ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂದು ಬೆಳಗ್ಗೆ 11 ಗಂಟೆಗೆ 10 ನೇ ತರಗತಿ ಮತ್ತು 12 ನೇ ತರಗತಿ ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸಿದ್ಧವಾಗಿದೆ.
ನವದೆಹಲಿ (ಮೇ.6): ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂದು ಬೆಳಗ್ಗೆ 11 ಗಂಟೆಗೆ ಭಾರತೀಯ ಮಾಧ್ಯಮಿಕ ಶಿಕ್ಷಣದ ಪ್ರಮಾಣಪತ್ರ (ICSE ಅಥವಾ 10 ನೇ ತರಗತಿ) ಮತ್ತು ಭಾರತೀಯ ಶಾಲಾ ಪ್ರಮಾಣಪತ್ರ (ISC ಅಥವಾ 12 ನೇ ತರಗತಿ) ಅಂತಿಮ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸಿದ್ಧವಾಗಿದೆ. ತಮ್ಮ ಫಲಿತಾಂಶಗಳಿಗಾಗಿ ಕುತೂಹಲದಿಂದ ಕಾಯುತ್ತಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cisce.org ಮತ್ತು results.cisce.org. ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು.
ವಿದ್ಯಾರ್ಥಿಗಳು ಈ ಕೆಳಗಿನ ಮಾಹಿತಿ ಮೂಲಕ ಕೌನ್ಸಿಲ್‌ನ ವೆಬ್‌ಸೈಟ್‌ಗಳಾದ cisce.org ಮತ್ತು results.cisce.org ನಲ್ಲಿ ಪರೀಕ್ಎ ಫಲಿತಾಂಶ ಚೆಕ್ ಮಾಡಲು ಹೀಗೆ ಮಾಡಿ
*ಯುನಿಕ್ ಐಡಿ ನಮೂದಿಸಿ
*ಇಂಡೆಕ್ಸ್ ನಂಬರ್ ನಮೂದಿಸಿ
*ಕ್ಯಾಪ್ಚಾ (ಪರದೆಯ ಮೇಲೆ ತೋರಿಸಿರುವಂತೆ) ನಮೂದಿಸಿ
undefined
NEET ಪರೀಕ್ಷೆ ವೇಳೆ ಅಗತ್ಯ ವಿದ್ಯಾರ್ಥಿಗಳಿಗೆ ಡೈಪರ್ ಧರಿಸಲು, ಬದಲಿಸಲು ಕೋರ್ಟ್ ಅನುಮತಿ!
ಮಂಡಳಿಯ ವೆಬ್‌ಸೈಟ್‌ಗಳ ಜೊತೆಗೆ, ICSE ಮತ್ತು ISC ಯ ಫಲಿತಾಂಶಗಳು ಡಿಜಿಲಾಕರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ ಎಂದು ಕೌನ್ಸಿಲ್ ತಿಳಿಸಿದೆ.
ಕೌನ್ಸಿಲ್‌ನ ವೆಬ್‌ಸೈಟ್, cisce.org ಅಥವಾ results.cisce.org ಗೆ ಹೋಗಿ.
ಅಗತ್ಯವಿರುವಂತೆ ICSE ಅಥವಾ ISC ಫಲಿತಾಂಶ ಲಿಂಕ್ ತೆರೆಯಿರಿ.
ನಿಮ್ಮ ಯುನಿಕ್ ID, ಸೂಚ್ಯಂಕ ಸಂಖ್ಯೆ (ಇಂಡೆಕ್ಸ್ ನಂಬರ್ ) ಮತ್ತು ಪರದೆಯ ಮೇಲೆ ಪ್ರದರ್ಶಿಸಲಾದ ಭದ್ರತಾ ಕೋಡ್ ಅನ್ನು ನಮೂದಿಸಿ.
ಲಾಗ್ ಇನ್ ಮಾಡಿ ಮತ್ತು ನಿಮ್ಮ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿ.
