6 ವರ್ಷದಲ್ಲಿ 17 ಮದುವೆ, ಈಕೆ ಜೊತೆ ದೈಹಿಕ ಸಂಬಂಧ ಬೆಳೆಸಿದವರೆಲ್ಲ ಫಿನಿಶ್!

By Roopa HegdeFirst Published Oct 11, 2024, 3:16 PM IST
Highlights

ಆಕೆ ಒಂದಲ್ಲ ಎರಡಲ್ಲ ಬರೋಬ್ಬರಿ 17 ಮದುವೆಯಾದ್ಲು. ಅವಳ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಒಬ್ಬರೂ ಉಳಿಯಲಿಲ್ಲ. ಜನರು ಜಾತಕ ಸರಿಯಿಲ್ಲ ಅಂದ್ರು. ಇದನ್ನೇ ಬಂಡವಾಳ ಮಾಡ್ಕೊಂಡು ಆಟ ಆಡಿದವಳು ಕೊನೆಗೂ ಸಿಕ್ಕಿಬಿದ್ಲು. 
 

ಆಕೆ ಹೆಸರು ಲಾಲಾ ವಾನ್ (Lala Vaughan). ಪಂಜಾಬಿನ ಮಹಿಳೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆಯ್ತು. 14ನೇ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲಾ ವಾನ್ಗೆ ಆರಂಭದಲ್ಲಿ ದಾಂಪತ್ಯದ ಬಿಸಿ ಖುಷಿ ನೀಡಿತ್ತು. ಆದ್ರೆ ನಾಲ್ಕೈದು ತಿಂಗಳಲ್ಲೇ ಪತಿ ಬೋರ್ ಆಗಿದ್ದ. ಇನ್ನೊಬ್ಬನ ಮೇಲೆ ಕಣ್ಣು ಬಿದ್ದಿದ್ದೇ ತಡ, ದಾರಿಗೆ ಅಡ್ಡವಾಗಿದ್ದ ಪತಿಯನ್ನು ಮುಗಿಸುವ ಪ್ಲಾನ್ ಮಾಡಿದ್ಲು. ಅಷ್ಟೇ ಮದುವೆ (Wedding) ಯಾದ ಆರೇ ತಿಂಗಳಿಗೆ ಪತಿ ಹೆಣವಾಗಿದ್ದ. 

ಪಾಪ ಲಾಲಾ ವಾನ್ಗೆ ಚಿಕ್ಕ ವಯಸ್ಸು, ಆಕೆಗೆ ಹೀಗಾಗ್ಬಾರದಿತ್ತು ಅಂತ ಊರಿನವರೆಲ್ಲ ಬೊಬ್ಬೆ ಹಾಕಿದ್ರು. ಗಂಡ (husband) ಸತ್ತಿದ್ದಲ್ಲ, ಲಾಲಾ ವಾನ್ ಸಾಯಿಸಿದ್ದು ಎಂಬುದು ಯಾರಿಗೂ ಗೊತ್ತೇ ಆಗ್ಲಿಲ್ಲ. ಆರೇ ತಿಂಗಳಲ್ಲಿ ವಿಧವೆಯಾದ ಲಾಲಾ ವಾನ್, ಗಂಡ ಸತ್ತ ಖುಷಿಯನ್ನು ಸಂಭ್ರಮಿಸ್ತಾ ಊರು ಬಿಟ್ಟಳು. ಮತ್ತೆ ಇನ್ನೊಬ್ಬನನ್ನು ಮದುವೆ ಆದ್ಲು. ಲಾಲಾ ವಾನ್ ಜೀವನದಲ್ಲಿ ಎಲ್ಲ ಸರಿಯಾಗಿದೆ ಅಂದ್ಕೊಂಡಿದ್ದವರಿಗೆ ಮತ್ತಾರು ತಿಂಗಳಲ್ಲಿ ಶಾಕ್ ಕಾದಿತ್ತು. ಯಾಕೆಂದ್ರೆ ಲಾಲಾ ವಾನ್ ಎರಡನೇ ಪತಿ, ಆರೇ ತಿಂಗಳಲ್ಲಿ ಸತ್ತಿದ್ದ. ಇದಕ್ಕೂ ಪಾಪದ ಹೆಂಗಸಾದವಳು ಲಾಲಾ ವಾನ್. ಆತ ಹೇಗೆ ಸತ್ತ ಎಂಬುದನ್ನು ನೋಡುವ ತಾಳ್ಮೆ ಜನರಿಗಿರಲಿಲ್ಲ. ಶವ ಪರೀಕ್ಷೆಗೆ ಲಾಲಾ ವಾನ್ ಅವಕಾಶ ನೀಡಲಿಲ್ಲ. ಪತಿ ಸಾಯ್ತಿದ್ದಂತೆ ಅಂತ್ಯಸಂಸ್ಕಾರ ಮಾಡಿ ಊರು ಬಿಡುತ್ತಿದ್ದಳು.

