ಗರ್ಭಿಣಿ ಗೆಳತಿ ಕೊಂದು ಮಗುವನ್ನು ಕದಿಯಲು ಹೊಟ್ಟೆ ಕೊಯ್ದ ಮಹಿಳೆ..!

By Suvarna NewsFirst Published Aug 24, 2022, 3:59 PM IST
Highlights

ಬ್ರೆಜಿಲ್‌ನಲ್ಲಿ ಗರ್ಭಿಣಿಯ ಕೊಲೆ ನಡೆದಿದ್ದು, ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕೊಯ್ದು ತೆಗೆದುಕೊಂಡು ಹೋಗಲಾಗಿದೆ. ಗೆಳತಿ ಇಂತಹ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ಜಗತ್ತಿನಲ್ಲಿ ನಾನಾ ವಿಚಿತ್ರವಾದ ಅಪರಾಧ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಕೆಲವರಿಗೆ ಅಪರಾಧ ವೈಭವೀಕರಣದಂತಹ ಕಥೆಗಳನ್ನು ಓದುವುದೇ ಒಂದು ಕುತೂಹಲ. ಆದರೂ, ಹಲವರಿಗೆ ಕೆಲವು ಕ್ರೈಂ ಸ್ಟೋರಿಗಳನ್ನು ಓದಿದರೆ ಅವರಿಗೆ ಆತಂಕವಾಗುವುದಂತೂ ಖಚಿತ. ಹಾಗೂ, ಹಲವು ಕಥೆಗಳಲ್ಲಿ ಕೊಲೆಯಾದ ಬಲಿಪಶು ಹಾಗೂ ಕೊಲೆ ಮಾಡಿದವರು ಇಬ್ಬರೂ ಎಷ್ಟು ಹತ್ತಿರವಾಗುತ್ತಾರೆ ಎಂಬುದನ್ನು ತಿಳಿದಾಗ ಹಲವರಿಗೆ ಶಾಕ್‌ ಆಗುವುದಂತೂ ಖಚಿತ. ರಕ್ತ ಸಂಬಂಧ ಹಾಗೂ ಗೆಳೆತನ ಸಾಮಾನ್ಯವಾಗಿ ತುಂಬಾ ಬಲವಾಗಿರುತ್ತದೆಯಾದರೂ, ಕೆಲವೊಮ್ಮೆ ನೀವು ಹೆಚ್ಚು ನಂಬುವ ಜನರೇ ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಇದೇ ರೀತಿ, ಒಂದು ಘಟನೆ ಬೆಳಕಿಗೆ ಬಂದಿದ್ದು, ಅಲ್ಲಿ ಮಹಿಳೆಯೊಬ್ಬರು ತನ್ನ ಗೆಳತಿಯನ್ನು ಕೊಂದಿದ್ದು, ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಹೊರ ತೆಗೆದಿದ್ದಾರೆ. 

ಆಗಸ್ಟ್‌ 27, 2020 ರಂದು ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು,  24 ವರ್ಷದ ಫ್ಲೇವಿಯಾ ಗೋಡಿನ್ಹೋ ಅವರನ್ನು ಆಕೆಯ 27 ವರ್ಷದ ಗೆಳತಿ ರೋಝಾಲ್ಬಾ ಮರಿಯಾ ಗ್ರೈಮ್‌ ಕ್ಯಾನೆಲ್ಹಿನಾ ಟೌನ್‌ಗೆ ಕರೆದೊಯ್ದು ತಲೆಗೆ ಹಲವು ಬಾರಿ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಹಾಗೂ, ನಂತರ ಚಾಕುವಿನಿಂದ ಫ್ಲೇವಿಯಾ ಅವರ ಹೊಟ್ಟೆ ಕೊಯ್ದು ಮಗುವನ್ನು ಹೊರ ತೆಗೆದಿದ್ದಾರೆ. ನಂತರ ಆಕೆಯ ದೇಹವನ್ನು ಬಚ್ಚಿಟ್ಟಿದ್ದಾಳೆ. ಇಷ್ಟೆಲ್ಲ ಘಟನೆ ನಡೆದಾಗ ಫ್ಲೇವಿಯಾ ಅವರು 36 ವಾರಗಳ ಗರ್ಭಿಣಿಯಾಗಿದ್ದರು..! ಇದನ್ನು ಓದಿ ನಿಮಗೂ ಬೇಸರವಾಗುತ್ತದಲ್ಲವೇ..

16 ವರ್ಷದ ಬಾಲಕನಿಂದ 13 ವರ್ಷದ ಬಾಲಕನ ಹತ್ಯೆ: ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ?

