ಭೀಮಾತೀರದಲ್ಲಿ ಹಾಡುಹಗಲೇ ಉರ್ದು ಶಾಲಾ ಶಿಕ್ಷಕಿಯನ್ನು ದುರ್ಷ್ಕಮಿಗಳು ಭೀಕರ ಹತ್ಯೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ 21): ಭೀಮಾತೀರದಲ್ಲಿ ಈಗಷ್ಟೇ ಎರಡು ಕುಟುಂಬಗಳ ದ್ವೇಷ ಹೋಗಲಾಡಿಸಲು ಎಡಿಜಿಪಿ ಅಲೋಕ್ ಕುಮಾರ್ ಸಂಧಾನ ನಡೆಸಿದ ಬೆನ್ನಲ್ಲಿಯೇ ಇಂಡಿ ಪಟ್ಟಣದಲ್ಲಿ ಬರ್ಬರ ಹತ್ಯೆಯೊಂದು ನಡೆದಿದೆ. ಹಾಡುಹಗಲೇ ಉರ್ದು ಶಾಲಾ ಶಿಕ್ಷಕಿಯನ್ನು ದುರ್ಷ್ಕಮಿಗಳು ಭೀಕರ ಹತ್ಯೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ. ದಿಲಶಾದ್ ಹವಾಲ್ದಾರ್ (31) ಹತ್ಯೆಯಾದ ದುರ್ದೈವಿಯಾಗಿದ್ದಾರೆ. ಮಗನ ಮೇಲೂ ಹರಿತವಾದ ಆಯುಧದಿಂದ ಸಹ ಹಲ್ಲೆ ನಡೆಸಲಾಗಿದೆ. ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
undefined
Bengaluru: ಕಾಲ್‌ಗರ್ಲ್ ಕಿಡ್ನಾಪ್ ಕೇಸ್‌ಗೆ ಟ್ವಿಸ್ಟ್: 5 ಲಕ್ಷಕ್ಕಾಗಿ ದರೋಡೆಗೆ ಸಂಚು ರೂಪಿಸಿದ್ದ
ಘಟನೆಯ ಹಿಂದೆ ಅನೈತಿಕ ಸಂಬಂಧ:
ಕೊಲೆಯಾದ ದಿಲಸಾದ್ ಹವಾಲ್ದಾರ್ ಹಾಗೂ ಪಕ್ಕದ ಮನೆಯಲ್ಲಿ ವಾಸವಿದ್ದ ಬೇರೋಬ್ಬನ ನಡುವೆ ಸ್ನೇಹ ಬೆಳೆದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಪತಿ ಬಿಟ್ಟು ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾಡಿಕೊಂಡಿದ್ದನು. ಆದರೆ ಇವರ ಸಂಬಂಧದಲ್ಲಿ ಯಾವುದೇ ಪ್ರಗತಿ ಕಾಣದೇ ಇದ್ದರೂ ಪತಿ ಬಾದಶಾ ಶೇಖ ಬೇರೆಯೊಬ್ಬರ ಜತೆ ಮದುವೆಯಾಗಿದ್ದರು. ಬಾದಶಾ ಶೇಖ ಹಾಗೂ ದಿಲ್‌ಶಾದ ಹವಾಲ್ದಾರ ದಂಪತಿಗೆ 18 ವರ್ಷದ ಮಗನಿದ್ದನು. ಇಂದು ಸಂಜೆ ಮನೆಗೆ ಬಂದಿದ್ದ ಪತಿ ಅನೈತಿಕ ಸಂಬಂಧ ಬಗ್ಗೆ ಪ್ರಶ್ನೆ ಮಾಡಿದ್ದನು. ಇದೇ ವಿಚಾರವಾಗಿ ಪತಿ ಬದಶಾಹ ಪತ್ನಿ ಜತೆ ಜಗಳ ತೆಗೆದು ಚಾಕುವಿಂದ ಇರಿದಿದ್ದಾನೆ.
ರಾಜಕೀಯ ಆಟಕ್ಕೆ ಎರಡು ಜೀವಗಳು ಬಲಿ: ಕ್ರಿಕೆಟ್ ಆಡಲು ಹೋಗಿ ಹೆಣವಾಗಿ ಬಂದ ಯುವಕರು
ಸ್ವಂತ ಮಗನಿಗೂ ಇರಿದ ಅಪ್ಪ:
ತಾಯಿಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಯುತ್ತಿದ್ದ ವೇಳೆ ಮಗ ಬಿಡಿಸೋಕೆ ಬಂದಿದ್ದಾನೆ. ಈ ವೇಳೆ ಮಗನ ಮೇಲು ತಂದೆಯೆ ದಾಳಿ ನಡೆಸಿದ್ದಾನೆ. ಬಿಡಿಸಲು ಬಂದ ಮಗನನ್ನು ಚಾಕುವಿನಿಂದ ಇರಿದ್ದಿದ್ದಾನೆ. ಅದೃಷ್ಡವಶಾತ್ ಮಗ ಬದುಕಿದರೆ ತಾಯಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಇಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಪ್ರಕರಣ ದಾಖಲಾಗಿದೆ.