ಮೊಬೈಲ್ ಕಳ್ಳತನಕ್ಕೆ ಪ್ರತಿರೋಧ: ಇಬ್ಬರು ಬಾಲಕರಿಂದ 18 ವರ್ಷದ ತರುಣನ ಹತ್ಯೆ

By Anusha KbFirst Published Jan 22, 2023, 7:57 PM IST
Highlights

ಮೊಬೈಲ್ ಕಳ್ಳತನದ ವೇಳೆ ಪ್ರತಿರೋಧ ಒಡ್ಡಿದ್ದ 18 ವರ್ಷದ ತರುಣನನ್ನು ಇಬ್ಬರು ಬಾಲಕರು ಇರಿದು ಕೊಲೆ ಮಾಡಿದ ಆಘಾತಕಾರಿ  ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿ: ಮೊಬೈಲ್ ಕಳ್ಳತನದ ವೇಳೆ ಪ್ರತಿರೋಧ ಒಡ್ಡಿದ್ದ 18 ವರ್ಷದ ತರುಣನನ್ನು ಇಬ್ಬರು ಬಾಲಕರು ಇರಿದು ಕೊಲೆ ಮಾಡಿದ ಆಘಾತಕಾರಿ  ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.  ಮೊಬೈಲ್ ಫೋನ್ ಕಳ್ಳತನದ ವೇಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರು ಬಾಲಕರು ಸೇರಿ ಆತನ ಕುತ್ತಿಗೆ ಸೇರಿದಂತೆ ದೇಹದ ವಿವಿಧೆಡೆ ಹಲವು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.  ಕುತ್ತಿಗೆಯಲ್ಲಿ ಆಳವಾದ ಗಾಯ ಹಾಗೂ ದೇಹದ ವಿವಿಧೆಡೆ ಆದ ಗಾಯಗಳಿಂದಾಗಿ 18 ವರ್ಷದ ತರುಣ ಸಾವನ್ನಪ್ಪಿದ್ದಾನೆ. 

ಮೃತ ತರುಣನನ್ನು 18 ವರ್ಷ ಪ್ರಾಯದ ಹರ್ಷ್ (Harsh) ಎಂದು ಗುರುತಿಸಲಾಗಿದ್ದು, ದೇವಸ್ಥಾನದ ಬಳಿ ಆತನ ಶವ ಪತ್ತೆಯಾಗಿದೆ. ಮೃತ ಹರ್ಷ್ ಭಟಿ ಮೈನ್ಸ್  ಸಮೀಪದ ಸಂಜಯ್ ಕಾಲೋನಿ (Sanjay Colony) ನಿವಾಸಿಯಾಗಿದ್ದಾನೆ. ಈತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ  ಬಾಲಕರಿಬ್ಬರು 15 ವರ್ಷ ಪ್ರಾಯದವರಾಗಿದ್ದು,  ಎಲ್ಲರೂ ಒಂದೇ ಕಾಲೋನಿಯಲ್ಲಿ ವಾಸವಿದ್ದರು. ಕೊಲೆ ಮಾಡಿದ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಬಳಿ ಇದ್ದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದಾಗ ಆತ ವಿರೋಧಿಸಿದ್ದಾನೆ. ಈ ವೇಳೆ ಕುಪಿತಗೊಂಡ ಬಾಲಕರು ಚಾಕುವಿನಿಂದ ಇರಿದಿದ್ದಾರೆ. 

ಮೋಜು ಮಸ್ತಿಗಾಗಿ ಸಾಲ: ಸಾಲ ತೀರಿಸಲು ಮಹಿಳೆ ಹತ್ಯೆ: ಬಾಲಪರಾಧಿ ಸೇರಿ ಮೂವರ ಬಂಧನ

ದೇವಸ್ಥಾನದ ಬಳಿ ಬಿದ್ದಿದ್ದ ಮೃತ ಹರ್ಷ್ ಮೃತದೇಹವನ್ನು ಆತನ ಅಜ್ಜಿ ಇದು ತಮ್ಮದೇ ಮೊಮ್ಮಗ ಎಂದು ಗುರುತಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ (AIIMS)ಆಸ್ಪತ್ರೆಗೆ ಕಳುಹಿಸಿದ್ದಾರೆ.  ಪೊಲೀಸರು ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು (CCTV footage) ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.  ಇವರಿಬ್ಬರು ಕೊನೆಯ ಬಾರಿ ಮೃತ ತರುಣನ ಜೊತೆ ಕಾಣಿಸಿಕೊಂಡಿದ್ದರು.  ಕೊಲೆಗೆ ಬಳಿಸಿದ ಚಾಕು, ಮೃತ ತರುಣನ ಫೋನ್, ಸಿಮ್ ಕಾರ್ಡ್‌, ಹಾಗೂ ರಕ್ತ ಮೆತ್ತಿದ್ದ ಬಟ್ಟೆ ಹಾಗೂ ಶೂಗಳನ್ನು ಬಂಧಿತರ ಬಳಿಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಹರ್ಯಾಣದಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ: 14 ವರ್ಷದ ಬಾಲಾಪರಾಧಿ ಬಂಧನ

click me!