ಸ್ವಿಮ್ ಸೂಟ್ ನಲ್ಲಿ ಲಾರಾ ದತ್ತ ಮಾಡಿದ್ದ ಮುರಿಯದ ದಾಖಲೆ

First Published 11, Sep 2018, 3:40 PM IST
Highlights

ಭಾರತ ಮೊದಲಿನಿಂದಲೂ ಸೌಂದರ್ಯಕ್ಕೆ ಹೆಸರುವಾಸಿ. ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿಯೂ ನಾವು ಹಿಂದೆ ಬಿಒದ್ದಿಲ್ಲ. ಮಾಜಿ ಮಿಸ್ ಯುನಿವರ್ಸ್ ಲಾರಾ ದತ್ತ ಮಾಡಿದ ದಾಖಲೆಯನ್ನು ಇನ್ನುವರೆಗೆ ಯಾರಿಂದಲೂ ಮುರಿಯಲೂ ಸಾಧ್ಯವಾಗಿಲ್ಲ. ಹಾಗಾದರೆ ಈ ದಾಖಲೆ ಏನು?

ಸರಿಯಾಗಿ 18 ವರ್ಷಗಳ ಹಿಂದೆ ಮಿಸ್ ಯುನಿವರ್ಸ್ ಆಗಿ ಕಿರೀಟ ಧಾರಣೆ ಮಾಡಿದ್ದ ಲಾರಾ ದತ್ತ ಮಾಡಿದ್ದ ದಾಖಲೆಯನ್ನು ಇನ್ನುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

18 ವರ್ಷಗಳ ಹಿಂದೆ ಲಾರಾ ದತ್ತ, ಪ್ರಿಯಾಂಕಾ ಛೋಪ್ರಾ ಮತ್ತು ದಿಯಾ ಮಿರ್ಜಾ ಕ್ರಮವಾಗಿ ಮಿಸ್ ಯುನಿವರ್ಸ್, ಮಿಸ್ ವರ್ಲ್ಡ್, ಮಿಸ್ ಏಷ್ಯಾ ಫೆಸಿಫಿಕ್ ಮೂರು ವಿಭಾಗಗಳಲ್ಲಿ ದೇಶದ ಸೌಂದರ್ಯದ ಪ್ರತಿಭೆಯನ್ನು ಬೆಳಗಿದ್ದರು.

ಮಿಸ್ ಯುನಿವರ್ಸ್ ನಲ್ಲಿ ಲಾರಾ ದತ್ತ ಮಾಡಿದ ದಾಖಲೆಯನ್ದನು ನೋಡಲೇಬೇಕು. ಎಲ್ಲ ಜಡ್ಜ್ ಗಳ ಮೆಚ್ಚುಗೆಗೆ ಪಾತ್ರವಾಗಿದ್ದ ಲಾರಾ ಎಲ್ಲ ವಿಭಾಗಗಳಲ್ಲಿಯೂ ೯.೯ ಅಂಕ ಪಡೆದುಕೊಂಡಿದ್ದರು. ಈ ದಾಖಲೆ ಇನ್ನು ಹಾಗೆ ಉಳಿದುಕೊಂಡಿದೆ. ಸ್ವಿಮ್ ಸೂಟ್ ಮತ್ತು ಕೊನೆಯ ಸಂದರ್ಶನ ವಿಭಾಗದಲ್ಲಿಯೂ ಲಾರಾ ವೈಯಕ್ತಿಕ ಸ್ಕೋರ್ ಇನ್ನುವರೆಗೆ ಮುರಿಯಲಾಗಿಲ್ಲ.

 

 

Last Updated 19, Sep 2018, 9:22 AM IST