ಕೆಂಗೇರಿ ಸರ್ಕಲ್‌ನಲ್ಲಿಯೇ ವ್ಯಕ್ತಿಯ ಬರ್ಬರ ಹತ್ಯೆ: ಹಳೆ ದ್ವೇಷಕ್ಕೆ ಕೊಚ್ಚಿಹಾಕಿದ ದುಷ್ಕರ್ಮಿಗಳು

By Sathish Kumar KHFirst Published Jun 1, 2023, 11:52 PM IST
Highlights

ಹಳೆಯ ವೈಯಕ್ತಿಕ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ದುಷ್ಕರ್ಮಿಗಳ ಗುಂಪು ಕುಡಿದ ಮತ್ತಿನಲ್ಲಿ ಬೆಂಗಳೂರಿನ ಕೆಂಗೇರಿಯ ಹೊಯ್ಸಳ ವೃತ್ತದಲ್ಲಿಯೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಗುರುವಾರ ರಾತ್ರಿ ನಡೆದಿದೆ.

ಬೆಂಗಳೂರು (ಜೂ.1): ವೈಯಕ್ತಿಕ ದ್ವೇಷಕ್ಕೆ ಹಲ್ಲೆ ಮಾಡುವುದು ಹಾಗೂ ಬೈಯುವುದು ಸರ್ವೇ ಸಾಮಾನ್ಯ. ಆದರೆ, ಹಳೆಯ ವೈಯಕ್ತಿಕ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ದುಷ್ಕರ್ಮಿಗಳ ಗುಂಪು ಕುಡಿದ ಮತ್ತಿನಲ್ಲಿ ಬೆಂಗಳೂರಿನ ಕೆಂಗೇರಿಯ ಹೊಯ್ಸಳ ವೃತ್ತದಲ್ಲಿಯೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಗುರುವಾರ ರಾತ್ರಿ ನಡೆದಿದೆ.

ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ, ಸುಲಿಗೆ, ದರೋಡೆ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವ ಘಟನೆಗಳು ನಡೆಯುತ್ತಿವೆ. ಆದರೆ, ಗುರುವಾರ ರಾತ್ರಿ ವೇಳೆ ಇನ್ನು ಮನೆಯಲ್ಲಿ ಮಲಗಬೇಕು ಎಂದು ಕಂಠಪೂರ್ತಿ ಎಣ್ಣೆ ಕುಡಿದು ಮನೆಯತ್ತ ಹೊರಟಿದ್ದ ವ್ಯಕ್ತಿಯನ್ನು ಅಡ್ಡಹಾಕಿ ಕೆಂಗೇರಿಯ ಹೊಯ್ಸಳ ವೃತ್ತದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇನ್ನು ಕಂಠಪೂರ್ತಿ ಕುಡಿದು ಹಳೆ ದ್ವೇಷಕ್ಕೆ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಕೆಂಗೇರಿ ಉಪನಗರದ ಹ್ಯಾಪಿ ಡೇ  ಬಾರ್ ಸಮೀಪ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ನವೀನ್‌ ಎನ್ನುವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿರುವ ಕೆಂಗೇರಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇನ್ನು ರಾತ್ರಿ ಜನರು ಸಂಚಾರ ಮಾಡುವ ವೇಳೆಯೇ ಭೀಕರ ಕೃತ್ಯವನ್ನು ಎಸಗಿದವರ ಪತ್ತೆಗೆ ಶೋಧ ಕಾರ್ಯವನ್ನು ನಡೆಸಿದ್ದಾರೆ. ಇದಕ್ಕಾಗಿ ಸಿಸಿಟಿವಿ ಪರಿಶೀಲನೆ ಮಾಡಿ ಹಂತಕರ ಪತ್ತೆಗೆ ಶೋಧ ಮಾಡುತ್ತಿದ್ದಾರೆ.

