ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ಗೆ ಇದೇನಾಗಿದೆ? ವೈರಲ್​ ವಿಡಿಯೋ ನೋಡಿ ದಂಗಾದ ಅಭಿಮಾನಿಗಳು

By Suvarna News  |  First Published Apr 26, 2024, 3:55 PM IST

ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ ಅವರ ವೈರಲ್​ ವಿಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಬಾಲಿವುಡ್​ನಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿವೆಯೇ ಎಂದು ಪ್ರಶ್ನಿಸುತ್ತಿದ್ದಾರೆ. 
 


ತಾವೂ ಚಿತ್ರ ನಟ-ನಟಿಯರಾಗಬೇಕು, ಹೋದಲ್ಲಿ- ಬಂದಲ್ಲಿ ಅದೆಷ್ಟು ರೆಸ್​ಪೆಕ್ಟ್​ ಹೀಗೆ ಏನೇನೋ ಕನಸು ಕಾಣುವ ಹಲವಾರು ಮಂದಿ ಇರುತ್ತಾರೆ. ಆದರೆ ನಿಜವಾಗಿಯೂ ಹೇಳಬೇಕೆಂದರೆ ಬಹುತೇಕ ಚಿತ್ರ ತಾರೆಯರ ಬಣ್ಣದ ಬದುಕಿನಷ್ಟೇ ಸುಂದರ  ಅವರ ವೈಯಕ್ತಿಕ ಬದುಕು ಆಗಿರುವುದಿಲ್ಲ. ಇನ್ನು ಬಹುತೇಕ ಎಲ್ಲ ನಟ-ನಟಿಯರು ಅದರಲ್ಲಿಯೂ ಹೆಚ್ಚಾಗಿ ನಟಿಯರು ತಮ್ಮ ಇಮೇಜನ್ನು ಉಳಿಸಿಕೊಳ್ಳಲು ಪರದಾಡುವಷ್ಟು ಬಹುಶಃ ಬೇರ್ಯಾವ ರಂಗದ ಮಹಿಳೆಯರೂ ಪರದಾಡುವುದಿಲ್ಲ ಎಂದೇ ಹೇಳಬಹುದು. ನಾಯಕ ನಟರಿಗೆ ವಯಸ್ಸು ಎಷ್ಟೇ ಆದರೂ ಅವರು ನಾಯಕನಾಗಿಯೇ ಅವಕಾಶ ಸಿಗುತ್ತದೆ, ಅದರಲ್ಲಿಯೂ ಸ್ಟಾರ್​ ನಟರಿಗೆ ವಯಸ್ಸು 60 ಮೀರಿದರೂ ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಡುವ 20ರ ಆಸುಪಾಸಿನ ನಟಿಯರ ಜೊತೆ ಬೇಕಾದರೂ ರೊಮ್ಯಾನ್ಸ್​ ಮಾಡುತ್ತಾರೆ. ಆದರೆ ನಟಿಯರದ್ದು ಹಾಗಲ್ಲ. ವಯಸ್ಸು 30 ದಾಟುತ್ತಿದ್ದಂತೆಯೇ ಅವಕಾಶಗಳು ಕುಗ್ಗಲು ಶುರುವಾಗುತ್ತದೆ. ಇನ್ನು 40 ಮೀರಿದರೆ ಮುಗಿದೇ ಹೋಯ್ತು. 

ಇದೇ ಕಾರಣಕ್ಕೆ ತಮ್ಮನ್ನು ಸುಂದರಿಯನ್ನಾಗಿ, ಯುವತಿಯನ್ನಾಗಿ ಇರಿಸಿಕೊಳ್ಳಲು ನಟಿಯರು ಪಡುವ ಕಷ್ಟ ಅಷ್ಟಿಷ್ಟಲ್ಲ. ಜೊತೆಗೆ ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ನಟಿಯರು ಎನ್ನಿಸಿಕೊಳ್ಳಲು ಸಾಧ್ಯ ಎನ್ನುವ ಮಾತೂ ಇರುವುದರಿಂದ ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಎಲ್ಲದ್ದಕ್ಕೂ ಅಡ್ಜಸ್ಟ್​ ಮಾಡಿಕೊಳ್ಳುವ ಸ್ಥಿತಿ ನಟಿಯರದ್ದು. ಇದೀಗ ವೈರಲ್​ ಆಗಿರೋ ವಿಡಿಯೋದಲ್ಲಿ ಬಾಲಿವುಡ್​​ ನಟಿ ಭೂಮಿ ಪೆಡ್ನೇಕರ್​ ಅವರನ್ನು ನೋಡಿ ಈ ಮಾತು ಮತ್ತೆ ಚರ್ಚೆಗೆ ಬರುತ್ತಿದೆ. ಬಾಲಿವುಡ್‌ನಲ್ಲಿ  ನಟನೆಯ  ಮೂಲಕ ಮಿಂಚಿದ್ದ ನಟಿ ಭೂಮಿ ಪೆಡ್ನೇಕರ್ (Bhumi Pednekar) ‘ದಮ್ ಲಗಾ ಕೆ ಹೈಶಾ’, ಟಾಯ್ಲೆಟ್ ಏಕ್ ಪ್ರೇಮ್ ಕಥಾ ಮತ್ತು ಶುಭ್ ಮಂಗಲ್ ಸಾವಧಾನ್ ಚಿತ್ರಗಳ ಮೂಲಕ ಅವರು ತಮ್ಮ ನಟನೆಯ ಮೂಲಕ ವಿಶೇಷ ಹೆಸರು ಹಾಗೂ ಹೆಗ್ಗಳಿಕೆ ಗಳಿಸಿದ್ದಾರೆ. ಕಳೆದ ವರ್ಷ  ನಟಿ ವೇಟ್ ಲಾಸ್  ಮೂಲಕ ಸುದ್ದಿಯಲ್ಲಿದ್ದರು.  

