ಸರಿಯಾಗಿ ಬಟ್ಟೆ ಧರಿಸು ಇಲ್ಲದಿದ್ದರೆ ಆಸಿಡ್ ಎರಚುವೆ ಎಂದು ಮಹಿಳಾ ಉದ್ಯೋಗಿಗೆ ಬೆದರಿಸಿದ ಯುವ ಉದ್ಯೋಗಿಯೋರ್ವನನ್ನು ಸಂಸ್ಥೆಯೊಂದು ಕೆಲಸದಿಂದ ತೆಗೆದು ಹಾಕಿದೆ.
ಸರಿಯಾಗಿ ಬಟ್ಟೆ ಧರಿಸು ಇಲ್ಲದಿದ್ದರೆ ಆಸಿಡ್ ಎರಚುವೆ ಎಂದು ಮಹಿಳಾ ಉದ್ಯೋಗಿಗೆ ಬೆದರಿಸಿದ ಯುವ ಉದ್ಯೋಗಿಯೋರ್ವನನ್ನು ಸಂಸ್ಥೆಯೊಂದು ಕೆಲಸದಿಂದ ತೆಗೆದು ಹಾಕಿದೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪೊಲೀಸರು ಹಾಗೂ ಯುವಕ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಯುವಕನ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಶಹ್ಬಾಜ್ ಅನ್ಸರ್ ಎಂಬುವವರು ಈ ಬಗ್ಗೆ ದೂರು ನೀಡಿದ್ದರು. ನಿಕಿತ್ ಶೆಟ್ಟಿ ಎಂಬ ವ್ಯಕ್ತಿ ನನ್ನ ಪತ್ನಿಗೆ ಆಕೆ ಧರಿಸುವ ಬಟ್ಟೆಯ ಬಗ್ಗೆ ಅವಹೇಳನ ಮಾಡಿ ಆಕೆಯ ಮುಖದ ಮೇಲೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈತನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಸಿಎಂ, ಡಿಜಿಪಿಗೆ ಟ್ಯಾಗ್ ಮಾಡಿದ್ದರು.
undefined
ಬ್ಲಾಕ್‌ಮೇಲ್ ಮಾಡುತ್ತಿದ್ದ ಬಾಯ್‌ಫ್ರೆಂಡ್ ಮೇಲೆ ಆ್ಯಸಿಡ್ ದಾಳಿ ನಡೆಸಿದ ಗೆಳತಿ!
ಇದೇ ವೇಳೆ ಆತ ಯಾರು ಎಂಬುದನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾ ಬಳಕೆದಾರರು ಪತ್ತೆ ಮಾಡಿದ್ದು, ಆತ ಇಟಿಯೋಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದು ತಿಳಿದು ಬಂದಿದೆ. ಕೂಡಲೇ ಈ ವಿಚಾರ ಸಂಸ್ಥೆಯ ಗಮನಕ್ಕೂ ಬಂದಿದ್ದು, ಸಂಸ್ಥೆ ನಿಖಿಲ್ ಶೆಟ್ಟಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಪ್ರಕಟಣೆ ನೀಡಿದೆ.
ನಮ್ಮ ಉದ್ಯೋಗಿಯೊಬ್ಬರು ಭಾಗಿಯಾಗಿರುವ ಗಂಭೀರ ಘಟನೆಯೊಂದರಿಂದ ನಾವು ತೀವ್ರ ಬೇಸರಕ್ಕೊಳಗಾಗಿದ್ದೇವೆ. ನಿಖಿತ್ ಶೆಟ್ಟಿ, ಮತ್ತೊಬ್ಬ ಮಹಿಳಾ ಉದ್ಯೋಗಿಯ ಅವರಿಷ್ಟದ ಬಟ್ಟೆ ಧರಿಸಿದ್ದಕ್ಕೆ ಸಂಬಂಧಿಸಿದಂತೆ ಆಸಿಡ್ ಎರಚುವುದಾಗಿ ಬೆದರಿಕೆಯೊಡ್ಡಿದ್ದು, ಇಂತಹ ವರ್ತನೆಯನ್ನು ಸಹಿಸಲಾಗದು ಹಾಗೂ ಇಟಿಯೋಸ್‌ನ ಸೇವಾ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ವಿವಾಹಿತ ಪ್ರಿಯತಮೆ ಬಾಗಿಲು ತೆರೆಯದ್ದಕ್ಕೆ ಆ್ಯಸಿಡ್ ಎರಚಿದ ಕಿರಾತಕ!
ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಬೆಳೆಸಲು ಬದ್ಧವಾಗಿರುವ ನಮ್ಮ ಕಂಪನಿಯೂ ನಿಕಿತ್ ಶೆಟ್ಟಿ ವಿರುದ್ಧ ತಕ್ಷಣದ ಕ್ರಮವನ್ನು ತೆಗೆದುಕೊಂಡಿದ್ದೇವೆ. ನಿಕಿತ್ ಅವರ ಉದ್ಯೋಗವನ್ನು ಐದು ವರ್ಷಗಳ ಕಾಲದ ಅವಧಿಗೆ ವಜಾ ಮಾಡಲಾಗಿದೆ ಮತ್ತು ಆತನ ವರ್ತನೆ ಖಚಿತಪಡಿಸಿಕೊಳ್ಳಲು ನಾವು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಎಟಿಯೋಸ್ ಡಿಜಿಟಲ್ ಹೇಳಿದೆ. ಈ ಎಡಿಯೋಸ್ ಪೂರ್ಣ ಸ್ಟಾಕ್ ಮಾರ್ಕೆಟಿಂಗ್ ಏಜೆನ್ಸಿಯಾಗಿದೆ.
ನನ್ನ ಪತ್ನಿ ಖ್ಯಾತಿ ಶ್ರೀ ಮೇಲೆ ಆಸಿಡ್ ದಾಳಿ ಮಾಡುವುದಾಗಿ ಹೇಳಿದ ವ್ಯಕ್ತಿ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದಾನೆ. ಕಂಪನಿಯೂ ದೂರು ನೀಡಿದ ಕೂಡಲೇ ಕ್ರಮ ಕೈಗೊಂಡು ಆತನನ್ನು ವಜಾ ಮಾಡಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಅನ್ಸರ್ ಸಾಮಾಜಿಕ ಜಾಲತಾಣದಲ್ಲಿ ನಂತರ ಬರೆದುಕೊಂಡಿದ್ದಾರೆ. ನಿಕಿತ್ ಶೆಟ್ಟಿ ವಿರುದ್ಧ ಈಗ ಭಾರತದ ನ್ಯಾಯ ಸಂಹಿತೆಯ ಸೆಕ್ಷನ್ 124ರ ಅಡಿ ಪ್ರಕರಣ ದಾಖಲಾಗಿದೆ.