Latest Videos

ಗ್ಯಾಂಗ್‌ರೇಪ್‌ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಸಾವು

ಲಾಲ್ ವಾನ್ ಈ ಕೆಲಸ ಒಂದೋ, ಎರಡೋ ಮದುವೆಗೆ ಮುಗಿಯಲಿಲ್ಲ. ಆರು ವರ್ಷದಲ್ಲಿ 17 ಮದುವೆ ಆದ್ಲು ಲಾಲಾ ವಾನ್. ವಿವಾಹವಾದ 17 ಪುರುಷರೂ ಸಾವನ್ನಪ್ಪಿದ್ರು. 17 ಬಾರಿ ವಿಧವೆಯಾದ್ರೂ ತಲೆ ಕೆಡಿಸಿಕೊಂಡಿರಲಿಲ್ಲ ಲಾಲಾ ವಾನ್. ಆಕೆಗೆ ಮದುವೆಯಾಗೋದು, ಹತ್ಯೆ ಮಾಡೋದು ಚಟವಾಗಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಗಂಡ ಬೋರ್ ಬರ್ತಿದ್ದ. ಇನ್ನೊಬ್ಬನ ಜೊತೆ ಮದುವೆಯಾಗುವ ಆಸೆಯಾಗ್ತಿತ್ತು. ಹಾಗಾಗಿ ಈತನ ಹತ್ಯೆ ಮಾಡ್ತಿದ್ದಳು ಲಾಲಾ ವಾನ್. 

ಲಾಲಾ ವಾನ್ ಹೀಗೆ ಮಾಡ್ತಿದ್ದಳು ಪತಿಯಂದಿರ ಹತ್ಯೆ : ಲಾಲ್ ವಾನ್ ತನ್ನ 20ನೇ ವಯಸ್ಸಿನಲ್ಲಿ 16 ಬಾರಿ ವಿಧವೆಯಾಗಿದ್ದಳು. ಅಚ್ಚುಕಟ್ಟಾಗಿ 16 ಕೊಲೆ ಮಾಡಿದ್ದಳು ಆಕೆ. ಇದಕ್ಕೆ ಕ್ಲಿಷ್ಟಕರವಾದ ಪ್ಲಾನ್ ಏನೂ ಮಾಡ್ತಿರಲಿಲ್ಲ. ವಿಷವೇ ಆಕೆಯ ಹತ್ಯೆಯ ಅಸ್ತ್ರವಾಗಿತ್ತು. ಪತಿ ಜೊತೆ ಪ್ರೀತಿ ನಾಟಕವಾಗಿ ಆತನಿಗೆ ವಿಷ ಉಣಿಸಿ ಆತನ ಕಥೆ ಮುಗಿಸ್ತಿದ್ದಳು. ಸತ್ತ ಮೇಲೆ ಅತ್ತುಕರೆದು ನಾಟಕವಾಡ್ತಿದ್ದಳು. ಲಾಲಾ ವಾನ್ ಜಾತಕ ಸರಿ ಇಲ್ಲ. ಆಕೆ ಮದುವೆ ಆದವರೆಲ್ಲ ಸಾಯ್ತಾರೆ ಎಂದು ಜನ ಮಾತನಾಡಿಕೊಳ್ತಿದ್ದರೇ ವಿನಃ ಕಾರಣ ಹುಡುಕಲು ಹೋಗಿರಲಿಲ್ಲ. ಆದ್ರೆ ಪೊಲೀಸ್ ಕಿವಿಗೆ ಲಾಲಾ ವಾನ್ ಸುದ್ದಿ ಹೋಗ್ತಿದ್ದಂತೆ ಪ್ರಕರಣ ತಿರುವು ಪಡೆಯಿತು. ಲಾಲಾ ವಾನ್ ಕರಾಳ ಸತ್ಯ ಬಹಿರಂಗವಾಯ್ತು. 

