ಮೂರು ತಿಂಗಳ ಹಿಂದೆ ನಡೆದಿದ್ದ ಬೆಂಗಳೂರು ನಗರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ದಕ್ಷಿಣ ವಿಭಾಗದ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.
ಬೆಂಗಳೂರು (ಫೆ.4): ಮೂರು ತಿಂಗಳ ಹಿಂದೆ ನಡೆದಿದ್ದ ಬೆಂಗಳೂರು ನಗರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ದಕ್ಷಿಣ ವಿಭಾಗದ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.
ಹಂತಕ ಕಿರಣ್ ವಿರುದ್ಧ ಸಾಕ್ಷ್ಯಾಧಾರಗಳ ಮೂಲಕ ಒಟ್ಟು 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್ ಶೀಟ್ ನಲ್ಲಿ ಕೊಲೆಗೆ ಪೂರಕವಾದ ಸಾಕ್ಷಿ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಕರಣ ಸಂಬಂಧ 70 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ.
undefined
ಎನ್‌ಡಿಎ ಒಕ್ಕೂಟದಲ್ಲಿರೋ ಸುಮಲತಾ ಅವರಿಗೆ ಟಿಕೆಟ್ ಕೇಳೋಕೆ ಆಗುತ್ತಾ: ಪ್ರೀತಮ್ ಗೌಡ ಅಚ್ಚರಿಯ ನಡೆ
ಹಂತಕ ಕಿರಣ್ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಕೊಲೆಗೆ ಸಂಚು ರೂಪಿಸಿದ್ದ. ನ 3ರಂದು ಹತ್ಯೆಗೆ ಸಂಚು ರೂಪಿಸಿದ್ದ ಮತ್ತೆ ನವೆಂಬರ್ 4ರಂದು ಕೊಲೆಗೆ ಸಂಚು ರೂಪಿಸಿ ಮನೆ ಮೇಲೆ ಅವಿತು ಕುಳಿತಿದ್ದ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಂಧರ್ಬಿಕ ಸಾಕ್ಷಿಗಳ ಕಲೆ, ಪೋನ್ ಲೊಕೇಷನ್ ಎವಿಡೆನ್ಸ್, ಸಿಸಿಟಿವಿ ಎವಿಡೆನ್ಸ್ ದಾಖಲು ಮಾಡಲಾಗಿದೆ. ಹಂತಕ ಕಿರಣ್ ಅಧಿಕಾರಿ ಪ್ರತಿಮಾರನ್ನು 8 ನಿಮಿಷದಲ್ಲಿ ಕೊಲೆ ಮಾಡಿದ್ದ. ಮನೆ ಡೋರ್ ಓಪನ್ ಮಾಡುತ್ತಿದ್ದಂತೆ ಹಿಂಬದಿಯಿಂದ ಅಟ್ಯಾಕ್ ಮಾಡಿ ಮೈಮೇಲಿದ್ದ ದುಪ್ಪಟದಿಂದ ಕತ್ತು ಬಿಗಿದು ನಂತರ ಚಾಕುವಿನಿಂದ ಕತ್ತುಕೊಯ್ದು ಕೊಲೆ ಮಾಡಿದ್ದ. ಮಾತ್ರವಲ್ಲ ಮೈಮೇಲಿದ್ದ ಬಳೆ, ಬ್ರಾಸ್ಲೈಟ್ ಮೂಗುತಿ, ಕಬೋರ್ಡ್ ನಲ್ಲಿದ್ದ ಐದು ಲಕ್ಷ ಹಣದೊಂದಿಗೆ ದೋಚಿ ಪರಾರಿಯಾಗಿದ್ದ.
ಸ್ನೇಹಿತನಿಗೆ ಹಣ ಕೊಟ್ಟು ಮತ್ತಿಬ್ಬರ ಜೊತೆ ಮಲೈಮಹದೇಶ್ವರ ಬೆಟ್ಟಕ್ಕೆ ಪರಾರಿಯಾಗಿದ್ದ, ಲೊಕೇಶನ್ ಟ್ರ್ಯಾಪ್ ಮೂಲಕ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಇವೆಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿರುವ ಪೊಲೀಸರು ಒಟ್ಟು 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಅಂಬಾನಿ ಮಾಸ್ಟರ್ ಪ್ಲಾನ್, ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್ ಪ್ರೇಮ್ ಗೆ ದೊಡ್ಡ ಅಘಾತ
ದೊಡ್ಡಕಲ್ಲಸಂದ್ರದ ತಮ್ಮ ಮನೆಯಲ್ಲಿ ನ.4 ರಂದು ರಾತ್ರಿ ಭೂ ವಿಜ್ಞಾನಿ ಪ್ರತಿಮಾ ಕೊಲೆಗೀಡಾಗಿದ್ದರು. ಈ ಕೃತ್ಯದಲ್ಲಿ ಅವರ ಮಾಜಿ ಕಾರು ಚಾಲಕ ಕಿರಣ್ ಬಂಧನವಾಗಿತ್ತು. ಮೊದಲು ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದ ಸಿಟ್ಟಿಗೆ ಪ್ರತಿಮಾ ಅವರನ್ನು ಕಿರಣ್ ಹತ್ಯೆ ಮಾಡಿದ್ದ ಎನ್ನಲಾಗಿತ್ತು. ಬಳಿಕ ಪೊಲೀಸರು ತನಿಖೆ ಮುಂದುವರೆಸಿದಾಗ ಪ್ರತಿಮಾ ಅವರನ್ನು ಹತ್ಯೆಗೈದ ಬಳಿಕ ₹5 ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ಆರೋಪಿ ದೋಚಿದ್ದ ಸಂಗತಿ ಬಯಲಾಗಿತ್ತು. ಹೀಗಾಗಿ ಹಣಕ್ಕಾಗಿಯೇ ಪ್ರತಿಮಾ ಅವರನ್ನು ಕಿರಣ್ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದರು.
ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಎರಡು ತಿಂಗಳ ತನಿಖೆಗೆ ನಡೆಸಿದ ಪೊಲೀಸರು, ಕೃತ್ಯ ಸಂಬಂಧ ಮೃತ ಪ್ರತಿಮಾ ಕುಟುಂಬದವರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಅಲ್ಲದೆ ಆರೋಪಿ ಕಿರಣ್ ಕುರಿತು ಸಹ ಸಾಕಷ್ಟು ಪುರಾವೆ ಕಲೆ ಹಾಕಿದ್ದಾರೆ.