ಜಾಮೂನು ಕೊಡಿಸುತ್ತೇವೆ ಎಂದು ನಂಬಿಸಿ ಅತ್ಯಾಚಾರ ಎಸಗಿದ ದುರುಳರು

By Suvarna News  |  First Published May 25, 2021, 4:52 PM IST

* ಜಾಮೂನು ಕೊಡಿಸುತ್ತೇವೆ  ಎಂದು ನಂಬಿಸಿ ಬಾಲಕಿಯ ಮೇಲೆ ಅತ್ಯಾಚಾರ
* ನೆರಮನೆಯ ಅಪ್ರಾಪ್ತನಿಂದಲೇ ದುಷ್ಟ ಕೃತ್ಯ
* ತಿಂಡಿ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು  ಹೋದರು


ಆಗ್ರಾ(ಮೇ. 25)  ಜಾಮೂನ್ ಕೊಡಿಸುತ್ತೇವೆ ಎಂದು ಬಾಲಕಿಯನ್ನು ನಂಬಿಸಿ ಕರೆದುಕೊಂಡು ಹೋದ ದುರುಳರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.  ಉತ್ತರ ಪ್ರದೇಶದ ಆಗ್ರಾದಿಂದ ಕರಾಳ ಘಟನೆ ವರದಿಯಾಗಿದ. ಪ್ರಕರಣದ ಬಗ್ಗೆ ಎಲ್ಲಿಯೂ ಬಾಯಿ ಬಿಡಬಾರದು, ಪೊಲೀಸರಿಗೆ ತಿಳಿಸಬಾರದು ಎಂದು 13 ವರ್ಷದ ಬಾಲಕಿಗೆ ಆರೋಪಿಯ  ಹಿರಿಯ ಸಹೋದರ ಬೆದರಿಕೆ ಹಾಕಿದ್ದ.

ಆಗ್ರಾದ ಶಮ್‌ಶಾಬಾದ್ ಗ್ರಾಮದಲ್ಲಿ ಶುಕ್ರವಾರ ಘೋರ ಪ್ರಕರಣ ನಡೆದಿದೆ.  ಬಾಲಕಿಯ ಪಾಲಕರು ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸಮಯದಲ್ಲಿ ದುರುಳರು ಮನೆಗೆ ಬಂದಿದ್ದಾರೆ.13 ವರ್ಷದ ಬಾಲಕ ಮತ್ತು 22 ವರ್ಷ ವಯಸ್ಸಿನ ಯುವಕ ಬಾಲಕಿಯನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

Latest Videos

undefined

ಹೆಡ್ ಮಸಾಜ್ ನೆಪದಲ್ಲಿ ಗೆಳಯನ ಪತ್ನಿ ಮೇಲೆ ಅತ್ಯಾಚಾರ

ಆರೋಪಿ 13 ಬಾಲಕ ಬಾಲಕಿಯ ನೆರೆಮನೆಯವ.  22 ವರ್ಷದ ಆರೋಪಿ ಸಂಜುಗೆ ಕೂಡ ಬರಲು ಹೇಳಿದ್ದ.  ಬಾಲಕ ಬಾಲಕಿಯನ್ನು ಕರೆದುಕೊಂಡು ಹೋದಾಗ ಇನ್ನೊಬ್ಬ ಆರೋಪಿ ಸ್ಥಳದಲ್ಲಿದ್ದ.

ಪ್ರಕರಣದ ನಂತರ ವಿಷಯ ಎಲ್ಲಿಯೂ ಗೊತ್ತಾಗಬಾರದು. ಗೊತ್ತು ಮಾಡಿದರೆ ಕೊಲೆ ಮಾಡುತ್ತೇವೆ ಎಂದು ಸಂಜುನ ಅಣ್ಣ ಮುನ್ನಾ ಬೆದರಿಕೆ ಹಾಕಿದ್ದ.  ಕೊರೋನಾ ದುರಂತ ಕಾಲದ ನಡುವೆಯೂ ಉತ್ತರ ಪ್ರದೇಶ ಮತ್ತು  ರಾಜಸ್ಥಾನದಿಂದ ಮಹಿಳೆಯ ಮೇಲೆ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಲೆ ಇವೆ .

click me!