ಪತ್ನಿಯನ್ನು ಕೊಂದ ಪತಿ ಬಳಿಕ ಆಕೆಯ ಶವವನ್ನು ತನ್ನ ಕಾಲ ಮೇಲಿಟ್ಟಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾನೆ. ಈ ಚಿತ್ರವನ್ನು ಅವರ ಸಂಬಂಧಿಕರಿಗೆ ಕಳಿಸಿದ ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ನವದೆಹಲಿ (ಮ.18): ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಂಕುರ್ ವಿಹಾರ್ ಪ್ರದೇಶದಲ್ಲಿ ದಾರುಣ ಘಟನೆ ನಡೆದಿದೆ. ವೇಲ್ ಮೂಲಕ ಪತ್ನಿಯನ್ನು ಸಾಯಿಸಿದ ಪತಿ ಬಳಿಕ, ಆಕೆಯ ಮೃತದೇಹವನ್ನು ತನ್ನ ಕಾಲ ಮೇಲೆ ಇಟ್ಟುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾನೆ. ಬಳಿಕ ಈ ಚಿತ್ರವನ್ನು ಆಕೆಯ ಎಲ್ಲಾ ಸಂಬಂಧಿಕರಿಗೆ ಕಳಿಸಿದ್ದಾರೆ. ಈ ಚಿತ್ರವನ್ನು ನೋಡಿದ ಸಂಬಂಧಿಕರಿಗೆ ಮೊದಲು ಏನೂ ಅರ್ಥವಾಗಲಿಲ್ಲ. ಕೊನೆಗೆ ಈತ ಪತ್ನಿಯನ್ನು ಸಾಯಿಸಿ ಸೆಲ್ಫಿ ತೆಗೆದುಕೊಂಡಿದ್ದಾನೆ ಎನ್ನವುದು ತಿಳಿದ ಬಳಿಕ ಮನೆಗೆ ಬಂದು ನೋಡಿದ್ದಾರೆ. ಈ ವೇಳೆ ಆತ, ಪತ್ನಿಯನ್ನು ಕೊಂದ ವೇಲ್‌ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ತನ್ನ ಕೆಲಸದ ಕಾರಣದಿಂದಾಗಿ ತನ್ನೊಂದಿಗೆ ಸಂಸಾರ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಸಿಟ್ಟಾಗಿದ್ದ ಪತಿ ಆಕೆಯನ್ನು ಸಾಯಿಸಿದ್ದಾನೆ ಎನ್ನಲಾಹಿದೆ. ಅಂಕುರ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರ್ ವಿಹಾರದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಶ್ಯಾಮ್ ಗೋಸ್ವಾಮಿ ಅಂಕುರ್ ವಿಹಾರದಲ್ಲಿ ವಾಸಿಸುತ್ತಿದ್ದರು. ಇಟಾದ ನಿವಾಸಿ ಶ್ಯಾಮ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶ್ಯಾಮ್ ಪತ್ನಿ ಪ್ರಿಯಾ ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದರು.
ಪತ್ನಿಯ ಮೃತದೇಹದ ತಲೆಯನ್ನು ಕಾಲ ಮೇಲೆ ಇಟ್ಟುಕೊಂಡು ಶ್ಯಾಮ್ ಸೆಲ್ಫಿ ತೆಗೆದುಕೊಂಡಿದ್ದ. ಇದೇ ಚಿತ್ರವನ್ನು ಆತ ತನ್ನ ಹಾಗೂ ಆಕೆಯ ಎಲ್ಲಾ ಸಂಬಂಧಿಕರಿಗೆ ಕಳಿಸಿದ್ದ. ಈ ಪೋಟೋವನ್ನು ನೋಡಿದ ಬಳಿಕ ಶ್ಯಾಮ್‌ನ ತಮ್ಮ ಪ್ರವೀಣ್ ಅಣ್ಣನ ಮನೆಗೆ ಬಂದಿದ್ದ. ಈ ವೇಳೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ತಕ್ಷಣವೇ ಪ್ರವೀಣ್ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಶ್ಯಾಮ್‌ನ ಪತ್ನಿಯ ಮೃತದೇಹ ಬೆಡ್ ಮೇಲೆ ಬಿದ್ದಿದ್ದರೆ, ಶ್ಯಾಮ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದ.
ತೀರ್ಥದಲ್ಲಿ ನಿದ್ರೆಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ಚಾನೆಲ್ ನಿರೂಪಕಿಯ ರೇಪ್!
ಶ್ಯಾಮ್ ಅವರ ಮೊಬೈಲ್‌ನಿಂದ ಕುಟುಂಬ ಸದಸ್ಯರಿಗೆ ಕಳುಹಿಸಿದ್ದ ಫೋಟೋ ಕೂಡ ಪೊಲೀಸರಿಗೆ ಸಿಕ್ಕಿದೆ. ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದರು. ಶ್ಯಾಮ್ ಗೆ ಹೆಂಡತಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಪೊಲೀಸರು ಎರಡೂ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮದರಸಾದಲ್ಲಿ ಬಾಲ್ ಅಂದ್ಕೊಂಡು ಬಾಂಬ್ ಎತ್ತಿಕೊಂಡ ವಿದ್ಯಾರ್ಥಿ, ಬ್ಲಾಸ್ಟ್‌ನಲ್ಲಿ ಸಾವು ಕಂಡ ಮೌಲ್ವಿ!