ಹೆಂಡತಿ ಮೇಲಿನ ಕೋಪಕ್ಕೆ ಅವಳಿ ಮಕ್ಕಳನ್ನು ಕತ್ತುಹಿಸುಕಿ ಕೊಂದ ಪಾಪಿ ತಂದೆ

ಹಾಡಹಗಲೇ ಸುಲಿಗೆಗೆ ಯತ್ನಿಸ್ತಿದ್ದ ಡೆಡ್ಲಿ ರಾಬರ್ಸ್: ಬೆಂಗಳೂರಿನಲ್ಲಿ ಹಾಡು ಹಗಲಿನಲ್ಲಿಯೇ ರಸ್ತೆಗಿಳಿದು ಲಾಂಗು, ಮಚ್ಚು ಹಾಗೂ ಡ್ರ್ಯಾಗರ್‌ಗಳನ್ನು ಹಿಡಿದು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದ ಪುಡಿ ರೌಡಿಗಳನ್ನು ಪೊಲೀಸರು ಹಿಡಿದು ಹೆಡೆಮುರಿಕಟ್ಟಿದ್ದಾರೆ. ರೌಡಿಗಳ ಪುಂಡಾಟವನ್ನು ನೋಡಿದ ಟ್ರಾಫಿಕ್ ಪೊಲೀಸರ ಪುಂಡರನ್ನು ಹಿಡಿದು ಜೈಲಿಗಟ್ಟಲು ಸಹಾಯ ಮಾಡಿದ್ದಾರೆ. ಉಪ್ಪಾರಪೇಟೆ ಟ್ರಾಫಿಕ್  ಪೊಲೀಸರ ಸಮಯಪ್ರಜ್ಞೆಯಿಂದ ಸುಲಿಗೆ ಯತ್ನ ತಪ್ಪಿದೆ. ಲಾಂಗ್, ಡ್ರಾಗರ್ ಹಿಡಿದು ದ್ವಿಚಕ್ರ ವಾಹನ ಸವಾರರ ಸುಲಿಗೆ ಮಾಡುತ್ತಿದ್ದರು.

ಕೆರೆಯಲ್ಲಿ ಅಣ್ಣನ ಮಗ ಬಿದ್ದನೆಂದು ರಕ್ಷಿಸಲು ಹೋದ ಚಿಕ್ಕಪ್ಪನೂ ಸಾವು

ಡ್ರ್ಯಾಗರ್‌, ಲಾಂಗ್‌ ಬೀಸುತ್ತಿದ್ದ ರೌಡಿಗಳು: ಗುರುವಾರ ಬೆಳಗ್ಗೆ 8:15 ರ ವೇಳೆಗೆ ಪ್ಯಾಲೇಸ್ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಉಪ್ಪಾರಪೇಟೆಯ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು, ಅವರ ಮೇಲೆ ಹಲ್ಲೆ ನಡೆಸಿ 10 ಸಾವಿರ ದೋಚಿದ್ದರು. ಈ ಘಟನೆಯ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಉಪ್ಪಾರಪೇಟೆ ಸಂಚಾರಿ ಠಾಣೆಯ ASI ರವೀಂದ್ರ ಹಾಗೂ ಹೆಡ್‌ ಕಾನ್ಸ್ಟೇಬಲ್ ಲಕ್ಷ್ಮಣಯ್ಯ ಮತ್ತು ಕಾನ್ಸ್‌ಟೇಬಲ್ ಮರಿಸ್ವಾಮಿ ಸೇರಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಹಿಡಿದಿದ್ದಾರೆ. ಅವರು ತಪ್ಪಿಸಿಕೊಂಡು ಓಡುವಾಗ ಸಾರ್ವಜನಿಕರ ಸಹಕಾರದಿಂದ ಪ್ಯಾಲೇಸ್ ರಸ್ತೆಯಲ್ಲಿ ಹಿಡಿದು ವಶಕ್ಕೆ ಪಡೆದು ಲಾಕ್ ಮಾಡಿದ್ದಾರೆ. ವಶಕ್ಕೆ ಪಡೆದ ಆರೋಪಿಗಳಿಬ್ಬರಿಂದ ಲಾಂಗ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ. ಬಳಿಕ ಹಲಸೂರು ಗೇಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.

click me!