ಪದವಿ ಆನರ್ಸ್ ಪ್ರವೇಶಕ್ಕೆ ಬೆಂ.ವಿವಿ ಅರ್ಜಿ ಆಹ್ವಾನ, ಕೇಂದ್ರೀಯ ವಿವಿ ಕೋರ್ಸ್‌ಗಳಿಗೆ ಮೇ 15ರಿಂದ ಪ್ರವೇಶ ಪರೀಕ್ಷೆ
ಈ ವರ್ಷದ CISCE ಅಂತಿಮ ಪರೀಕ್ಷೆಗಳು ವಿವಾದಗಳಿಂದ ಕೂಡಿತ್ತು. ಹೀಗಾಗಿ ಕೌನ್ಸಿಲ್ ಎರಡು ಪತ್ರಿಕೆಗಳನ್ನು ಮುಂದೂಡಿತು. ಕೆಮಿಸ್ಟ್ರಿ ಪೇಪರ್ ಅನ್ನು ಮೊದಲು ಫೆಬ್ರವರಿ 26 ಕ್ಕೆ ನಿಗದಿಪಡಿಸಲಾಗಿತ್ತು, ಅನಿವಾರ್ಯ ಸಂದರ್ಭಗಳ ಕಾರಣದಿಂದ ಮಾರ್ಚ್ 21 ಕ್ಕೆ ಮುಂದೂಡಲಾಯ್ತು. ನಂತರ, ಒಂದು ಪರೀಕ್ಷಾ ಕೇಂದ್ರವು ಪ್ರಶ್ನೆ ಪತ್ರಿಕೆಯ ಪ್ಯಾಕೆಟ್ ಕಳೆದುಹೋಗಿದೆ ಎಂದು ವರದಿ ಮಾಡಿದ ನಂತರ ಕೌನ್ಸಿಲ್ 12 ನೇ ತರಗತಿಯ ಮನೋವಿಜ್ಞಾನ ಪರೀಕ್ಷೆಯನ್ನು ಮುಂದೂಡಿತು. ಬಳಿಕ ಮಾರ್ಚ್ 27 ರಂದು ನಿಗದಿಪಡಿಸಲಾಗಿದ್ದ ಪರೀಕ್ಷೆಯನ್ನು ಏಪ್ರಿಲ್ 4 ರಂದು ನಡೆಸಲಾಯಿತು.
ICSE ಮತ್ತು ISC ಫಲಿತಾಂಶಗಳ ಬಳಿಕ ವಿದ್ಯಾರ್ಥಿಗಳು ಮರು-ಪರಿಶೀಲನೆ ಮತ್ತು ಮರು-ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ CISCE ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತದೆ. ಮರು ಪರಿಶೀಲನೆಗಾಗಿ ವಿದ್ಯಾರ್ಥಿಗಳು ಪ್ರತಿ ಪತ್ರಿಕೆಗೆ 1,000 ರೂ ಶುಲ್ಕ ಪಾವತಿಸಬೇಕು ಮತ್ತು ಮರು ಮೌಲ್ಯಮಾಪನಕ್ಕೆ ಪ್ರತಿ ಪತ್ರಿಕೆಗೆ 1,500 ರೂ ಪಾವತಿಸಬೇಕಾಗುತ್ತದೆ. ಫಲಿತಾಂಶದ ಘೋಷಣೆಯ ನಂತರ ಕೌನ್ಸಿಲ್‌ನ ವೆಬ್‌ಸೈಟ್‌ನಲ್ಲಿ ಈ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲಾಗುತ್ತದೆ.
ICSE ಮತ್ತು ISC ವಿಭಾಗದ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ. ಈಗ, ವಿದ್ಯಾರ್ಥಿಗಳು ಸುಧಾರಣೆ ಪರೀಕ್ಷೆಯಲ್ಲಿ ಗರಿಷ್ಠ ಎರಡು ವಿಷಯಗಳಲ್ಲಿ ಮಾತ್ರ ಬರೆಯುವ ಆಯ್ಕೆಯನ್ನು ಹೊಂದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ, ಕಾನ್ಸಿಲ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ.