ಗುಜರಾತ್ ಆಸ್ಪತ್ರೆಯಲ್ಲೇ ಡಬ್ಬಲ್‌ ಮರ್ಡರ್‌: ಮತ್ತು ಬರಿಸಿ, ಕತ್ತು ಹಿಸುಕಿ ತಾಯಿ - ಮಗಳ ಹತ್ಯೆ..!

By BK AshwinFirst Published Dec 22, 2022, 5:15 PM IST
Highlights

ಮೃತರನ್ನು ಭಾರತಿ ವಾಲಾ (30) ಮತ್ತು ಆಕೆಯ ತಾಯಿ ಚಂಪಾ ಎಂದು ಕಾಗ್ದಾಪೀಠ ಪೊಲೀಸರು ಗುರುತಿಸಿದ್ದಾರೆ. ಇಬ್ಬರಿಗೂ ಮೊದಲು ಮಾದಕ ದ್ರವ್ಯ ನೀಡಿ ನಂತರ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ

ಗುಜರಾತ್‌ನ (Gujarat) ಮಣಿನಗರದ (Maninagar) ಭುಲಾಭಾಯಿ ಪಾರ್ಕ್ (Bhulabhai Park) ಬಳಿಯ ಇಎನ್‌ಟಿ ಆಸ್ಪತ್ರೆಯಲ್ಲಿ (ENT Hospital) ಇಬ್ಬರು ಮಹಿಳೆಯರ ಶವ (Two Women Dead Bodies) ಪತ್ತೆಯಾಗಿದೆ. ಅಲ್ಲದೆ, ಅವರನ್ನು ಹತ್ಯೆ (Murder) ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಬುಧವಾರ ಉದ್ಯೋಗಿಯೊಬ್ಬರು ಪೈಪ್‌ಗಳು ಮತ್ತು ವಾಲ್ವ್‌ಗಳಿಂದ ಮುಚ್ಚಿದ್ದ ಕ್ಯಾಬಿನೆಟ್ ಅನ್ನು ತೆರೆದಾಗ ಅದರೊಳಗೆ ಮಹಿಳೆಯೊಬ್ಬರ ಶವ ಇಟ್ಟಿರುವುದು ಕಂಡುಬಂದಿದೆ. ಇನ್ನು, ಸಿಸಿಟಿವಿ ಫೂಟೇಜ್ (CCTV Footage) ಅನ್ನು ಪರಿಶೀಲನೆ ಮಾಡಿದ ಬಳಿಕ ಆಕೆ ಆಸ್ಪತ್ರೆಗೆ ಒಬ್ಬರೇ ಬಂದಿಲ್ಲ ಎಂದು ತಿಳಿದು ಬಂದ ನಂತರ, ಆಕೆಯ ತಾಯಿಯ ಶವವನ್ನು ಬೆಡ್‌ವೊಂದರ ಕೆಳಗೆ ಮುಚ್ಚಿಡಲಾಗಿತ್ತು ಎಂಬುದನ್ನೂ ಪೊಲೀಸರು (Police) ಕಂಡುಕೊಂಡಿದ್ದಾರೆ. ಮೃತರನ್ನು ಭಾರತಿ ವಾಲಾ (30) ಮತ್ತು ಆಕೆಯ ತಾಯಿ ಚಂಪಾ ಎಂದು ಕಾಗ್ದಾಪೀಠ ಪೊಲೀಸರು ಗುರುತಿಸಿದ್ದಾರೆ. ಇಬ್ಬರಿಗೂ ಮೊದಲು ಮಾದಕ ದ್ರವ್ಯ ನೀಡಿ ನಂತರ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು, ಈ ಘಟನೆ ಸಂಬಂಧ ಆಸ್ಪತ್ರೆಯ ಕಾಂಪೌಂಡರ್ ಮನ್ಸುಖ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಭಾರತಿಯ ಪತಿ ಮನೆಯವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಭಾರತಿ 5-6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಕೌಟುಂಬಿಕ ಕಲಹಗಳ ಕಾರಣ, ಆಕೆ ನರೋಲ್‌ನಲ್ಲಿರುವ ತನ್ನ ಹೆತ್ತವರ ಮನೆಗೆ ವಾಪಸಾಗಿದ್ದಾರೆ ಮತ್ತು ಅಂದಿನಿಂದಲೂ ತವರು ಮನೆಯಲ್ಲೇ ವಾಸವಾಗಿದ್ದರು ಎಂದೂ ಗುಜರಾತ್‌ ಪೊಲೀಸರು ಹೇಳಿದರು. ಕೊಲೆಯು ಬೆಳಗ್ಗೆ 9.30 ರಿಂದ 10.30 ರ ವೇಳೆಗೆ ನಡೆದಿದೆ ಎಂದು ತೋರುತ್ತಿದೆ.  ಈ ಅವಧಿಯಲ್ಲಿ ಸಿಸಿಟಿವಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದ ಕಾರಣ ಹೀಗೆ ಹೇಳಬಹುದು. ಅಲ್ಲದೆ, ಡಾ. ಅರ್ಪಿತ್‌ ಶಾ ಅವರು ಬೆಳಗ್ಗೆ 9 ಗಂಟೆಯಿಂದ 9: 30 ರ ವರೆಗೆ ಆಸ್ಪತ್ರೆಯಿಂದ ಹೊರಕ್ಕೆ ತೆರಳಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಬ್ಬಂದಿ ಮೊದಲು ಮಹಿಳೆಯೊಬ್ಬರ ಶವವನ್ನು ಪತ್ತೆ ಮಾಡಿದರು, ಅವರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಇನ್ನೊಬ್ಬ ಮಹಿಳೆಯೊಂದಿಗೆ ಅವರು ಬಂದಿದ್ದರು ಎಂದು ಅವರಿಗೆ ತಿಳಿದುಬಂದಿದೆ. ನಂತರ, ಆಸ್ಪತ್ರೆಯನ್ನು ಪರಿಶೀಲಿಸಿದಾಗ ನಾವು ಆಕೆಯ ತಾಯಿಯ ಮೃತದೇಹವನ್ನು ಪತ್ತೆಹಚ್ಚಿದೆವು. ಬೆಡ್‌ವೊಂದರ ಕೆಳಗೆ ಬೆಡ್‌ಶೀಟ್‌ನಿಂದ ಆ ಶವವನ್ನು ಮುಚ್ಚಲಾಗಿತ್ತು ಎಂದು ಡಿಸಿಪಿ (ವಲಯ 6) ಎ. ಎಂ ಮುನಿಯ ಅವರು ಹೇಳಿದರು. ಇನ್ನು, ಆಸ್ಪತ್ರೆ ನೌಕರರನ್ನು ಪರಿಶೀಲಿಸಿದ ಬಳಿಕ, ಮಹಿಳೆಗೆ ಕಾಂಪೌಂಡರ್‌ಗೆ ಸಂಬಂಧವಿರುವುದು ಪತ್ತೆಯಾಗಿದೆ’ ಎಂದೂ ಹೇಳಿದ್ದಾರೆ. 

