ಮುಗಿಯದ ನಟರ ‘ಆಟ’: ಕುಡಿದು ಆ್ಯಕ್ಸಿಡೆಂಟ್ ಮಾಡ್ಕೊಂಡ ಮತ್ತೋರ್ವ ನಟ!

By Web DeskFirst Published Sep 25, 2018, 4:37 PM IST
Highlights

ಕುಡಿದು ಕಾರು ಚಲಾಯಿಸಿದ ಮತ್ತೋರ್ವ ನಟ! ಆಟೋಗೆ ಗುದ್ದಿ ರಂಪಾಟ ಮಾಡಿದ ಹಿರಿಯ ನಟ! ಹೊಸ ವಿವಾದದಲ್ಲಿ ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್! ಆಟೋ ಪ್ರಯಾಣಿಕರೊಂದಿಗೆ ವಾಗ್ವಾದ ಮಾಡಿದ ತಾಹಿಲ್! ದಲೀಪ್ ತಾಹಿಲ್ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು 
 

ಮುಂಬೈ(ಸೆ.25): ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ ಆರೋಪದ ಮೇಲೆ, ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಲ್ಲಿನ ಖಾರ್ ಪ್ರದೇಶಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ದಲೀಪ್, ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಆಟೋದಲ್ಲಿದ್ದ ಜೆನಿತಾ ಗಾಂಧಿ ಹಾಗೂ ಗೌರವ್ ಎಂಬುವವರು ದಲೀಪ್ ಕಾರನ್ನು ತಡೆದು ಪ್ರಶ್ನಿಸಿದ್ದಾರೆ.

ಕುಡಿದ ಅಮಲಿನಲ್ಲಿದ್ದ ತಾಹಿಲ್, ಇಬ್ಬರ ಜೊತೆ ವಾಗ್ವಾದಕ್ಕಿಳಿದು ಗೌರವ್ ಎಂಬುವವರನ್ನು ತಳ್ಳಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿದ ಗೌರವ್, ಕುಡಿದ ಮತ್ತಿನಲ್ಲಿ ತಮ್ಮ ಮೇಲೆ ತಾಹಿಲ್ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ತಾಹಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ನಟ ತಾಹಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!