Tap to resize

Latest Videos

ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದಾಕೆಗೆ ಕಠಿಣ ಶಿಕ್ಷೆ! ಏನು ಹೇಳಹೊರಟಿದೆ ಸೀರಿಯಲ್​? ರೊಚ್ಚಿಗೆದ್ದ ಫ್ಯಾನ್ಸ್​

 ಹೆಚ್ಚಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬೆವರು ಸುರಿಸಿ ಕೇವಲ 4 ತಿಂಗಳಲ್ಲಿ 32 ಕೆಜಿ ತೂಕ ಇಳಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ತಾವು ಇದಕ್ಕಾಗಿ ಸಮತೋಲಿತ ಆಹಾರ ಸೇವಿಸುತ್ತಿರುವುದಾಗಿ,   ಫಾಸ್ಟ್ ಫುಡ್ ತ್ಯಜಿಸಿರುವುದಾಗಿ ಇತ್ಯಾದಿ ಡಯೆಟ್​ ಬಗ್ಗೆ ಹೇಳಿಕೊಂಡಿದ್ದರು. ಆದರೆ ದೇಹ ಸಣ್ಣಗಾಗಿಸುವ ಭರದಲ್ಲಿ, ಭೂಮಿ ಅವರು ತಮ್ಮ ಚಾರ್ಮ್​ ಅನ್ನು ಕಳೆದುಕೊಂಡಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ಮಾತು. ಅಷ್ಟೇ ಅಲ್ಲದೇ ಇಂದು ನಟಿಯರು ತಮ್ಮತನವನ್ನು ಉಳಿಸಿಕೊಳ್ಳಲು, ಬಾಲಿವುಡ್​ ಪ್ರಪಂಚದಲ್ಲಿ ಬೇಡಿಕೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡುತ್ತಾರೆ. ಇದೇ ಕಾರಣಕ್ಕೆ ಎಲ್ಲದಕ್ಕೂ ಅಸ್ತು ಅಸ್ತು ಎನ್ನುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳುವ ಜೊತೆ, ದೇಹ ಪ್ರದರ್ಶನಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಿದ್ದಾರೆ.

ಇದೀಗ ವೈರಲ್​ ಆಗಿರೋ ವಿಡಿಯೋದಲ್ಲಿ ಭೂಮಿ ಅವರನ್ನು ನೋಡಿ ಫ್ಯಾನ್ಸ್​ ದಂದಾಗಿದ್ದಾರೆ. ಈಕೆ ಫ್ಯಾಷನ್​ ಈವೆಂಟ್​ ಒಂದರಲ್ಲಿ ಭಾಗವಹಿಸಿರುವ ಪರಿ, ಆಕೆ ತೊಟ್ಟ ಬಟ್ಟೆ ಹಾಗೂ ಕಳಾಹೀನ ಮುಖವನ್ನು ನೋಡಿ ನಟಿಯರಿಗೆ ಇವೆಲ್ಲಾ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಹಲವರು ಈಕೆ ನಿಜಕ್ಕೂ ಭೂಮಿ ಹೌದಾ ಎಂದು ಪ್ರಶ್ನಿಸುತ್ತಿದ್ದಾರೆ. 

ಐಶ್ವರ್ಯ, ಅಮಿತಾಭ್​ ನಡುವೆ ಕೊಹ್ಲಿಯನ್ನೂ ಎಳೆತಂದ ರಾಹುಲ್​ ಗಾಂಧಿ: ಅಭಿಮಾನಿಗಳಿಂದ ಭಾರಿ ಆಕ್ರೋಶ

 

Is this Bhumi Pednekar? Is there so much pressure and competition in bollywood to become woke attention seeker for PR?pic.twitter.com/MPlgOW1EJj

— Keh Ke Peheno (@coolfunnytshirt)
click me!