ಇನ್ನು, ತನ್ನ ಗೆಳತಿಯನ್ನು ಕೊಲೆ ಮಾಡಿದ ಬಳಿಕ ರೋಝಾಲ್ಬಾ ತನ್ನ ಬಾಯ್‌ಫ್ರೆಂಡ್‌ ಜತೆಗೆ ಹೋಗಿದ್ದು, ಫ್ಲೇವಿಯಾಳ ಮಗುವನ್ನೂ ತೆಗೆದುಕೊಂಡುಹೋಗಿದ್ದಾಳೆ. ಆ ಮಗು ತನ್ನದೇ ಎಂದು ನಂಬಿದ ಆತ, ಹೆಂಡತಿ - ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರು ಮಾತ್ರ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಳಿಕ ಪೊಲೀಸರು ರೋಝಾಲ್ಬಾ ಹಾಗೂ ಆತನ ಬಾಯ್‌ಫ್ರೆಂಡ್‌ ಅನ್ನು ಬಂಧಿಸಿದ್ದರು. ಆದರೆ, ಜುಲೈ 27, 2021 ರಂದು ಈ ಅಪರಾಧದಲ್ಲಿ ರೋಝಾಲ್ಬಾ ಬಾಯ್‌ಫ್ರೆಂಡ್‌ನದ್ದು ಯಾವ ತಪ್ಪೂ ಸಹ ಇಲ್ಲವೆಂದು ಅವರನ್ನು ಖುಲಾಸೆಗೊಳಿಸಲಾಗಿತ್ತು. 

ಆದರೆ, ತನ್ನ ಗೆಳತಿಯನ್ನು ಕೊಲೆ ಮಾಡಿರುವುದು ಹಾಗೂ ಆಕೆಯ ಹೊಟ್ಟೆಯಿಂದ ಮಗುವನ್ನು ಕೊಯ್ದ ಅಪರಾಧ ಇತ್ತೀಚೆಗೆ ಬೆಳಕಿಗೆ ಬಂದಿದೆ. 15 ಗಂಟೆಗಳ ಕಾಲ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರೋಝಾಲ್ಬಾ ತಾನು ಅಪರಾಧ ಮಾಡಿದ್ದು ಹೇಗೆ, ಪ್ಲ್ಯಾನ್‌ ಮಾಡಿದ್ದು ಹೇಗೆ ಎಂಬ ಬಗ್ಗೆ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸತ್ತ ತಾಯಿಯ ಹೊಟ್ಟೆಯಿಂದ ಹುಟ್ಟದ ಮಗುವನ್ನು ಹೊರ ತೆಗೆಯುವುದು ಹೇಗೆ ಎಂಬುದನ್ನು ಸಂಶೋಧನೆ ನಡೆಸಿರುವುದಾಗಿಯೂ ಆರೋಪಿ ಹೇಳಿಕೊಂಡಿದ್ದಾರೆ. ಹೆರಿಗೆಯ ಸಮಯದಲ್ಲಿ ಗರ್ಭಾವಸ್ಥೆಯ ಲಕ್ಷಣಗಳನ್ನು ಹೇಗೆ ಅನುಕರಿಸಬೇಕು ಎಂಬುದನ್ನು ಸಹ ರೋಝಾಲ್ಬಾ ಕಲಿತರಂತೆ. ಸದ್ಯ, ಆರೋಪಿಯನ್ನು ಕೊಲೆ, ನ್ಯಾಯಕ್ಕೆ ಅಡ್ಡಿಪಡಿಸುವುದು, ಅಪ್ರಾಪ್ತ ವಯಸ್ಕನ ಅಪಹರಣ, ಶಿಶುವಿನ ಕೊಲೆ ಯತ್ನ, ಶವವನ್ನು ಮರೆಮಾಚುವಿಕೆ ಮತ್ತು ನವಜಾತ ಶಿಶುವಿನ ಹಕ್ಕುಗಳನ್ನು ನಿರಾಕರಿಸಿದ ಆರೋಪ ಹೊರಿಸಲಾಗಿದೆ ಎಂದು ತಿಳಿದುಬಂದಿದೆ. ಇಂತಹ ಅಪರಾಧ ಕೃತ್ಯಗಳನ್ನು ಓದುವ ನಿಮಗೇ ಎಷ್ಟು ಭಯ ಹಾಗೂ ಕೊಲೆ ಮಾಡಿದವರ ವಿರುದ್ಧ ಆಕ್ರೋಶ ಉಂಟಾಗುತ್ತಲ್ಲವೇ. ಇನ್ನು, ಆ ಕುಟುಂಬಕ್ಕೆ ಕೊಲೆ ಆರೋಪಿಯ ಮೇಲೆ ಎಷ್ಟು ಆಕ್ರೋಶ ಇರುತ್ತದೆ ಎಂಬುದನ್ನು ನಾವೇ ಊಹಿಸಬೇಕಾಗಿದೆ.

3 ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದ ತಾಯಿ ನೇಣಿಗೆ ಯತ್ನ

click me!