ಬೆಂಗಳೂರು: 2000 ಮುಖಬೆಲೆ ನಕಲಿ ನೋಟು ಮುದ್ರಿಸಿ ಆರ್‌ಬಿಐನಲ್ಲಿ ಬದಲಾವಣೆಗೆ ಯತ್ನ, ಐವರ ಬಂಧನ

By Kannadaprabha News  |  First Published Oct 11, 2024, 8:36 AM IST

ಆರ್‌ಬಿಐ ಬ್ಯಾಂಕಿನ ಎಜಿಎಂ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಪ್ಟಲ್ ಹುಸೇನ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಈ ನಕಲಿ ನೋಟು ದಂಧೆಯ ಬಯಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರು ಆರೋಪಿಗಳನ್ನು ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ₹27.72 ಲಕ್ಷ ಮೌಲ್ಯದ ಎರಡು ಸಾವಿರ ರು. ಮುಖಬೆಲೆಯ ನಕಲಿ ನೋಟು ಜಪ್ತಿ ಮಾಡಲಾಗಿದೆ .
 


ಬೆಂಗಳೂರು(ಅ.11):  2000 ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಆರ್‌ಬಿಐನಲ್ಲಿ ಬದಲಾವಣೆಗೆ ಯತ್ನಿಸಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ.ಅಫೈಲ್ ಹುಸೇನ್ (29), ಪಾಂಡಿಚೇರಿ ಮೂಲದ ಪ್ರಸೀತ್ (47), ಕೇರಳ ಮೂಲದ ಮೊಹಮ್ಮದ್ ಆಫ್ಘಾಸ್ (34), ನೂರುದ್ದೀನ್ ಅಲಿಯಾಸ್ ಅನ್ವರ್ (34) ಹಾಗೂ ಪ್ರಿಯೇಶ್ (34) ಬಂಧಿತರು.  ಆರೋಪಿಗಳಿಂದ ₹52.40 ಲಕ್ಷ ಮೌಲ್ಯದ ಎರಡು ಸಾವಿರ ರುಪಾಯಿ ಮುಖಬೆಲೆಯ ನಕಲಿ ನೋಟುಗಳು ಹಾಗೂ 2 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. 

ಬಳ್ಳಾರಿ ಮೂಲದ ಆರೋಪಿ ಅಫಲ್ ಹುಸೇನ್ ಸೆ.9ರಂದು ನೃಪತುಂಗ ರಸ್ತೆಯ ಆರ್‌ಬಿಐ ಬ್ಯಾಂಕ್‌ಗೆ ಬಂದು, 2 ಸಾವಿರ ಮುಖಬೆಲೆಯ 24.68 ಲಕ್ಷವನ್ನು 2500 ಮುಖಬೆಲೆಯ ನೋಟುಗಳಿಗೆ ಬದಲಾವಣೆಗೆ ಮುಂದಾಗಿದ್ದ. ಈ ವೇಳೆ ಆರ್‌ಬಿಐ ಬ್ಯಾಂಕಿನ ಅಧಿಕಾರಿಗಳು ಈ ಎರಡು ಸಾವಿರ ರು. ಮುಖ ಬೆಲೆಯ ನೋಟುಗಳ ನೈಜತೆ ಪರೀಕ್ಷಿಸಿದಾಗ ಅವು ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ. 

Tap to resize

Latest Videos

ದಾವಣಗೆರೆ: 5 ಲಕ್ಷಕ್ಕೆ ನವಜಾತ ಶಿಶು ಮಾರಾಟ, ವೈದ್ಯೆ ಸೇರಿ 8 ಮಂದಿ ಅರೆಸ್ಟ್‌

ಈ ಸಂಬಂಧ ಆರ್‌ಬಿಐ ಬ್ಯಾಂಕಿನ ಎಜಿಎಂ ಭೀಮ್ ಚೌಧರಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಪ್ಟಲ್ ಹುಸೇನ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಈ ನಕಲಿ ನೋಟು ದಂಧೆಯ ಬಯಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರು ಆರೋಪಿಗಳನ್ನು ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ₹27.72 ಲಕ್ಷ ಮೌಲ್ಯದ ಎರಡು ಸಾವಿರ ರು. ಮುಖಬೆಲೆಯ ನಕಲಿ ನೋಟು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗ್ರಾನೈಟ್ ವ್ಯವಹಾರ: 