ಈ ಗ್ರಾಮದಲ್ಲಿ ಪೂರ್ತಿ ಡಿವೋರ್ಸ್ ಆದವರೇ ಹೆಚ್ಚು!

17ನೇ ಕೊಲೆಯಲ್ಲಿ ಸಿಕ್ಕಿಬಿದ್ದ ಲಾಲಾ ವಾನ್ : 16 ಪುರುಷರನ್ನು ಸಮಾಧಿ ಮಾಡಿದ್ದ ಲಾಲಾ ವಾನ್, 17ಕ್ಕೆ ಕೈ ಹಾಕಿದ್ದಳು. ಲಾಲಾ ವಾನ್ ಕಥೆ ಕೇಳಿದ್ದ ಪೊಲೀಸರಿಗೆ ಆಕೆ ಮೇಲೆ ಅನುಮಾನ ಬಂದಿತ್ತು. 17ನೇ ಪತಿಯನ್ನು ಉಳಿಸುವ ಪ್ರಯತ್ನದಲ್ಲಿ ಪೊಲೀಸರಿದ್ದರು, ಲಾಲಾ ವಾನ್ ಮೇಲೆ ಪೊಲೀಸ್ ಕಣ್ಣಿಟ್ಟಿತ್ತು. ಇಷ್ಟಾದ್ರೂ 17ನೇ ಪತಿಯನ್ನು ಉಳಿಸಲು ಸಾಧ್ಯವಾಗ್ಲಿಲ್ಲ. ಆದ್ರೆ ಲಾಲಾ ವಾನ್ ಸಿಕ್ಕಿಬಿದ್ಲು. ಪತಿಗೆ ವಿಷಹಾಕಿ ಹತ್ಯೆ ಮಾಡಿದ್ದ ಲಾಲಾ ವಾನ್, ಆತುರದಲ್ಲಿ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದಳು. ಅಲ್ಲಿಗೆ ಬಂದ ಪೊಲೀಸರು ಶವವನ್ನು ವಶಕ್ಕೆ ಪಡೆದು ಪರೀಕ್ಷೆ ನಡೆಸಿದಾಗ, ಲಾಲಾ ವಾನ್ ವಿಷ ಹಾಕಿ ಪತಿ ಹತ್ಯೆ ಮಾಡಿದ್ದಾಳೆ ಎಂಬುದು ಬಹಿರಂಗವಾಯ್ತು. 17 ಪತಿಯರನ್ನು ಹತ್ಯೆ ಮಾಡಿದ್ದಾಗಿ ಲಾಲಾ ವಾನ್ ಒಪ್ಪಿಕೊಂಡಳು. ಸೀರಿಯಲ್ ಕಿಲ್ಲರ್ ಕಥೆ ಕೇಳಿ ಇಡೀ ದೇಶವೇ ಬೆಚ್ಚಿಬಿದ್ದಿತ್ತು. 

click me!