'ದಿ ವಾರಿಯರ್' ಆದ ನಾಗತಿಹಳ್ಳಿ ಶಾಲೆ ವಿದ್ಯಾರ್ಥಿಗಳು!

By Web DeskFirst Published May 17, 2019, 3:15 PM IST
Highlights

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಟೆಂಟ್ ಸಿನಿಮಾ’ ಸಂಸ್ಥೆ ನಟನೆ, ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆ ಬರೆಯುವುದು, ಛಾಯಾಗ್ರಾಹಣ, ಸಂಗೀತ ಹೀಗೆ ಒಂದು ಸಿನಿಮಾದ ಎಲ್ಲಾ ವಿಭಾಗಗಳ ಬಗ್ಗೆಯೂ ಪಾಠ ಮತ್ತು ಪ್ರಾಯೋಗಿಕ ತರಬೇತಿ ನೀಡುವ ಮೂಲಕ ಚಿತ್ರರಂಗಕ್ಕೆ ಪ್ರತಿಭಾವಂತರನ್ನು ನೀಡುತ್ತಿರುವ ಸಂಸ್ಥೆ. ಈ ಟೆಂಟ್ ಸಿನಿಮಾ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಹಾಗೂ ಆದರ್ಶ್ ಎಚ್ ಈಶ್ವರಪ್ಪ ಅವರ ನಿರ್ದೇಶನದಲ್ಲಿ ಒಂದು ಕಿರುಚಿತ್ರ ಮೂಡಿಬಂದಿದೆ. ಅದರ ಹೆಸರು‘ದಿ ವಾರಿಯರ್’.

ಇತ್ತೀಚೆಗೆ ಇದರ ಪ್ರದರ್ಶನ ನಡೆಯಿತು. ಪ್ರದರ್ಶನದ ಜತೆ ಟೆಂಟ್ ಸಿನಿಮಾ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ತರಬೇತಿ ಪಡೆದುಕೊಂಡ ಸರ್ಟಿಫಿಕೇಟ್ ನೀಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ನಟ ವಸಿಷ್ಠ, ಪತ್ರಕರ್ತ ಹಾಗೂ ಆಲ್ಮಮೀಡಿಯಾ ಸಂಸ್ಥೆಯ ಸಾರಥಿ ಗೌರೀಶ್ ಅಕ್ಕಿ ಮುಂತಾದವರು.

ರುಸ್ತುಂ ರಗಡ್ ಕಾಪ್ ಶಿವರಾಜ್‌ಕುಮಾರ್ ಸಂದರ್ಶನ

ಧಾರವಾಡ ಕಟ್ಟಡ ದುರಂತೆ ಕತೆ ಹೊಂದಿರುವ ಚಿತ್ರ: ಇತ್ತೀಚೆಗೆ ಧಾರವಾಡದಲ್ಲಿ ಕಟ್ಟಡ ಕುಸಿದು ಮೃತ ಪಟ್ಟವರ ದುರಂತದ ಕತೆಯ ಎಳೆಯನ್ನು ಒಳಗೊಂಡಿದೆ. ಹದಿನೈದು ನಿಮಿಷದ ‘ದಿ ವಾರಿಯರ್ಸ್‌’ ಕಿರುಚಿತ್ರದ ಪ್ರದರ್ಶನದ ನಂತರ ಮಾತುಕತೆ. ಸಿದ್ಧಾಂತ ಹೇಳಿಕೊಡುವುದಲ್ಲದೆ, ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಸಂಸ್ಥೆಯಿಂದ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಅವರುಗಳು ಪರಿಪೂರ್ಣರಾಗುತ್ತಾರೆ. ಆ ನಿಟ್ಟಿನಲ್ಲಿ ನಮ್ಮ ಟೆಂಟ್ಸಿನಿಮಾ ಕೆಲಸ ಮಾಡುತ್ತಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿಕೊಂಡರು. ಸಂಗೀತ ಸುಚಿತ್. ಎಸ್.ಎಚ್ .ರಾಜಗೋಪಾಲ್ ಸಂಗೀತ, ಗೋಕುಲ್ ಪಿಳ್ಳೈ ಕ್ಯಾಮೆರಾ ಈ ಕಿರು ಚಿತ್ರಕ್ಕಿದೆ.

ಆ ಪಾರ್ವತಮ್ಮ ಬೇರೆ ಈ ಪಾರ್ವತಮ್ಮನೇ ಬೇರೆ!

ನಾಗತಿಹಳ್ಳಿ ಅವರು ಚಿತ್ರರಂಗಕ್ಕೆ ಪ್ರತಿಭಾವಂತರನ್ನು ನೀಡುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲೂ ತರಬೇತಿ ಮಾಡುತ್ತಿದ್ದಾರೆ. ವಿದ್ಯಾವಂತರು ಚಿತ್ರರಂಗಕ್ಕೆ ಬಂದರೆ ಒಳ್ಳೆಯ ಕತೆಗಳು ಹುಟ್ಟಿಕೊಳ್ಳುತ್ತವೆ. ಒಳ್ಳೆಯ ಸಿನಿಮಾಗಳು ಬರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದು ಚಿನ್ನೇಗೌಡ ಅವರು. ಈ ಕಿರು ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

click me!