ಚಂಪಾ ಅವರ ಕಾಲು ನೋಯುತ್ತಿದ್ದರಿಂದ ತಾಯಿ ಮತ್ತು ಮಗಳು ಎಲ್‌ಜಿ ಆಸ್ಪತ್ರೆಗೆ ತಪಾಸಣೆಗೆ ಹೋಗಲು ಮನೆಯಿಂದ ಹೊರಟರು. ಆದರೆ ನಂತರ ಅವರು ಇಎನ್‌ಟಿ ಆಸ್ಪತ್ರೆಗೆ ಭೇಟಿ ನೀಡಿ ತಾಯಿಯ ಕಿವಿಗಳನ್ನು ಪರೀಕ್ಷಿಸಲು ನಿರ್ಧರಿಸಿದರು" ಎಂದೂ ಪೊಲೀಸರು ತಿಳಿಸಿದ್ದಾರೆ. ಇನ್ನು, ಪೊಲೀಸರು ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿಗೆ ಬೆಳಗ್ಗೆ 9.30 ರ ನಂತರ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂದು ತಿಳಿದಿದ್ದರು ಮತ್ತು ಆ ಸಮಯದಲ್ಲಿ ಅವರಿಬ್ಬರಿಗೆ ಕರೆ ಮಾಡಿ ಬರಲು ಹೇಳಿದರು. ಆರೋಪಿ ಭಾರತಿಯನ್ನು ಮೊದಲು ಕೊಂದರು ಮತ್ತು ಚಂಪಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರಿಗೂ ಅದೇ ಮಾದಕ ದ್ರವ್ಯ ಚುಚ್ಚುಮದ್ದು ನೀಡಿ ಕೊಲೆ ಮಾಡಲಾಗಿದೆ ಎಂದು ಗುಜರಾತ್ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರ ಸಹಾಯಕ್ಕಾಗಿ ವಿಧಿವಿಜ್ಞಾನ ತಜ್ಞರ ತಂಡವನ್ನು ಕರೆಸಲಾಗಿತ್ತು ಎಂದೂ ತಿಳಿದುಬಂದಿದೆ.

click me!