ಆರೋಪಿ ಅಫೈಲ್ ಹುಸೇನ್ ಬಳ್ಳಾರಿಯಲ್ಲಿ ಗ್ರಾನೈಟ್ ವ್ಯವಹಾರ ನಡೆಸುತ್ತಿದ್ದಾನೆ. ಕೇರಳ ಮೂಲದ ಆರೋಪಿ ನೂರುದ್ದೀನ್‌ ಗೆ ಗ್ರಾನೈಟ್ ವ್ಯವಹಾರ ಸಂಬಂಧ ಅಪ್ಟಲ್ ಹುಸೇನ್‌ಗೆ ₹25 ಲಕ್ಷ ನೀಡಬೇಕಿತ್ತು. ಈ ಹಣವನ್ನು ಕೊಡುವಂತೆ ಕೇಳಿದಾಗ, ತನ್ನ ಬಳಿ ₹500 ಮುಖಬೆಲೆಯ ನೋಟುಗಳು ಇಲ್ಲ. ಎರಡು ಸಾವಿರ ರು. ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು ₹500 ಮುಖ ಬೆಲೆಯ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದ್ದ. ಅದರಂತೆ ಆರೋಪಿ ಅಫೈಲ್ ಹುಸೇನ್ ಸೆ.9ರಂದು ₹24.68 ಲಕ್ಷ ಮೌಲ್ಯದ ಎರಡು ಸಾವಿರ ರು. ಮುಖಬೆಲೆಯ ನೋಟುಗಳನ್ನು ತೆಗೆದುಕೊಂಡು ಆರ್‌ಬಿಐ ಬ್ಯಾಂಕ್ ಗೆ ಬಂದು ಬದಲಾವಣೆಗೆ ಮುಂದಾಗಿದ್ದ.

ಬೆಂಗಳೂರು: ಮದುವೆ ಆಗೋದಾಗಿ ನಂಬಿಸಿ ಗರ್ಭಿಣಿ ಮಾಡಿ ವಂಚನೆ, ಇನ್‌ಸ್ಟಾಗ್ರಾಂ ಗೆಳೆಯನ ಬಂಧನ

ಕೇರಳದಲ್ಲಿ ಖೋಟಾ ನೋಟು ಮುದ್ರಣ 

ಕೇರಳದ ಕಾಸರಗೋಡು ಜಿಲ್ಲೆಯ ಚರ್ಕಳಾದಲ್ಲಿ ಆರೋಪಿ ಪ್ರಿಯೇಶ್ ಕಳೆದ 20 ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದಾನೆ. ಆರೋಪಿಯು ಕ್ಯಾಲಿಕಟ್‌ನಿಂದ ವಿಶೇಷ ಪೇಪ‌ರ್ ಹಾಗೂ ನೋಟು ತಯಾರಿಸುವ ಸಾಮಾಗ್ರಿಗಳನ್ನು ತಂದು ತನ್ನದೇ ಪ್ರಿಂಟಿಂಗ್ ಪ್ರೆಸ್‌ನಲ್ಲಿ ₹2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗಾಗಿ ಆರೋಪಿ ನೂರುದ್ದೀನ್‌ಗೆ ನೀಡಿದ್ದ. ಈ ನೂರುದ್ದೀನ್ ಇತರ ಆರೋಪಿಗಳ ಜತೆಗೆ ಸೇರಿಕೊಂಡು ಈ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ನಕಲಿ ನೋಟುಗಳ ಚಲಾವಣೆಗೆ ವಿಡಿಯೋ

ಆರೋಪಿಗಳಾದ ನೂರುದ್ದೀನ್ ಮತ್ತು ಮೊಹ ಮ್ಮದ್ ಅಫ್ರಾಸ್ ಈ ನಕಲಿ ನೋಟು ಗಳನ್ನು ವಿಡಿಯೋ ಮಾಡಿ ಚಲಾವಣೆಗೆ ಮಾಡಿಸಲು ಹಲವು ಜನರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ನಕಲಿ ನೋಟು ಮುದ್ರಿಸುತ್ತಿದ್ದ ಆರೋಪಿ ಪ್ರಿಯೇಶ್ ನನ್ನು ಈ ಹಿಂದೆ ಮಂಗಳೂರು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈತನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದಂಧೆಯ ರಹಸ್ಯ ಬಯಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

click me!