ಮಗಳಿಂದಲೇ ತಾಯಿ ಹತ್ಯೆ- 13 ತಿಂಗಳ ಬಳಿಕ ಶವ ಸ್ಮಶಾನದಲ್ಲಿ ಪತ್ತೆ! ಕಾರಣ ಕೇಳಿದ್ರೆ ಶಾಕ್!

By Kannadaprabha News  |  First Published Dec 14, 2023, 10:47 AM IST

ನಾಪತ್ತೆಯಾಗಿದ್ದ ಮಹಿಳೆ ಶವವು 13 ತಿಂಗಳ ಬಳಿಕ ಪತ್ತೆಯಾಗಿದ್ದು, ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಗಳು ಮತ್ತು ಅಳಿಯನನ್ನು ಮೈಸೂರು ತಾಲೂಕಿನ ವರುಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


 ಮೈಸೂರು (ಡಿ.14): ನಾಪತ್ತೆಯಾಗಿದ್ದ ಮಹಿಳೆ ಶವವು 13 ತಿಂಗಳ ಬಳಿಕ ಪತ್ತೆಯಾಗಿದ್ದು, ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಗಳು ಮತ್ತು ಅಳಿಯನನ್ನು ಮೈಸೂರು ತಾಲೂಕಿನ ವರುಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಂಡ್ಯ ಜಿಲ್ಲೆ ಮತ್ತು ತಾಲೂಕು ಹೆಬ್ಬಕವಾಡಿ ಗ್ರಾಮದ ಲೇಟ್ ದೇವರಾಜಾಚಾರಿ ಎಂಬವರ ಪತ್ನಿ ಶಾರದಮ್ಮ(45) ತನ್ನ ಮಗಳಿಂದ ಹತ್ಯೆಯಾದವರು. ಇವರನ್ನು ಪುತ್ರಿ ಅನುಷಾ ಮತ್ತು ಆಕೆಯ ಪತಿ ದೇವರಾಜು ಸೇರಿ ಕೊಲೆ ಮಾಡಿ, ಸ್ಮಶಾನದಲ್ಲಿ ಹೂತು ಹಾಕಿದ್ದು, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Latest Videos

undefined

ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ ಕಿರಾತಕ ಅಳಿಯ! ಕೊಲೆಯ ಕಾರಣ ಕೇಳಿ ಪತ್ನಿಯೇ ಶಾಕ್!

ಶಾರದಮ್ಮ ಪತಿ ನಿಧನದ ಬಳಿಕ ಹೆಬ್ಬಕವಾಡಿಯಲ್ಲಿ ಒಂಟಿಯಾಗಿ ವಾಸುತ್ತಿದ್ದು, ಇತ್ತೀಚೆಗೆ ಕಣ್ಣಿನ ತೊಂದರೆಯಿಂದ ನರಳುತ್ತಿದ್ದರು. ಈ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತೆ ಪುತ್ರಿ ಅನುಷಾಗೆ ಹೇಳಿದ್ದಾರೆ. ಆದರೆ, ಹಣದ ತೊಂದರೆಯಿಂದ ಚಿಕಿತ್ಸೆ ಕೊಡಿಸಲು ಅನುಷಾ ವಿಳಂಬ ಮಾಡಿದ್ದಾರೆ. 2022ರ ನಂವಬರ್ ನಲ್ಲಿ ತಾಯಿಗೆ ಕಣ್ಣಿನ ಚಿಕಿತ್ಸೆ ಕೊಡಿಸಿ ಹೆಬ್ಬಕವಾಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಈ ವೇಳೆ ಚಿಕಿತ್ಸೆ ಕೊಡಿಸಲು ತಡ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾರದಮ್ಮ, ಮಗಳೊಂದಿಗೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅನುಷಾ ತಾಯಿಯನ್ನು ಕೆಳಗೆ ತಳ್ಳಿದ್ದು, ಕೆಳಗೆ ಬಿದ್ದ ಶಾರದಮ್ಮ ಅವರ ತಲೆಗೆ ಮಂಚ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮನೆಯಲ್ಲಿ ತಾಯಿ ಶಾರದಮ್ಮ ಮೃತಪಟ್ಟಿದ್ದರಿಂದ ಕಂಗಲಾದ ಅನುಷಾ, ಪತಿ ದೇವರಾಜ ಜೊತೆಗೆ ಬೈಕಿನಲ್ಲಿ ಶವ ಸಾಗಿಸಿ ಗ್ರಾಮದ ಸ್ಮಶಾನಕ್ಕೆ ರಾತ್ರಿ ವೇಳೆ ಹೊತ್ತು ತೆರಳಿ ಶವನ್ನು ಗುಂಡಿ ತೆಗೆದು ಹೂತು ಹಾಕಿದ್ದಾರೆ. ಬಳಿಕ ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿರುವ ಮನೆಗೆ ಬಂದಿದ್ದಾರೆ.

ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!

ಈ ಮಧ್ಯೆ ಕೆಲವು ತಿಂಗಳು ಕಳೆದರೂ ಮನೆಯ ಬಳಿ ಶಾರದಮ್ಮ ಕಾಣದೇ ಇದ್ದುದ್ದರಿಂದ ಆತಂಕಗೊಂಡ ಆಕೆಯ ಸಹೋದರಿ ದೇವಮ್ಮ, ಅನುಷಾಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕೊನೆಗೆ ಸಂಬಂಧಿಕರ ಒತ್ತಡದ ಮೇರೆಗೆ 8 ತಿಂಗಳ ಬಳಿಕ 2023 ಜೂನ್ ನಲ್ಲಿ ಅನುಷಾ ತಮ್ಮ ತಾಯಿ ನಾಪತ್ತೆಯಾಗಿದ್ದಾರೆ ಎಂದು ವರುಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ಅನುಷಾ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದಾಗ ಮಗಳೇ ತಾಯಿಯನ್ನು ಕೊಂದು ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸಲಿದ್ದು, ಸ್ಮಶಾನದಲ್ಲಿ ಹೂತಿಟ್ಟರ ಶವದ ಮರಣೋತ್ತರ ಪರೀಕ್ಷೆಯನ್ನು ಅಲ್ಲಿನ ಸ್ಥಳೀಯ ಪೊಲೀಸರ ನಡೆಸಲಿದ್ದಾರೆ.

click me!