ಬಾಲಿವುಡ್ ಚಿರಯೌವ್ವನೆ ಮೇಲಿನ ಅಭಿಮಾನದಿಂದ ಪತ್ನಿಗೂ ರೇಖಾ ಅಂತಾರಂತೆ ಚಿರು!

By Web DeskFirst Published Nov 20, 2019, 1:20 PM IST
Highlights

ಹಿಂದಿ ಚಿತ್ರರಂಗದಲ್ಲಿ ವಯಸ್ಸೇ ಆಗದ ನಟಿ ಎಂದರೆ ರೇಖಾ. ಚಿರಯೌವ್ವನೆ ಎಂದೇ ಹೆಸರಾದವರು. ಎಂತಹ ಪಾತ್ರವೇ ಇರಲಿ ತಮ್ಮನ್ನು ತಾವು ಅರ್ಪಿಸಿಕೊಂಡಂತೆ ಅಭಿನಯಿಸುವ ಅಪೂರ್ವ ಕಲಾವಿದೆ. ಇವರನ್ನು ನೋಡಿದ್ರೆ ಎಂಥವರು ಫಿದಾ ಆಗುವುದು ಗ್ಯಾರಂಟಿ! 

ಹಿಂದಿ ಚಿತ್ರರಂಗದ ಚಿರಯೌವ್ವನೆ ರೇಖಾ ಅವರ ದೊಡ್ಡ ಫ್ಯಾನ್ ಅಂತೆ ಮೆಗಾಸ್ಟಾರ್ ಚಿರಂಜೀವಿ! ರೇಖಾ ಮೇಲಿನ ಅಭಿಮಾನಕ್ಕಾಗಿ ಚಿರು ಮಾಡಿದ್ದೇನು ಗೊತ್ತಾ? ಇಂಟರೆಸ್ಟಿಂಗ್ ಆಗಿ ನೋಡಿ. 

ಇತ್ತೀಚಿಗೆ ಹೈದರಾಬಾದ್‌ನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ನಾಗ ಚೈತನ್ಯ, ನಾಗಾರ್ಜುನ, ಅಮಲಾ, ಶ್ರೀದೇವಿ, ಬೋನಿ ಕಪೂರ್, ರೇಖಾ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಭಾಗಿಯಾಗಿದ್ದರು.  ಈ ಸಂದರ್ಭದಲ್ಲಿ ಚಿರಂಜೀವಿ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. 

 

' ನಾನು ರೇಖಾ ಅವರ ದೊಡ್ಡ ಅಭಿಮಾನಿ. ಅವರೊಬ್ಬ ಅಪ್ರತಿಮ ಸುಂದರಿ. ನನ್ನ ಪತ್ನಿಯ ಹೆಸರು ಸುರೇಖಾ. ರೇಖಾ ಮೇಲಿನ ಅಭಿಮಾನದಿಂದ ನಾನವರನ್ನು 'ರೇಖಾ' ಎಂದು ಕರೆಯುತ್ತೇನೆ. ಈ ವಿಚಾರವನ್ನು ನನ್ನ ಪತ್ನಿಗೂ ಹೇಳಿರಲಿಲ್ಲ' ಎಂದು ಹೇಳಿದರು. 

 

click me!