್ದಾಳೆ. 

ಈಗ್ಲೂ ಬುದ್ದಿ ಕಲಿಯದ ಮೆಲಿಸ್ಸಾ : ಹಚ್ಚೆ ಹಾಕಿಸಿಕೊಂಡ ಕಾರಣ ಕೆಲಸ ಸಿಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮೆಲಿಸ್ಸಾ ಈಗ್ಲೂ ಬುದ್ಧಿ ಕಲಿತಿಲ್ಲ. ಪ್ರತಿ ವಾರ ಮೂರು ಹೊಸ ಟ್ಯಾಟೂಗಳನ್ನು ತನ್ನ ದೇಹದ ಮೇಲೆ ಹಾಕಿಸಿಕೊಳ್ಳುತ್ತಿದ್ದೇನೆ ಎಂದು ಮೆಲಿಸ್ಸಾ ಹೇಳಿದ್ದಾಳೆ. ಅದರಲ್ಲೂ ಮುಖದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ತುಂಬಾ ಇಷ್ಟ ಎನ್ನುವ ಅವಳು ಮುಖದಲ್ಲಿ ಖಾಲಿ ಜಾಗವಿಲ್ಲ ಎಂದಿದ್ದಾಳೆ. ದೇಹದ ಉಳಿದ ಖಾಲಿ ಭಾಗ ತುಂಬಿಸುವ ಕಾರ್ಯದಲ್ಲಿ ಮೆಲಿಸ್ಸಾ ಬ್ಯುಸಿಯಿದ್ದಾಳೆ. 
 

click me!