ಒನ್ ನೇಷನ್ ಒನ್ ರೇಷನ್ ರೀತಿಯಲ್ಲಿ ಮತ್ತೊಂದೇ ಯೋಜನೆ! ಯಾವುದು ಅದು?

By Suvarna NewsFirst Published Nov 21, 2022, 1:36 PM IST
Highlights

*ಒನ್ ನೇಷನ್ ಒನ್ ರೇಷನ್ ಮಾದರಿಯಲ್ಲಿ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ
*ಭಾರತೀಯ ಶೈಕ್ಷಣಿಕ ವಲಯದಲ್ಲಿ ಈ ಯೋಜನೆಯಿಂದ ಸಕಾರಾತ್ಮಕ ಬದಲಾವಣೆ
*ಕೇಂದ್ರ ಸರ್ಕಾರವು ಒನ್ ನೇಷನ್ ಒನ್ ‌ಸಬ್‌ಸ್ಕ್ರಿಪ್ಷನ್ ಯೋಜನೆ ಮಾಡುತ್ತಿದೆ

ಒನ್ ನೇಷನ್ ಒನ್ ರೇಷನ್ (One nation one ration) ಯೋಜನೆ ಮಾದರಿಯಲ್ಲೇ ಮತ್ತೊಂದು ಹೊಸ ಯೋಜನೆ ಜಾರಿಗೆ ಬರಲಿದೆ. ಭಾರತದಲ್ಲಿನ ಸಂಶೋಧನಾ ವಿದ್ವಾಂಸರಿಗೆ ಶಿಕ್ಷಣ ಸಚಿವಾಲಯವು (Ministry of Education) ಅತ್ಯುತ್ತಮ ಸುದ್ದಿಯೊಂದನ್ನು ನೀಡಿದ್ದು,  ಸಂಶೋಧನಾ ಪ್ರಬಂಧಗಳಿಗೆ ಮುಕ್ತ ಪ್ರವೇಶವನ್ನು ಅನುಮತಿಸಲು 'ಒನ್ ನೇಷನ್ ಒನ್ ಸಬ್ ಸ್ಕ್ರಿಪ್ಷನ್ '(One Nation One Subscription- ONOS) ಯೋಜನೆಯನ್ನು ಘೋಷಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ, ಭಾರತದಲ್ಲಿ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ಮತ್ತು ಜರ್ನಲ್ ಪ್ರಕಟಣೆಗೆ ಮುಕ್ತ ಪ್ರವೇಶಕ್ಕಾಗಿ 'ಒಂದು ರಾಷ್ಟ್ರ ಒಂದು ಚಂದಾದಾರಿಕೆ' ಯೋಜನೆಯನ್ನು ಜಾರಿ ಮಾಡಿದೆ.  ಏಪ್ರಿಲ್ 1, 2023 ರಿಂದ ಈ ಯೋಜನೆ ದೇಶಾದ್ಯಂತ ಜಾರಿಗೆ ಬರಲಿದೆ. ಎಲ್ಲಾ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ಈ ಯೋಜನೆಯಿಂದ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ. ಯೋಜನೆ ಮತ್ತು ಕಾರ್ಯನಿರ್ವಹಣಾ ಸಮಿತಿಯ (Planning and Execution Committee-PEC) ಶಿಫಾರಸುಗಳ ಆಧಾರದ ಮೇಲೆ ಕೋರ್ ಕಮಿಟಿಯು ONOS ನ ಮೊದಲ ಹಂತಕ್ಕಾಗಿ 70 ಪ್ರಕಾಶಕರ ಸಂಪನ್ಮೂಲಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿದೆ.

ಗೂಗಲ್ ಡೂಡಲ್ ಸ್ಪರ್ಧೆ ಗೆದ್ದ ಕೋಲ್ಕತ್ತಾದ ಹುಡುಗ!

ONOS ಪ್ರಪಂಚದ ಹೆಚ್ಚಿನ ಪ್ರಮುಖ STEM ಪ್ರಕಾಶಕರು ಮತ್ತು ಡೇಟಾಬೇಸ್ ನಿರ್ಮಾಪಕರೊಂದಿಗೆ ರಾಷ್ಟ್ರೀಯ ಪರವಾನಗಿಗಳಿಗೆ ಸಹಿ ಹಾಕಲು ಉದ್ದೇಶಿಸಿದೆ.  ಈಗಾಗಲೇ ಉನ್ನತ ಶಿಕ್ಷಣದ ವಿವಿಧ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ನೇರವಾಗಿ ಅಥವಾ ಸರ್ಕಾರಿ-ಧನಸಹಾಯದ ಮೂಲಕ ಒಕ್ಕೂಟದ ಚಂದಾದಾರರಾಗುತ್ತಿವೆ ಕೇಂದ್ರ ಸರ್ಕಾರ ಹೇಳಿದೆ. ONOSನಿಂದ ಪ್ರಯೋಜನ ಪಡೆಯುವ ಪ್ರಾಥಮಿಕ ಸಂಸ್ಥೆಗಳೆಂದರೆ ಸರ್ಕಾರಿ ಸಂಸ್ಥೆಗಳು, ಸರ್ಕಾರಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಮಾತ್ರವಲ್ಲದೆ, ONOS ಯೋಜನೆಯು ರಾಷ್ಟ್ರದ ಪ್ರತಿಯೊಬ್ಬರಿಗೂ ಪ್ರಯೋಜನವನ್ನು ನೀಡುತ್ತದೆ.

