ಚೆಲ್ಲಿದ ರಕ್ತ; ರೈ, ಬನ್ನಂಜೆ ರಾಜ, ರವಿ ಪೂಜಾರಿ ಆಪ್ತನಾಗಿದ್ದ ಮನೀಶ್ ಶೆಟ್ಟಿಗೆ ಗುಂಡಿಟ್ಟರು!

By Suvarna NewsFirst Published Oct 16, 2020, 12:05 AM IST
Highlights

ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು/ ಬಾರ್ ಮಾಲೀಕನ ಹತ್ಯೆ/ ದ್ವಿಚಕ್ರ ವಾಹನದಲ್ಲಿ ಬಂದು ಶೂಟ್ ಮಾಡಿದರು/ ಭೂಗತ ಜಗತ್ತಿನ ಲಿಂಕ್ ಹೊಂದಿದ್ದ ಮನೀಶ್ ಶೆಟ್ಟಿ ಹತ್ಯೆ

ಬೆಂಗಳೂರು(ಅ. 15) ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದಾಗಿದೆ.. ಡುಯಟ್  ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ  ಗುರುವಾರ ರಾತ್ರಿ  ಘಟನೆ ನಡೆದಿದೆ. ಬೈಕ್​ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಡಬಲ್ ಬ್ಯಾರಲ್ ಗನ್​ನಿಂದ 45 ವರ್ಷದ ಮನೀಶ್ ಶೆಟ್ಟಿಯ ಮೇಲೆ ಗುಂಡಿನ ದಾಳಿ ಮಾಡಿದ್ದು ಅಲ್ಲದೆ ಚಾಕುವಿನಿಂದಲೂ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಮನೀಶ್​ನನ್ನು ಕೂಡಲೇ ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿಗೆ ಭೂಗತ ಜಗತ್ತಿನ ಪರಿಚಯ ಇತ್ತು. ಮಂಗಳೂರು, ಬಾಂಬೆಯಲ್ಲಿ ಶೆಟ್ಟಿ ವಿರುದ್ಧ ಹಲವು ಪ್ರಕರಣಗಳು ಇವೆ. ಬನ್ನಂಜೆ ರಾಜ, ರವಿ ಪೂಜಾರಿ ಆಪ್ತನಾಗಿಯೂ ಶೆಟ್ಟಿ ಗುರುತಿಸಿಕೊಂಡಿದ್ದ. 

ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ;  ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ್ದ ಬಾಣಸವಾಡಿಯ ಚೆಮ್ಮನೂರು ಜುವೆಲರಿ ಮಳಿಗೆಯ ರಾಬರಿ ಪ್ರಕರಣದಲ್ಲಿ ಮನೀಶ್ ಶೆಟ್ಟಿ ಪ್ರಮುಖ ಆರೋಪಿ. ದುಷ್ಕರ್ಮಿಗಳು ತಮ್ಮ ಡಿಯೋ ಬೈಕ್ ಮತ್ತು ರಿವಾಲ್ವರ್ ಅನ್ನು ದೂರದಲ್ಲಿ ಎಸೆದು ಹೋಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೃಷ್ಣನದಿಯಲ್ಲಿ ತೇಲಿಬಂದ ಶವದ ಕಿಸೆಯಲ್ಲಿ ಕೆಜಿಗಟ್ಟಲೆ ಚಿನ್ನ

ಕೃತ್ಯ ಎಸಗಿದವರು  ಮಂಗಳೂರಿನ ಕಡೆಯವರು ಎಂಬ ಮಾಹಿತಿ ಸಿಕ್ಕಿದೆ. ಸೆಂಟ್ರಲ್ ಡಿಸಿಪಿ‌ ನೇತ್ರತ್ವದಲ್ಲಿ ಆರೋಪಿಗಳ ಪತ್ತೆಗೆ ‌ಟೀಮ್ ರಚನೆ ಮಾಡಲಾಗಿದೆ. ಮನೀಶ್ 2010ರ ಜೂನ್ 25 ರಂದು ಕಾಸರಗೋಡಿನ ಬೇವಿಂಜೆಯ ಕಾಂಟ್ರಾಕ್ಟರ್ ಮಹಮ್ಮದ್ ಕುಂಜ್ಞಿ ಎಂಬುವರ ಮನೆಗೆ ಗುಂಡು ಹಾರಿಸಿದ್ದ ಆರೋಪವನ್ನು ಹೊತ್ತಿದ್ದ. ದಾವೂದ್ ಇಬ್ರಾಹಿಂ ಈ ಮಹಮ್ಮದ್ ಕುಂಜ್ಞಿಗೆ  50 ಕೋಟಿ ಮೌಲ್ಯದ ಚಿನ್ನಾಭರಣ ಕಳಿಸಿದ್ದ ಎಂಬ ಆರೋಪವಿತ್ತು.

ಮನೀಶ್ ಶೆಟ್ಟಿಯ ಮೊದಲ ಗಾಡ್ ಫಾದರ್ ಮುತ್ತಪ್ಪ ರೈ ; ಮೊದಲು ಮುತ್ತಪ್ಪ ರೈ ಜತೆ ಗುರುತಿಸಿಕೊಂಡಿದ್ದ ಮನೀಶ್ ನಂತರ  ಬನ್ನಂಜೆ ರಾಜನ ಗುಂಪು ಸೇರಿದ್ದ. ಇದಾದ ಮೇಲೆ ಕೆಲ ಭೂಗತ ಚಟುವಟಿಕೆಗಳನ್ನು ಸ್ವಯಂ ನಿರ್ವಹಣೆ ಮಾಡುತ್ತಿದ್ದ ಎಂದು ಹೇಳಲಾಗಿದೆ. 

click me!