ಒಂದು ರಾಷ್ಟ್ರ ಒಂದು ಚಂದಾದಾರಿಕೆ' ಯೋಜನೆಯನ್ನು ಸರ್ಕಾರ, ಸರ್ಕಾರಿ ಅನುದಾನಿತ ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR), ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ಸಂಶೋಧನಾ ಪ್ರಯೋಗಾಲಯಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ (CSIR), ಜೈವಿಕ ತಂತ್ರಜ್ಞಾನ ಇಲಾಖೆ (DBT), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಪರಮಾಣು ಶಕ್ತಿ ಇಲಾಖೆ (DAE), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEiTY) , ಭೂ ವಿಜ್ಞಾನಗಳ ಸಚಿವಾಲಯ (MoES) ಮತ್ತು ಇತರ ಸಚಿವಾಲಯ ಅಥವಾ ಇಲಾಖೆಯ ಅನುದಾನಿತ ಸಂಸ್ಥೆಗಳಿಗೆ ಅಳವಡಿಸಲಾಗುತ್ತದೆ.

NEP ಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ: ಸಚಿವ ನಾಗೇಶ್‌

ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಸಿಎಫ್‌ಟಿಐ) ನಿರ್ದೇಶಕರು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಕೆ ಸಂಜಯ್ ಮೂರ್ತಿ, “ಇ-ಸಂಪನ್ಮೂಲಗಳ ಪಟ್ಟಿ ನವೀಕರಣಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ಯೋಜನೆಗೆ ನಿಮ್ಮ ಬೆಂಬಲವನ್ನು ಕೋರಲಾಗಿದೆ. 70 ಪ್ರಕಾಶಕರು ONOS ಚಟುವಟಿಕೆಗಳೊಂದಿಗೆ ಸಿಂಕ್ರೊನೈಸ್ ಆಗಿದ್ದಾರೆ. ಆದ್ದರಿಂದ, 2023 ರ ಕ್ಯಾಲೆಂಡರ್ ವರ್ಷಕ್ಕೆ ಈ 70 ಪ್ರಕಾಶಕರಿಂದ ಇ-ಸಂಪನ್ಮೂಲಗಳ ನವೀಕರಣದ ಬಗ್ಗೆ ನಡೆಯುತ್ತಿರುವ ಮಾತುಕತೆಗಳನ್ನು  ತಡೆಹಿಡಿಯುವಂತೆ ವಿನಂತಿಸಲಾಗಿದೆ. ಈ 70 ಪ್ರಕಾಶಕರೊಂದಿಗಿನ ಮಾತುಕತೆಗಳು ಸೇರಿದಂತೆ ONOS ಚಟುವಟಿಕೆಗಳ ಕುರಿತು ನಿರ್ದಿಷ್ಟ ನವೀಕರಣಗಳ ಬಗ್ಗೆ ಮುಂಬರುವ ಡಿಸೆಂಬರ್ 15 ರೊಳಗೆ ಮಾಹಿತಿ ಒದಗಿಸಲಾಗುತ್ತದೆ" ಎಂದು‌ ಬರೆಯಲಾಗಿದೆ. ಮುಂಬರುವ ಏಪ್ರಿಲ್ ನಿಂದ ಈ ONOS ಯೋಜನೆ ಜಾರಿಯಾಗಲಿದ್ದು,  ಮೊದಲ ಹಂತದಲ್ಲಿ ICAR, ICMR, DST, CSIR, DRDO, ISRO, ಇನ್ನಿತರ ಸಂಶೋಧನಾ ಸಂಸ್ಥೆಗಳು ಮತ್ತು ಲ್ಯಾಬ್‌ಗಳ ಮುಕ್ತ ಪ್ರವೇಶಕ್ಕಾಗಿ 70 ಪ್ರಕಾಶಕರ ಸಂಪನ್ಮೂಲಗಳನ್ನು ಒಳಗೊಂಡಿರುತ್ತದೆ.

click me!